;

ಗೃಹರಕ್ಷಕರ ಪುನರ್ ಮನನ ತರಬೇತಿ ಶಿಬಿರದ ಸಮಾರೋಪ…!!!

ಗೃಹರಕ್ಷಕರ ಪುನರ್ ಮನನ ತರಬೇತಿ ಶಿಬಿರದ ಸಮಾರೋಪ
ಬಳ್ಳಾರಿ ತಾಲೂಕಿನ ಮೀನಹಳ್ಳಿ(ಹಗರಿ)ಯ ಗೃಹರಕ್ಷಕರ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ 11 ದಿನಗಳ ಕಾಲ ಹಮ್ಮಿಕೊಂಡಿದ್ದ ‘ಪುನರ್ ಮನನ’ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.
ರಾಜ್ಯದ 15 ವಿವಿಧ ಜಿಲ್ಲೆಗಳಿಂದ ಒಟ್ಟು 57 ಜನ ಗೃಹರಕ್ಷಕರು ತರಬೇತಿಯಲ್ಲಿ ಹಾಜರಿದ್ದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೃಹರಕ್ಷಕದಳದ ಸಮಾದೇಷ್ಟರು(ಪ್ರ) ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಗುರುನಾಥ್ ಮತ್ತೂರು ಅವರು ಮಾತನಾಡಿ, ತರಬೇತಿಗೆ ಹಾಜರಾದ ಗೃಹರಕ್ಷಕರಿಗೆ ಮುಂದಿನ ತರಬೇತಿಗೆ ಪ್ರತಿ ಜಿಲ್ಲೆಯಿಂದ ಬೇರೆ ಬೇರೆ ಘಟಕಗಳಿಂದ 4 ಜನ ಗೃಹರಕ್ಷಕರನ್ನು ನಿಯೋಜಿಸುವಂತೆ ಕೋರಿದರು.
ಈ ತರಬೇತಿಯನ್ನು ಪಡೆದು ಗೃಹರಕ್ಷಕರು ತಮ್ಮ ಜಿಲ್ಲೆಗೆ ತೆರಳಿ ಇಲ್ಲಿ ಕಲಿತಿರುವ ವಿಷಯಗಳನ್ನು ಇತರೇ ಗೃಹರಕ್ಷಕರಿಗೆ ಕಲಿಸುವಂತೆ ಸೂಚಿಸಿದರು. ಪ್ರತಿಯೊಬ್ಬ ಗೃಹರಕ್ಷಕರು ಶಿಸ್ತು ಕಾಪಾಡುವಂತೆ ಕರೆ ನೀಡಿದರು. ತರಬೇತಿ ಶಿಬಿರದಲ್ಲಿ ಹಾಜರಿದ್ದ ಗೃಹರಕ್ಷಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ಬಿ.ಎಸ್.ಕಾಂಬಳೆ, ಬಾಗಲಕೋಟೆಯ ಬೋಧಕರಾದ ಅಹಮ್ಮದ್, ಗದಗ ಜಿಲ್ಲೆಯ ಬೋಧಕರಾದ ಕಿರಣಕುಮಾರ್ ಕಟಗಿ, ಸಹಾಯಕ ಬೋಧಕರಾದ ಪಿ.ನವೀನ್ ಬಾಬು, ಕೊಪ್ಪಳ ಜಿಲ್ಲೆಯ ಬೋಧಕರಾದ ಯೋಗೀಂದ್ರ, ಗೃಹರಕ್ಷಕ ಅಧಿಕಾರಿಗಳಾದ ಜಿ.ಬಸವರಾಜು, ಕಚೇರಿ ಸಿಬ್ಬಂದಿಗಳಾದ ಬಿ.ಕೆ.ಬಸವಲಿಂಗ, ಹೆಚ್.ಲಕ್ಷ್ಮೀನಾರಾಯಣ, ಪ್ರ.ದ.ಸ. ಬಿ.ಎನ್.ಗೋಪಿನಾಥ್, ಜಿ.ಪವನಕುಮಾರ ಸೇರಿದಂತೆ 15 ಜಿಲ್ಲೆಗಳ ಗೃಹರಕ್ಷಕರು ಉಪಸ್ಥಿತರಿದ್ದರು..

ವರದಿ.ವಿರೇಶ್, ಎಚ್, ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;