;

ಅನಧಿಕೃತವಾಗಿ ನಿರ್ಮಿಸಿದ ಶೆಡ್ಡಗಳನ್ನು ತೆರವುಗೊಳಿಸಿದ ತಾಲ್ಲೂಕಾಡಳಿತ…!!!

ಅನಧಿಕೃತವಾಗಿ ನಿರ್ಮಿಸಿದ ಶೆಡ್ಡಗಳನ್ನು ತೆರವುಗೊಳಿಸಿದ ತಾಲ್ಲೂಕಾಡಳಿತ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಸಮೀಪದ ಢವಳೇಶ್ವರ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಮಿಸಲು ಇಟ್ಟಿದ್ದ ಖಾಲಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಶೆಡ್ಡಗಳ ತಾಲ್ಲೂಕಾಡಳಿತ ಸಂಪೂರ್ಣವಾಗಿ ತೆರವುಗೊಳಿಸಿದೆ.


ಪ್ರತಿಯೊಂದು ಶೆಡ್ಡಗಳನ್ನು ಅಧಿಕೃತವಾಗಿ ನಿರ್ಮಿಸಿದ ಕಾರಣ ತಾಲ್ಲೂಕಾಡಳಿತ ಯಾವುದೇ ನೋಟಿಸ್ ಇಲ್ಲದೆ ತೆರವುಗೊಳಿಸಿದ್ದು ನಿರಾಶ್ರಿತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು ವರ್ಷಗಳಿಂದ ಮತ್ತು ಪ್ರವಾಹ ಪರಿಸ್ಥಿತಿಯ ಉಂಟಾದಾಗ ಬಡ ಕುಟುಂಬಗಳು,ಕೂಲಿ ಕಾರ್ಮಿಕರು,ಪ್ರವಾಹಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡ ನಿರಾಶ್ರಿತರು ಮನೆಗಳನ್ನು ನಿರ್ಮಿಸಿಕೊಂಡು ವಾಸ
ಮಾಡುತ್ತಿದ್ದ ಜನ ಸದ್ಯ ತೆರವುಗೊಳಿಸಿದ್ದರಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿ ಜನ ಜಾನುವಾರು ತೆಗೆದುಕೊಂಡು ಬೀದಿಗೆ ಬರುವಂತಾಗಿದೆ. ಆಕ್ರೋಶಭರಿತ ಜನ ತಮಗೆ ಉಳಿದುಕೊಳ್ಳಲು ಬೇರೆ ಜಾಗ ಇಲ್ಲವೆಂದು ತಾತ್ಕಾಲಿಕವಾಗಿ ವಸತಿ ವ್ಯವಸ್ಥೆ ಮಾಡಿ ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;