ರಾಜ್ಯಸಭೆಗೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳಾಗಿ ನಿರ್ಮಲ ಸೀತಾರಾಮನ್,ನವರಸನಾಯಕ ಜಗ್ಗೇಶ್ ಕಣಕ್ಕೆ…!!!

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಇದೀಗ ಬಿಡುಗಡೆ ಮಾಡಿದ್ದು, ಈ ಸಲ ಕನ್ನಡ ಚಿತ್ರರಂಗಕ್ಕೂ ಒಂದು ಸಂತಸ ಸಂಗತಿ ಬಂದಿದೆ.

ಬಿಜೆಪಿ ಹೊರಡಿಸಿರುವ ಪಟ್ಟಿ ಒಂದು ಮಟ್ಟಿಗೆ ನಿರೀಕ್ಷಿತ ಎನಿಸಿಕೊಂಡಿದ್ದರೆ, ಮತ್ತೊಂದು ರೀತಿಯಲ್ಲಿ ಅಚ್ಚರಿ ಎಂಬಂತೆಯೂ ಆಗಿದೆ.

ಏಕೆಂದರೆ ಬಹುತೇಕರ ನಿರೀಕ್ಷೆಯಂತೆ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್​ ಹೆಸರು ಒಂದಾಗಿದ್ದರೆ, ಇನ್ನು ಅಚ್ಚರಿ ಎಂಬ ರೀತಿಯಲ್ಲಿ ನಟ ನವರಸ ನಾಯಕ ಜಗ್ಗೇಶ್ ಹೆಸರನ್ನೂ ಸೂಚಿಸಲಾಗಿದೆ.

ಇನ್ನು ನಿರ್ಮಲಾ ಸೀತಾರಾಮನ್ ಆಯ್ಕೆಯನ್ನು ಊಹಿಸಿದ್ದ ಕಾಂಗ್ರೆಸ್, ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಕಾಣಿಕೆ ಏನು ಎಂದು ಈಗಾಗಲೇ ಕಾಂಗ್ರೆಸ್​​ ನಾಯಕರು ಪ್ರಶ್ನಿಸಿದ್ದು, ವೈರಲ್ ಆಗಿತ್ತು. ಆದರೆ ಅದ್ಯಾವುದಕ್ಕೂ ಕೇರೇ ಎನ್ನದ ಬಿಜೆಪಿ ನಿರ್ಮಲಾ ಸೀತಾರಾಮನ್​ ಅವರನ್ನು ಅಭ್ಯರ್ಥಿಗಳಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಿದೆ. ಸದ್ಯಕ್ಕೆ ಇಬ್ಬರ ಹೆಸರು ಮಾತ್ರ ಘೋಷಣೆ ಮಾಡಿರುವ ಬಿಜೆಪಿ, ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಬಹುತೇಕ ಅನುಮಾನ ಎನ್ನಲಾಗಿದೆ…

ವರದಿ. ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend