ಅಂಬಾದೇವಿ ದೇವಸ್ಥಾನಕ್ಕೆ 4.30 ಎಕರೆ ಭೂಮಿ: ನಾಡಗೌಡ.
ಸಿಂಧನೂರು: ಜುಲೈ .23. ಸುಪ್ರಸಿದ್ದ ಸಿದ್ದ ಪರ್ವತ ಬಗಳಾಂಬಿಕೆ ಅಂಬಾದೇವಿ ದೇವಸ್ಥಾನಕ್ಕೆ 4 ಎಕರೆ 30 ಗುಂಟೆ ಜಮಿನನ್ನು ಸರಕಾರ ಮಂಜೂರು ಮಾಡಿ ಆದೇಶ ಹೊರಡಿಸಿದೆ ಎಂದು ಮಾಜಿ ಮಂತ್ರಿ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ತಾಲೂಕಿನ ಸೋಮಲಾಪುರ ಗ್ರಾ.ಪಂ ವ್ಯಾಪ್ತಿಗೆ ಬರುವ ಅಂಬಾಮಠದ ಅಂಬಾದೇವಿ ದೇವಸ್ಥಾನಕ್ಕೆ ಸರ್ವೇ ನಂ 163 ರಲ್ಲಿ 47 ಎಕರೆ 11 ಗುಂಟೆ ಸರಕಾರಿ ಜಮೀನು ಇದ್ದು, ಇದರಲ್ಲಿ 4 ಎಕರೆ 30 ಗುಂಟೆ ಜಮೀನನ್ನು ದೇವಸ್ಥಾನದ ಹೆಸರಿಗೆ ಮಂಜೂರು ಮಾಡುವಂತೆ ಶಾಸಕ ವೆಂಕಟರಾವ್ ನಾಡಗೌಡ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.
ಶಾಸಕರ ಮನವಿ ಮೇರೆಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳ 1969 ರ ನಿಯಮ 22 (ಎ)(3)(ಐ)ಅನ್ವಯ ಧಾರ್ಮಿಕ ದತ್ತಿ ಇಲಾಖೆ ಭೂಮಿ ಮಂಜೂರಾತಿ ಮಾಡಿ ಆದೇಶ ಹೊರಡಿಸಿದೆ.ಈ ಹೆಚ್ಚುವರಿ ಭೂಮಿಯಿಂದ ವಿಶಾಲ ಹಾಗೂ ಸುಂದರವಾದ ವಿನ್ಯಾಸದೊಂದಿಗೆ ಅಂಬಾದೇವಿ ಗುಡಿ ನಿರ್ಮಾಣ ಮಾಡಲು ಸಹಾಯ ಮಾಡಿದಂತಾಗುತ್ತದೆ ಎಂದು ಶಾಸಕರು ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
