ಅಪರಾಧ ತಡೆಗೆ ಪೋಲಿಸ್ ಜೊತೆ ಯುವಕರು ಕೈಜೋಡಿಸಿ- ಸಿಪಿಐ ಕಾಂಬ್ಳೆ.
ಸಿಂಧನೂರು : ಅಪರಾಧ ಚಟುವಟಿಕೆಗಳನ್ನು ತಡೆಯಲು ಹಾಗೂ ಜನರು ನೆಮ್ಮದಿಯಿಂದ ಜೀವನ ನಡೆಸಲು, ಶಾಂತಿ ಸಾಮರಸ್ಯದಿಂದ ಬದುಕಲು ಪೊಲೀಸರ ಕರ್ತವ್ಯದ ಜೊತೆಗೆ ಯುವಕರು ಕೈ ಜೋಡಿಸಿದಾಗ ಮಾತ್ರ ಸಾದ್ಯ ಎಂದು ಸಿಪಿಐ ಉಮೇಶ ಕಾಂಬಳೆ ಯುವಕರಿಗೆ ಕಿವಿಮಾತು ಹೇಳಿದರು.
ನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಸೇವೆಯಲ್ಲಿ ಕಾರ್ಯಚಟುವಟಿಕೆ ಮಾಡುವ ಯುವಕ ಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ 3 ಲಕ್ಷ 98 ಸಾವಿರ ಜನಸಂಖ್ಯೆ ಹೊಂದಿದ್ದು 1 ಡಿವೈಎಸ್ಪಿ , 1 ಸಿಪಿಐ , 5 ಪಿಎಸ್ಐ , 200 ಜನ ಪೊಲೀಸ್ ಸಿಬ್ಬಂದಿಗಳು ಜನರ ಪ್ರಾಣಹಾನಿ,ಮಾನಹಾನಿ, ಕಾಪಾಡುವ ಜೊತೆಗೆ ಶಾಂತಿ, ಸಹಬಾಳ್ವೆ, ಕೋಮು ಸೌಹಾರ್ದತೆ ಕದಡದಂತೆ ಪೊಲೀಸರು ನೋಡಿಕೊಳ್ಳಬೇಕಾಗಿದೆ. ಪೊಲೀಸರ ಜೊತೆಗೆ ಯುವಕರು ಕೈ ಜೋಡಿಸಿದಾಗ ಮಾತ್ರ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಸಾದ್ಯ ಹಾಗಾಗಿ ಯುವಕರು ಪೊಲೀಸ್ ಇಲಾಖೆ ಜೊತೆ ಕೈ ಜೋಡಿಸಬೇಕು ಎಂದರು.
ಶಾಲಾ ವಾಹನ ಚಾಲಕರು, ಆಟೋ ಚಾಲಕರು, ಸಾರಿಗೆ ಇಲಾಖೆ,ಆಂಬುಲೆನ್ಸ್ ಬಗ್ಗೆ ವಾಹನಗಳ ಇನ್ಸುರೆನ್ಸ್ ಸೇರಿದಂತೆ ಈ ವರ್ಷ ಸುಮಾರು 18 ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ.

ನಗರದಲ್ಲಿ ಪೊಲೀಸ್ ಇಲಾಖೆಯಿಂದ 80 ಲಕ್ಷ ರೂಪಾಯಿಗಳ 75 ಸ್ಥಳದಲ್ಲಿ 168 ಸಿಸಿಟಿವಿಗಳನ್ನು ಅಳವಡಿಸುವ ಸಲುವಾಗಿ ಅನುಮೋದನೆಗಾಗಿ ಕಳುಹಿಸಲಾಗಿದ್ದು, ಮಂಜೂರಾತಿ ದೊರೆತ ನಂತರ ಅಳವಡಿಸಲಾಗುವುದು.ಈಗಾಗಲೇಸಾರ್ವಜನಿಕರು ಮನವಿ ಮಾಡಿಕೊಂಡ ಮೇಲೆ ಇಲಾಖೆಯಿಂದ 200 ಕ್ಕಿಂತ ಹೆಚ್ಚು ಜನಸಂಖ್ಯೆ ಸೇರುವಲ್ಲಿ 300 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಮಾಡುವ ಸಕ್ರಿಯ ಯುವಕರ ಹೆಸರು ಮತ್ತು ಮೊಬೈಲ್ ನಂಬರ್ ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ಯುವಕರ ಸಾಮಾಜಿಕ ಜಾಲತಾಣಗಳ ಗ್ರೂಪ್ ಮಾಡಲಾಗಿದ್ದು, ಎಲ್ಲಿಯಾದರೂ ಅಹಿತಕರ ಘಟನೆ ಹಾಗೂ ಕಳ್ಳತನ ನಡೆದ ಬಗ್ಗೆ ಗ್ರೂಪ್ ನಲ್ಲಿ ಮಾಹಿತಿ ಹಾಕುವ ಮೂಲಕ ಪೊಲೀಸರಿಗೆ ಸಹಾಯ ಮಾಡಬೇಕು. ಮಾಹಿತಿಯನ್ನು ನೀಡಿದ ಯುವಕರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.

ಪೊಲೀಸ್ ಇಲಾಖೆಯಿಂದ ಈ ವರ್ಷದಲ್ಲಿ 200 ವಾಹನಗಳಿಗೆ ಇನ್ಸುರೆನ್ಸ್ ಮಾಡಿಸಲಾಗಿದೆ. ಭಿಕ್ಷಾಟನೆ ಹಾಗೂ ಮರಳಿನ ಸಾಗಾಣಿಕೆ ಬಂಡಿಗಳನ್ನು ಕಡಿವಾಣ ಹಾಕಲಾಗುವುದು. ಅಪರಾಧ ಚಟುವಟಿಕೆ ತಡೆಗಟ್ಟಲು ಸಾರ್ವಜನಿಕರು ತಮ್ಮ ಅಂಗಡಿ ,ಮನೆಗಳ ಮುಂದೆ ಸಿಸಿಟಿವಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಿಪಿಐ ಉಮೇಶ ಕಾಂಬ್ಳೆ ಮನವಿ ಮಾಡಿಕೊಂಡರು.
ಗ್ರಾಮೀಣ ಠಾಣೆಯ ಪಿಎಸೈ ಯರಿಯಪ್ಪ, ಸಂಚಾರಿ ಠಾಣೆಯ ಪಿಎಸೈ ಬಸವರಾಜ, ನಗರ ಸಭೆ ಸದಸ್ಯ ಚಂದ್ರು ಮೈಲಾರ, ಆರ್.ಅಂಬ್ರೂಸ್, ರಾಮಕೃಷ್ಣ ಭಜಂತ್ರಿ, ರಾಜು ಅಡವಿಭಾವಿ, ಗಂಗಣ್ಣ ಡಿಶ್, ರಮೇಶ ಕುನ್ನಟಗಿ,ವೀರೇಶ ಭಾವಿಮನಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ಇನ್ನಿತರ ಯುವಕರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
