;

ಹೊಸಪೇಟೆಯಲ್ಲಿ ಅಮೃತಭಾರತಿಗೆ ಕನ್ನಡದಾರತಿ:ಅರ್ಥಪೂರ್ಣ ಆಚರಣೆ…!!!

ಹೊಸಪೇಟೆಯಲ್ಲಿ ಅಮೃತಭಾರತಿಗೆ ಕನ್ನಡದಾರತಿ:ಅರ್ಥಪೂರ್ಣ ಆಚರಣೆ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಸ್ಮರಿಸುವುದು ಅಗತ್ಯ

: 75ನೇ ಅಜಾದಿ‌ ಕಾ ಅಮೃತ್ ಮಹೋತ್ಸವದ ಅಂಗವಾಗಿ ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೊಸಪೇಟೆ ನಗರಸಭೆ ಸಹಯೋಗದಲ್ಲಿ ಶನಿವಾರ ಸಂಜೆ ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಏರ್ಪಡಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ‌ ಸಂಸದರಾದ ವೈ.ದೇವೆಂದ್ರಪ್ಪ ಅವರು ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪನಮನ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತವು ವಿಶಿಷ್ಟ ದೇಶ,ವಿಶ್ವಗುರು, ಎಲ್ಲರೂ ಒಂದೇ ಎಂಬ ವಸುದೈವ ಕುಟುಂಬ ಎಂಬುದನ್ನು ಸಾರಿದ ದೇಶ ನಮ್ಮದು. ಈ ದೇಶ ಮೇಲೇ ಅಲೆಕ್ಸಾಂಡರ್ ನಿಂದ‌ ಹಿಡಿದು‌ ಮೋಘಲರು,ಬ್ರಿಟಿಷರವರೆಗೆ ಅನೇಕರು ಆಕ್ರಮಣ ಮಾಡಿ ಹಲವರು ಖಾಲಿ ಕೈಯಲ್ಲಿ ಹಿಂದಕ್ಕೆ ಹೋಗಿದ್ದಾರೆ ಎಂದರು.

ಇಡೀ ದೇಶಕ್ಕೆ ಒಂದೇ ಕಾನೂನು ಅಂತ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಸಂವಿಧಾನ ತಿದ್ದುಪಡಿ ಮೂಲಕ ಬದಲಿಸಲಾಯಿತು. ಈ ಸಂದರ್ಭದಲ್ಲಿ ‌ತಮ್ಮ ಧ್ವನಿಯನ್ನು ನಾನು ಮತದ ಮೂಲಕ ಸಂಸತ್ತಿಲ್ಲಿ ಹಾಕಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ರಕ್ಷಣೆಗೆ ಹಲವು ರೀತಿಯ ಯೋಜನೆ, ತಂತ್ರಗಳನ್ನು ರೂಪಿಸಿದ್ದಾರೆ ಎಂದರು. ಎಲ್ಲರೂ‌ ಒಂದೂಗೂಡಿ ಈ‌ ಪ್ರದೇಶದ ಅಭಿವೃದ್ಧಿಗೆ ಶ್ರಮಿಸೋಣ‌ ಎಂದರು.

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಪಕ ಎನ್.ಬಸವರಾಜ ಅವರು ಸ್ವತಂತ್ರ ಹೋರಾಟಕ್ಕೆ ದಕ್ಷಿಣ ಭಾರತಕ್ಕೆ ಹೆಬ್ಬಾಗಿಲು ವಿಜಯನಗರ ಸಾಮ್ರಾಜ್ಯದ ಕೇಂದ್ರಬಿಂದುವಾಗಿರುವ ಹೊಸಪೇಟೆ ಆಗಿತ್ತು ಎಂದರು.

ಸ್ವಾತಂತ್ರ್ಯಕ್ಕಾಗಿ ಈ‌ ಭಾಗದ ಜನರು ಬಹಳಷ್ಟು ಹೋರಾಟಗಳನ್ನು,ತ್ಯಾಗಗಳನ್ನು ಮಾಡಿದ್ದಾರೆ ಎಂದು ಹೇಳಿದ ಅವರು ಈ ಭಾಗದ‌ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡದ್ದನ್ಮು ಸ್ಮರಿಸಿದರು.

ಈ ದೇಶಕ್ಕೆ ಸಿಕ್ಕ ಸ್ವತಂತ್ರ ಚರಿತ್ರೆಯನ್ಮು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಸ್ವತಂತ್ರದ ನಂತರ ಹಲವು ದೇಶಗಳ ಮೂಲ ಸಂಸ್ಕೃತಿ ಕಳೆದು ಹೋಗಿದೆ. ಆದರೆ ನಮ್ಮ ದೇಶದ ಸಂಸ್ಕೃತಿ ಇನ್ನೂ ಉಳಿದಿದೆ ಎಂದರೆ ನಮ್ಮ ಅದೃಷ್ಟ ಎಂದರು.

ನಮ್ಮ ದೇಶ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮ‌ ಕರ್ತವ್ಯ ವಾಗಿದೆ ಎಂದರು.

ವೇದಿಕೆ ಕಾರ್ಯಕ್ರಮದ ನಂತರ ಸ್ಥಳೀಯ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕಮಲಾಪುರದ ದೇಸಾಯಿ ಮನೆತನದ ಗುಂಡುರಾವ್ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆವರಣದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣ ಶಿಲಾಫಲಕ ಪ್ರತಿಷ್ಠಾಪನೆ ಮಾಡಿದರು.

ಕಾರ್ಯಕ್ರಮದ ನಿಮಿತ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ

ವಿವಿಧ ಸ್ಪರ್ದೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ಸಂಸದರು ವಿತರಿಸಿದರು.

ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರು

ಸಂಕಲ್ಪ ವಿಧಿ ಭೋದನೆ ಮಾಡಿದರು.

ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಸುಂಕಮ್ಮ, ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅರುಣ್, ಹುಡಾ ಅಧ್ಯಕ್ಷ ಅಶೋಕ‌ ಜಿರಾ, ನಗರಸಭೆ ಪೌರಾಯುಕ್ತ ರಮೇಶ, ತಹಶೀಲ್ದಾರರದ ವಿಶ್ವಜೀತ್ ಮೆಹೆತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರೆಶ್ ,ಲೋಕೋಪಯೋಗಿ ಇಲಾಖೆಯ ಕಿಶೋರಬಾಬು ಮತ್ತಿತರರು ಇದ್ದರು…

ವರದಿ. ಗಣೇಶ್. ಕೆ. ಹೊಸಪೇಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;