ಜೈಭೀಮ್ ಘರ್ಜನೆ ಸಂಘಟನೆ ತಾಲೂಕು ಉಪಾಧ್ಯಕ್ಷರಾಗಿ ಚಂದ್ರಶೇಖರ ಸಿದ್ರಾಂಪುರ ಆಯ್ಕೆ.
ಸಿಂಧನೂರು : ಜೂನ್ 13.ಜೈ ಭೀಮ್ ಘರ್ಜನೆ ಸಂಘ (ರಿ) ತಾಲೂಕು ಸಮಿತಿ ವತಿಯಿಂದ ಪ್ರವಾಸಿ ಮಂದಿರದಲ್ಲಿ ಚಂದ್ರಶೇಖರ ಸಿದ್ರಾಪುರ ಅವರನ್ನು ತಾಲೂಕು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಂಸ್ಥಾಪಕಾಧ್ಯಕ್ಷರಾದ ನೀರುಪಾದಿ ಸಾಸಲಮರಿ ಆದೇಶದ ಮೇರೆಗೆ ನಡೆಯುತ್ತಿರುವ ಸಭೆಯಲ್ಲಿ ತಾಲೂಕಿನ ಮಾವಿನಮಡ್ಗು, ಸಿದ್ರಾಂಪುರ ಗ್ರಾಮದ ಗ್ರಾಮ ಘಟಕ ಮಾಡಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.

ಈ ಸಭೆಯಲ್ಲಿ ಜೈ ಭೀಮ್ ಘರ್ಜನೆ ಅಧ್ಯಕ್ಷರು ನಿರುಪಾದಿ ಸಾಸಲಮರಿ ಮಾತನಾಡಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ನಡೆಸುತ್ತಿದ್ದು, ಯುವಕರನ್ನು ಸಂಘಟಿಸುವ ಉದ್ದೇಶದಿಂದ ನೂತನ ಗ್ರಾಮ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಸಂಘಟನೆಯನ್ನು ಕಟ್ಟಿದ್ದು, ಶೋಷಿತ ಸಮುದಾಯಗಳ ರಕ್ಷಣೆ ನೀಡುವ ಸಲುವಾಗಿ ಎಲ್ಲ ಸಮುದಾಯಗಳ ಶೋಷಿತರ ರಕ್ಷಣೆಗಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹೊನ್ನೂರ್ ಕಟ್ಟಿಮನಿ ಸುಕಲ್ಪೇಟೆ, ಕಾರ್ಯಧ್ಯಕ್ಷರು ವೀರೇಶ್ ಟೈಲರ್ ಬೂದಿವಾಳ ಕ್ಯಾಂಪ್, ಉಪಾಧ್ಯಕ್ಷರು ಸಿದ್ದಪ್ಪ ಸೋಮಲಾಪುರ, ಕಾರ್ಯದರ್ಶಿ ಹೇಮಣ್ಣ ಉಪ್ಪಳ, ಗ್ರಾಮ ಘಟಕದ ಅಧ್ಯಕ್ಷರು ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
