ಹರಪನಹಳ್ಳಿ ತಾಲೂಕ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ …
ಹರಪನಹಳ್ಳಿ:ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಾಥಮಿಕ ಅರೊಗ್ಯಾದಿಕರಿಯಾದ ಡಾ.ಪೃಥ್ವಿ ಮತ್ತು ಅಸ್ಪತ್ರೆಯಾ ಸಿಬ್ಬಂದಿಗಳು ಈ ಶಿಭಿರವನ್ನು ನೀಯೊಜಿಸಿದ್ದರು.
ಪ್ರತಿಯೊಬ್ಬರು ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಪಿಡಿಒ ಎಸ್ ಮಂಜುನಾಥ್ ಹೇಳಿದರು.
ವಿಜಯನಗರ: ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರಿಗೆ ನರೇಗಾದಡಿ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ಸೋಮವಾರ ಕೂಲಿಕಾರರಿಗೆ ಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ನರೇಗಾದಡಿ ಈ ಮೊದಲು 289ಕೂಲಿ ಹಣ ಇತ್ತು.
ಈಗ 309ರೂ ಆಗಿದೆ. ಗ್ರಾಮೀಣಾ ಭಾಗದ 18 ಮೇಲ್ಪಟ್ಟ ಪ್ರತಿಯೊಬ್ಬರು ನರೇಗಾ ಯೋಜನೆಯಡಿ ಕೆಲಸ ಮಾಡುವ ಅವಕಾಶವಿದ್ದು, ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಿ .ಹಾಗೆ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಕೂಲಿ ಕಾರ್ಮಿಕರಿಗೆ ಅಭಿವೃದ್ಧಿ ಇಂಜಿನಿಯರ್ ಷಣ್ಮುಖಪ್ಪ
ಇದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಡಾ. ಪೃಥ್ವಿ ಮಾತನಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬ ಕೂಲಿಕಾರರು ಬಿಪಿ, ಸಕ್ಕರೆ ಕಾಯಿಲೆ, ಕ್ಷಯರೋಗ ಇನ್ನಿತರ ಸಣ್ಣಪುಟ್ಟ ಕಾಯಿಲೆಗಳಿದ್ದರೆ ಕಡ್ಡಾಯವಾಗಿ ಕಾಯಿಲೆಗಳಿಗೆ ತಪಾಸಣೆ ಮಾಡಿಸಿ ಪ್ರತಿಯೊಂದು ಸೂಕ್ತವಾದ ಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು
ತಮ್ಮ ಆರೋಗ್ಯವನ್ನು ನಿರ್ಲಕ್ಷಿಸದೆ ಪರೀಕ್ಷೆ ಮಾಡಿಸಿಕೊಂಡು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತೇವೆ ಪ್ರತಿಯೊಬ್ಬರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು. ಕೂಲಿಕಾರರಿಗೆ ಅರೋಗ್ಯದ ಬಗ್ಗೆ ಮಾಹಿತಿ ನೀಡಿ ಬಿಪಿ, ಶುಗರ್ ತಪಾಸಣೆ ನಡೆಸಿ, ಸಣ್ಣ-ಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಿದರು.
ಇಂದು ಒಟ್ಟು ತಪಾಸಣೆ ಮಾಡಿದ ಮಧುಮೇಹ , ಅಧಿಕ ರಕ್ತದೊತ್ತಡ ಹೊಸ ಮಧುಮೇಹ ಕಂಡುಬಂದ ಪ್ರಕರಣಗಳು ಹೊಸ ಅಧಿಕ ರಕ್ತದೊತ್ತಡ . ರೋಗಿಗಳು ಕಂಡುಬಂದರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಿ ಡಿ ಓ ಎಸ್ ಮಂಜುನಾಥ್ ಇಂಜಿನಿಯರ್ ಷಣ್ಮುಖಪ್ಪ ಬಿಎಫ್ ಟಿ ಬಸವರಾಜ್ ಡಿ ಇ ಓ ಸುರೇಶ್ ಕೆಎಂ ದ್ಯಾಮನಗೌಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ನಾಗವೇಣಿ ಉಪಾಧ್ಯಕ್ಷರು ತಿಮ್ಮಕ್ಕ ಗ್ರಾಮ ಪಂಚಾಯಿತಿ ಸದಸ್ಯರು ಎಚ್ ಮಂಜುನಾಥ್ ಸಿ ಎಲ್ಲಮ್ಮ ಶ್ರಾವಣ ಕುಮಾರ್ ಹನುಮಂತಪ್ಪ ಕೋಟೆಪ್ಪ ಮೇಟುಗಳು ಮಂಜುನಾಥ್ ಪ್ರಭು ದಕ್ಷಿಣಾಮೂರ್ತಿ ಇತರೆ ಕಾರ್ಯಕರ್ತರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
