ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ,, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮ ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಇಂದು ದಿನಾಂಕ 31. 5 .2022ರ ಮಂಗಳವಾರ ಬೆಳಿಗ್ಗೆ ಮಲಿಯಮ್ಮನಕಟ್ಟೆ ಹತ್ತಿರ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ ರೇಣುಕಾಚಾರ್ಯ ಇವರು ಮಾತನಾಡಿ ನರೇಗಾ ಕೂಲಿ ಕಾರ್ಮಿಕರು ತಪ್ಪದೇ ಎಲ್ಲಾರು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಕೆ.ಹಾಲಸ್ವಾಮಿ ರವರು ನರೇಗಾ ಕೂಲಿ ಕಾರ್ಮಿಕರು ತಪ್ಪದೇ ನಿಮ್ಮ ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿವಹಿಸಿ ತಪ್ಪದೇ ಕೂಲಿಕಾರ್ಮಿಕರು ಹೃದಯ ಸಂಬಂಧ ಹಾಗೂ ಬಿಪಿ ಶುಗರ್ ತಪ್ಪದೇ ತಪಾಸಣೆಯನ್ನು ಮಾಡಿಕೊಳ್ಳಬೇಕು ಎಂದು ಸಲಹೆ ಸೂಚನೆ ನೀಡಿದರು, ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಮಾ ಶಿವರಾಜ್ ಮತ್ತು ಗ್ರಾಮಪಂಚಾಯತಿಯ ಬಿಲ್ ಕಲೆಕ್ಟರ್ ಗಳಾದ ಕೆ. ಬಸವರಾಜ್, ಈ ಚಿದಾನಂದ ಮತ್ತು ಕಂಪ್ಯೂಟರ್ ಕಂಪ್ಯೂಟರ್ ಆಪರೇಟರ್ ಜಿ .ಮೃತ್ಯುಂಜಯ ಹಾಗೂ ಗ್ರಾಮಪಂಚಾಯತಿಯ ಸಿಬ್ಬಂದಿಯವರು ಹಾಗೂ , ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮದ ಆಶಾ ಕಾರ್ಯಕರ್ತೆಯರು ಹಾಜರಿದ್ದರು ಬಣವಿಕಲ್ಲು ಗ್ರಾಮದ ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು…

ವರದಿ. ಬಸಪ್ಪ, ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
