;

ನೂತನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿ ಕಟ್ಟಡ ಉದ್ಘಾಟಸಿದ ಶಾಸಕ ನಾಡಗೌಡ…!!!

ನೂತನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿ ಕಟ್ಟಡ ಉದ್ಘಾಟಸಿದ ಶಾಸಕ ನಾಡಗೌಡ.

ಸಿಂಧನೂರು : ಜೂನ್ 13. ನಗರದ ಶಿವಜ್ಯೋತಿ ಲೇಔಟ್ ನಲ್ಲಿ ಸುಮಾರು 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡವನ್ನು ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಅವರು ಆರ್. ಐ. ಡಿ. ಎಸ್. ಸಿ ಯೋಜನೆಯಡಿಯಲ್ಲಿ ತಾಲೂಕಿನ ಆರ್ ಹೆಚ್ ಕ್ಯಾಂಪಿನಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕ ಹೈಟೆಕ್ ಮಾರುಕಟ್ಟೆ ಕಟ್ಟಡ ನಿರ್ಮಾಣಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಮಯವನ್ನು ಪಡೆದುಕೊಂಡು ಉದ್ಘಾಟನೆ ಮಾಡಲಾಗುವುದು.

ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಮೀನುಗಾರಿಕೆ ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಿಂಧನೂರು, ಸಿರುಗುಪ್ಪ, ಯಾದಗಿರಿ ಜಿಲ್ಲಾ ಸೇರಿದಂತೆ ಮೀನುಗಾರಿಕೆ ಮೂರು ಹೈಟೆಕ್ ಮಾರುಕಟ್ಟೆಯನ್ನುನೀಡಿದ್ದೇನೆ. 4.5. ಕೋಟಿ ರೂ.ಗಳ ವೆಚ್ಚದಲ್ಲಿ 90 ಕೆರೆಗಳು ನಿರ್ಮಾಣ ಮಾಡಲಾಗಿದೆ. ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ಜವಳಗೇರಾದಲ್ಲಿ ಸುಮಾರು 50 ಲಕ್ಷ,ಬೊಮ್ಮನಾಳ ಗ್ರಾಮದಲ್ಲಿ 15 ಲಕ್ಷ, ಚಿರತನಾಳ ಗ್ರಾಮದಲ್ಲಿ 15 ಲಕ್ಷ , ಲಕ್ಷ್ಮಿ ಕ್ಯಾಂಪಿನಲ್ಲಿ 30.00 ಲಕ್ಷ, ಗಾಂಧಿನಗರ ಗ್ರಾಮದಲ್ಲಿ 50.00 ಲಕ್ಷ ರೂ.ಗಳ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು
ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿಗಳನ್ನು ಮುಗಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅವರಿಂದ ಯಾವುದೇ ಕಾಮಗಾರಿ ಬಗ್ಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರು ಬರದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಬಿ.ಹರ್ಷ,ವೆಂಕಟೇಶ ನಂಜಲದಿನ್ನಿ, ನಗರಸಭೆ ಸದಸ್ಯರಾದ ದಾಸರಿ ಸತ್ಯನಾರಾಯಣ, ನಿರುಪಾದಿ ಸುಕಾಲಪೇಟೆ, ಜೆಡಿಎಸ್ ತಾಲೂಕು ಯುವ ಅಧ್ಯಕ್ಷರು ಹಾಗೂ ಕೆ.ಹನುಮೇಶ, ರವಿರೆಡ್ಡಿ, ಲ್ಯಾಂಡ್ ಅರ್ಮಿ ಇಇ ಗೋಕುಲೆ ‌, ಇಂಜಿನಿಯರ್ ಮಾಂತೇಶ್ ಪಾಟೀಲ್, ಆಸೀಪ್, ಕಾಶಿನಾಥ, ಜೆಡಿಎಸ್ ಪಕ್ಷದ ಎಲ್ಲ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಇತರರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;