ಕುಡಿಯುವ ನೀರಿಗಾಗಿ ಮಹಿಳೆಯರು ಕೊಡ ತಗೊಂಡು ಪ್ರತಿಭಟನೆ.
ಸಿಂಧನೂರು : ಜೂನ್ 23.ತಾಲೂಕಿನ ವಿರುಪಾಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲದಗುಡ್ಡ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿಲ್ಲದೆ ಜನರು ತತ್ತರಿಸಿ ಹೋಗಿದ್ದಾರೆ. ಕುಡಿಯುವ ನೀರಿಗಾಗಿ ಕೊಡ ಹಿಡಿದುಕೊಂಡು ನಮಗೆ ನೀರು ಕೊಡಿ ಎಂದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮದ ಮಹಿಳೆಯರೆಲ್ಲಾ ಸೇರಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಕೂಗಿಗೆ ಅಧಿಕಾರಿಗಳು ಯಾರು ಸ್ಪಂದಿಸುವ ಕೆಲಸ ಮಾಡುತ್ತಿಲ್ಲ , ಕಿಲೋ ಮೀಟರ್ ದೂರದಿಂದ ಚಕ್ಕಡಿಯಲ್ಲಿ ತಳ್ಳಿಕೊಂಡು ನೀರು ತರಬೇಕು, ಗ್ರಾಮದಲ್ಲಿ ನೀರಿನ ಹಾಹಾಕಾರ ಇದ್ರು ಸಹ ಸಮಸ್ಯೆಯನ್ನು ಬಗೆಹರಿಸುವ ಯೋಚನೆ ಮಾಡುತ್ತಿಲ್ಲ. ಪ್ರತಿನಿತ್ಯವೂ ಗಂಟೆ ಗಟ್ಟಲೇ ಕಾದುಕುಳಿತು ನೀರು ತರುವ ಪರಿಸ್ಥಿತಿ ನಮ್ಮದು ದುಡಿಯುವ ಜನರಿಗೆ ದುಡಿಮೆ ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಪಂಚಾಯತ್ ಪಿಡಿಓ ಅವರಿಗೆ ಮಾಹಿತಿ ನೀಡಿದ್ರು ನಾಳೆ ನಾಡಿದ್ದು ಎಂದು ಉತ್ತರ ನೀಡುತ್ತಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ ತನವೋ, ವಾಟರ್ ಮ್ಯಾನ್ ಗಳ ಒಳ ಜಗಳದಿಂದ ಅಥವಾ ಜನ ಪ್ರತಿನಿಧಿಗಳ ನಿಷ್ಕ ಕಾಳಜಿಯೋ ಗೊತ್ತಿಲ್ಲ ಆದ್ರೆ ಬಡಪಾಯಿಗಳು ಗೋಳು ಕೇಳುತ್ತಿಲ್ಲ.ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಕುಡಿಯುವ ನೀರಿನ ವಿಷಯದಲ್ಲಿ ಆಡಳಿತ ವರ್ಗ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಹಲವಾರು ಗ್ರಾಮಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಕೂಡಲೇ ಜನರಿಗೆ ನೀರಿನ ದಾಹಾ ನಿಗಿಸುವ ಕೆಲಸ ಮಾಡಲಿ ಎನ್ನುವುದು ಜನರ ಒತ್ತಾಯವಾಗಿದೆ…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
