ದಿನಾಂಕ 31:05:2022 ರಂದು ಹರಪನಹಳ್ಳಿ ತಾಲೂಕು ವಿಶ್ವ ತಂಬಾಕು ರಹಿತ ದಿನಾಚರಣೆ ………
ಹರಪನಹಳ್ಳಿ:ಹರಪನಹಳ್ಳಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಹಾಲಸ್ವಾಮಿ ಇವರ ನೇತೃತ್ವದಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ತಾಲೂಕು ಕಾನೂನು ಪ್ರತೀಕಾರ ಹರಪನಹಳ್ಳಿ ಹಾಗೂ ಎಸ್ ಸಿ ಎಸ್ ಫಾರ್ಮಸಿ ಕಾಲೇಜು ಹಾಗೂ ನರ್ಸಿಂಗ್ ಕಾಲೇಜ್ ಸಂಯೋಗ ಸಂಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಪ್ರಯುಕ್ತ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಶ್ರೀಮತಿ ಎಂ ಭಾರತಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಅದ್ಯಕ್ಷರು ಕನೂನು ಸೇವಾ ಸಮಿತಿ ಹರಪನಹಳ್ಳಿ ಇವರು ಹಸಿರು ನಿಶಾನೆ ತೋರಿಸುವುದರ ಮೂಲಕ ಜಾಗೃತಿ ಜಾತಕ್ಕೆ ಚಲನೆ ನೀಡಿದರು.
ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳಿಗೆ ಹೋಗಿ ವ್ಯಾಪಾರಸ್ಥರಿಗೆ ಗುಲಾಬಿ ಹೂಗಳನ್ನು ಕೊಡುವುದರ ಮೂಲಕ ತಂಬಾಕಿನ ಮಾರಾಟದ ಬಗ್ಗೆ ಇರುವಂತಹ ಕೊಟ್ಟ ಯಾಕ್ಟ್ ನಿಯಮಗಳು ಹಾಗೂ ಅದರ ಉಲ್ಲಂಘನೆ ಮಾಡಿದರೆ ಯಾವ ಶಿಕ್ಷೆಗೆ ಒಳಗಾಗುತ್ತಾರೆ ಎಂಬುವುದರ ಬಗ್ಗೆ ವಿವರಿಸಿದರು.
ಹಾಗೂ ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕರ ಎಂದು ಹೇಳುವ ಸರ್ಕಾರವೇ ಬೀಡಿ-ಸಿಗರೇಟ್ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿದ್ದರೆ ನಿಯಂತ್ರಣ ಅಸಾಧ್ಯವೆಂದರು.ತಂಬಾಕು ಉತ್ಪನ್ನಗಳ ಸೇವನೆ ಮಾಡುವವರಿಗೆ ದಂಡ ವಿಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಜನತೆಯಲ್ಲಿ ಅರಿವು ಮೂಡಿಸಲು ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ಮುಂದಾಗಬೇಕೆಂದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುವ ಮೊದಲು ದುಷ್ಪರಿಣಾಮ ಬಗ್ಗೆ ಜನಜಾಗೃತಿ ಮೂಡಿಸಿ ಎಂದು ಅಧಿಕಾರಿ ವರ್ಗಕ್ಕೆ ಸಲಹೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ನಿಷೇಧಿಸಿದೆ. ಕಾನೂನು ಉಲ್ಲಂಘನೆ ಮಾಡಿದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದು ಜನರಿಗೆ ಗೊತ್ತಾದರೆ ಪರಿಸ್ಥಿತಿ ಸುಧಾರಣೆ ಆಗುತ್ತದೆ ಎಂದರು
ಕಾರ್ಯಕ್ರಮವನ್ನು ಎಸ್ ಸಿ ಎಸ್ ಫಾರ್ಮಸಿ ಕಾಲೇಜಿನಿಂದ ಪ್ರಾರಂಭಿಸಿದ ಪ್ರಾರಂಭಿಸಿ ಐಬಿ ಸರ್ಕಲ್ ನಿಂದ ಪ್ರತಿ ಅಂಗಡಿಗಳಿಗೆ ಹೋಗಿ ಗುಲಾಬಿ ಹೂವು ನೀಡುವುದರ ಮೂಲಕ ತಂಬಾಕಿನಿಂದ ಆಗುವ ಅನಾಹುತಗಳನ್ನು ಅಂಗಡಿಯ ಮಾಲೀಕರಿಗೆ ವಿವರವಾಗಿ ಹೇಳಿದರು ನಂತರ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಡಾಕ್ಟರ್ ಹಾಲಸ್ವಾಮಿ ತಂಬಾಕು ಸೇವನೆಯಿಂದ ಜನರ ಮೇಲೆ ಬೀಳುವ ಪರಿಣಾಮಗಳು ರಾಸಾಯನಿಕ ನಿಕೋಟಿನ್ ವಿಷಕರಿ ವಿಷಕಾರಿಯಾದ ವಸ್ತುಗಳು ಅದರಲ್ಲಿ ತುಂಬಿರುತ್ತಾರೆ ಹಾಗಾಗಿ ಸುಮಾರು 3000ದಿಂದ 40000 ರಾಸಾಯನಿಕಗಳಿಂದ ನಿಕೋಟಿನ್ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತದೆ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಶಾಸಕರ ಸಂಬಂಧಿ ಕಾಯಿಲೆಗಳು ಮುಂತಾದ ಕಾಯಿಲೆಗಳಿಗೆ ತಂಬಾಕು ಕಾರಣವಾಗಿದೆ ಹಾಗೂ ತಂಬಾಕು ಗಳನ್ನು ತ್ಯಜಿಸಿ ಒಳ್ಳೆಯ ಜೀವನ ಜೀವನವನ್ನು ಆಯ್ದುಕೊಳ್ಳಿ ಎಂದು ಸಂದೇಶ ನೀಡಿದರು ಜಾಥಾ ಕಾರ್ಯಕ್ರಮದಲ್ಲಿ ಡಾಕ್ಟರ್ ನಾಗೇಂದ್ರರಾವ್ ಪ್ರಾಂಶುಪಾಲರು ಎಸ್ ಸಿಎಸ್ ಫಾರ್ಮಸಿ ಕಾಲೇಜು ಶ್ರೀ ಜಗಪ್ಪ ಅಧ್ಯಕ್ಷರು ವಕೀಲರ ಸಂಘ ಹರಪನಹಳ್ಳಿ ಡಿಪಿ ವಾಸುದೇವ್ ಉಪಾಧ್ಯಕ್ಷರು ವಕೀಲರ ಸಂಘ ಹರಪನಹಳ್ಳಿ ಹಾಗೂ ವಕೀಲ ವೃಂದದವರು ಹಿರಿಯರು ಹಾಗೂ ಕಿರಿಯರು ವಕೀಲ ವೃಂದದವರು ಈ ಕಾರ್ಯಕ್ರಮದಲ್ಲಿ ಹಾಗೂ ಆಶಾ ಉಪಸ್ಥಿತರಿದ್ದರು ಫಾರ್ಮಸಿ ಕಾಲೇಜಿನ ಬಿ ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯರು ಜಾಗೃತ ಜಾಥದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ನಂತರ ಈ ಜಾಥದಲ್ಲಿ ಪಾಲ್ಗೊಂಡಿದ್ದ ಶ್ರೀಮತಿ ಭಾರತಿ ಹಿರಿಯ ಸಿವಿಲ್ ನ್ಯಾಯಾಧೀಶರು ಹರಪನಹಳ್ಳಿ,
ಶ್ರೀ ಜಗದಪ್ಪ ಅಧ್ಯಕ್ಷರು ವಕೀಲರ ಸಂಘ ಹರಪನಹಳ್ಳಿ, ಡಾಕ್ಟರ್ ಹಾಲಸ್ವಾಮಿ ತಾಲೂಕು ಆರೋಗ್ಯಾಧಿಕಾರಿಗಳು ಡಾಕ್ಟರ್ ನಾಗೇಂದ್ರರಾವ್ ಪ್ರಾಂಶುಪಾಲರು ಎಸ್ ಸಿ ಎಸ್ ಫಾರ್ಮಸಿ ಕಾಲೇಜು ಹರಪನಹಳ್ಳಿ, ವೀರನಗೌಡ ಎಸ್ ಸಿ ಎಸ್ ಫಾರ್ಮಸಿ ಕಾಲೇಜು ಉಪನ್ಯಾಸಕರು ಹರಪನಹಳ್ಳಿ, ಶಂಭುಲಿಂಗಯ್ಯ ಎನ್ ಸಿಸಿ ಘಟಕ ಫಾರ್ಮಸಿ ಕಾಲೇಜು ಹರಪನಹಳ್ಳಿ, ಶ್ರೀಮತಿ ಮಲ್ಲಮ್ಮ ಉಪನ್ಯಾಸಕರು ಬಿಎಸ್ಸಿ ನರ್ಸಿಂಗ್ ಕಾಲೇಜು ಹರಪನಹಳ್ಳಿ,
ಶ್ರೀ ರುದ್ರಾಚಾರಿ ಹಿರಿಯ ತಾಲೂಕು ಆರೋಗ್ಯ ನಿರೀಕ್ಷಣ ಅಧಿಕಾರಿ ಹರಪನಹಳ್ಳಿ, ಎಚ್ ಗೌರಮ್ಮ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹರಪನಹಳ್ಳಿ, ಶ್ರೀಮತಿ ಭುವನೇಶ್ವರಿ ಎಚ್ ಜಿ ತಿಪ್ಪೇಸ್ವಾಮಿ ಹರಪನಹಳ್ಳಿ ವಕೀಲ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳು
ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಅಭಿನಂದನೆಗಳನ್ನು ಸೂಚಿಸಿದರು..

ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
