ವಾಲ್ಮೀಕಿ ಸ್ವಾಮೀಜಿಗಳ ಧರಣಿಯನ್ನು ಬೆಂಬಲಿಸಿ ತಹಶಿಲ್ದಾರಾದ ಪ್ರತಿಭಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ…!!!

ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳ 100 ನೇ ದಿನ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ವಿವಿಧ ಸಂಘಟನೆಗಳಿಂದ ತಹಶಿಲ್ದಾರಾದ ಪ್ರತಿಭಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ !!

ಹೂವಿನಹಡಗಲಿ: ವಾಲ್ಮೀಕಿ ಸಮಾಜದ ಸ್ವಾಮಿಜಿಯಾದ ವಾಲ್ಮೀಕಿ ಪ್ರಸನ್ನಾನಂದ ಪುರಿ ಯವರು ನಡೆಸುತ್ತಿರುವ ಅಹೋರಾತ್ರಿ ಧರಣಿ ಬೆಂಬಲಿತ ನಗರದ ವಿವಿಧ ಜಾತಿ ಸಂಘಟನೆಗಳು ಕರೆಕೊಟ್ಟಿದ್ದ ಪ್ರತಿಭಟನೆ ಇಂದು ನಡೆಯಿತು. ಈ ಪ್ರತಿಭಟನಾ ಮೆರವಣಿಗೆಯು ನಗರದ ಮೈಲಾರ ಲಿಂಗೇಶ್ವರ ದೇವಸ್ಥಾನದಿಂದ ಆರಂಭವಾಗಿ ನಗರದ ಶಾಸ್ತ್ರೀ ವೃತ್ತದಲ್ಲಿ ಕೊನೆಗೊಂಡು ಮಾನವ ಸರಪಳಿ ರಚಿಸಿ ರಸ್ತೆ ಸಂಚಾರ ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷರಾದ ಹುಳಿಗದ ಹನುಮಂತಪ್ಪ ಮಾತನಾಡಿ ಇವತ್ತಿನ ಪ್ರತಿಭಟನೆ ಅಂತ್ಯವಲ್ಲ ಆರಂಭ. ನಮ್ಮ ಸಮಾಜದ ನಾಯಕರು ಮೀಸಲಾತಿ ಪಡೆದು ಅಧಿಕಾರದ ಗದ್ದುಗೆ ಏರಿ ಅಧಿಕಾರ ಚಲಾಯಿಸಿದರೆ ಸಾಲದು ನೀವು ಜನಿಸಿದ ಮತ್ತು ಮೀಸಲಾತಿ ಪಡೆದ ಜನಾಂಗಕ್ಕೆ ನಿಮ್ಮ ಸೇವೆ ಅಗತ್ಯವಿದೆ. ನಾವು ಅಧಿಕಾರಕ್ಕೆ ಬಂದು ಒಂದೇ ದಿನದಲ್ಲಿ ನಿಮ್ಮ ಮೀಸಲಾತಿಯನ್ನು ಹೆಚ್ಚಿಸಿ ಕೊಡುತ್ತೇವೆ ಎಂದಿದ್ದ ಅವತ್ತಿನ ಮುಖ್ಯ ಮಂತ್ರಿ ಯಡಿಯೂರಪ್ಪ ನವರು ಅಧಿಕಾರ ಕಳೆದು ಕೊಂಡು ಮನೆ ಸೇರಿದರು ಹಾಗೂ ಅಧಿಕಾರಕ್ಕೆ ಬಂದ ಮರು ಕ್ಷಣವೇ ವಾಲ್ಮೀಕಿ ಸಮಾಜದ ಸಂವಿಧಾನ ಬದ್ಧ ಮೀಸಲಾತಿಯನ್ನು ನೀಡುತ್ತೆನೆ ಅದನ್ನು ನಾನು ರಕ್ತದಲ್ಲಿ ಬರೆದು ಕೊಡುತ್ತೆನೆ ಎಂದಿದ್ದ ಮಂತ್ರಿಗಳು ಇವತ್ತಿನ ದಿನಗಳಲ್ಲಿ ಮೌನವಾಗಿರುವುದು ಸರಿಯಲ್ಲ! ಎಂದರು ಸರ್ಕಾರ ನಮ್ಮ ಮತ್ತು ಸ್ವಾಮೀಜಿಯವರ ಮನವಿಗೆ ಸ್ಪಂದಿಸದೇ ಇದ್ದಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ದಲಿತ ಮುಖಂಡರಾದ ಜಿ.ಬುಳಪ್ಪ ಮಾತನಾಡಿ ಬಾ.ಬಾ.ಸಾಹೇಭ್ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮತ್ತು ಅವರು ನೀಡಿದ ಸಂವಿಧಾನದ ಹಿನ್ನಲೆಯಲ್ಲಿ ಬೆಳೆದು ಬಂದವರು ನಾವು ಸಂವಿಧಾನ ಬದ್ದವಾಗಿ ಇರುವ ಮೀಸಲಾತಿಯಲ್ಲಿ ಜನಸಂಖೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಗೆ ಮಾಡಿ ಎಂದು ನಾವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಇನ್ನಾದರು ಸರ್ಕಾರ ಹೆಚ್ಚೆತ್ತುಕೊಂಡು ಸ್ವಾಮೀಜಿಗಳ ಈ ಅಹೋ ರಾತ್ರಿ ಧರಣಿಯನ್ನು ಮೀಸಲಾತಿ ಹೆಚ್ಚಿಸುವುದರ ಮೂಲಕ ಕೊನೆಗೊಳಿಸಬೇಕು ಎಂದು ಹೇಳಿದರು.

ಸರ್ಕಾರಕ್ಕೆ ಕಣ್ಣು,ಕಿವಿ,ಹೃದಯವಿಲ್ಲ ಸುಮಾರು 100 ದಿನಗಳಕಾಲ ರಾಜ್ಯದ ಒಂದು ಪ್ರಬಲ ಸಮಾಜದ ಸ್ವಾಮೀಜಿ ಮಳೆ ಬಿಸಿಲು ಚಳಿ ಎನ್ನದೆ ಧರಣಿಗೆ ಕೂತಿದ್ದರೂ ಸೌಜನ್ಯಕಾದರು ಮುಖ್ಯಮಂತ್ರಿಗಳು ಮಾತಾನಾಡಿಸುವ ಪ್ರಯತ್ನ ಮಾಡಿಲ್ಲ ಹಾಗೂ ನಮ್ಮಲ್ಲಿ ನೀವು ಹೊಡೆದಾಳುವ ನೀತಿಯನ್ನ ನಡೆಸಲು ಸಾಧ್ಯವಿಲ್ಲ ತಳ ಸಮುದಾಯದವರೆಲ್ಲರೂ ಹೊಂದಾಗಿದ್ದೆವೆ! ಇನ್ನಾದರು ಸರ್ಕಾರ ಬುದ್ದಿ ಉಪಯೋಗಿಸಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯನ್ನು ಜಾರಿಗೆ ಗೊಳಿಸಿ ಎಸ್.ಸಿ ಮತ್ತು ಎಸ್.ಟಿ ಜನಾಂಗದ ಮೀಸಲತಿಯನ್ನು ಹೆಚ್ಚಿಸದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ನಾವು ಶಾಸಕರ ಮತ್ತು ಮಂತ್ರಿಗಳ ಮನೆಗಳಿಗೆ ಮುತ್ತಿಗೆ ಹಾಕುತ್ತೆವೆ! ಎಂದು ದಲಿತ ಹಾಗೂ ಜೆ.ಡಿ.ಎಸ್ ಪಕ್ಷದ ಮುಖಂಡರಾದ ಪುತ್ರೇಶ್ ತಿಳಿಸಿದರು.
ದಲಿತ ಮುಖಂಡಾರ ಹುಚ್ಚೇಂಗೆಪ್ಪ ನವರು ಬೀಮ ಗೀತೆಯನ್ನು ಹಾಡಿದರು.ತಾಲೂಕು ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ಯಾದ ಪರಸಪ್ಪನವರು ಮಾತಾನಾಡಿ ಇವತ್ತಿ ದಿನ ನಾವೆಲ್ಲರೂ ನಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡುವದಕ್ಕಾಗಲಿ ಸೇರಿಲ್ಲ ಇವತ್ತಿನ ಈ ಪ್ರತಿಭಟನೆ ನಮ್ಮ ಸಮಾಜದ ಸ್ವಾಮೀಜಿಗಳ ಮಾರ್ಗದಲ್ಲಿ ಸೌಮ್ಯವಾಗಿ ನಡೆಯುತ್ತಿದೆ ಈ ಕಾರಣಕ್ಕಾಗಿ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲು ನಾವು ಎಲ್ಲರೂ ಸಿದ್ದರಿದ್ದೇವೆ ಎಂದು ತಿಳಿಸಿದರು.


ತಾಲೂಕು ಅಖಿಲಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ್ ಮಾತನಾಡಿ ಸಂವಿಧಾನ ಬದ್ಧವಾದ ಮತ್ತು ಜನಸಂಖೆಗೆ ಅನುಗುಣವಾಗಿ‌ ಮೀಸಲಾತಿಯನ್ನು ಹೆಚ್ಚಿಸಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪಡೆದು ಶಾಸಕ ಮಂತ್ರಿಸ್ಥಾನ ಅಲಂಕರಿಸಿರುವ ಸಮಾಜದ ನಾಯಕರು ಸಮಾಜದ ಋಣತೀರಿಸಲು ಏನಾದರು ಸಾಹಸ ಕಾರ್ಯ ಮಾಡಬೇಕು ಒಂದು ಸರ್ಕಾರವನ್ನೇ ಬೀಳಿಸುವಷ್ಟು ಶಕ್ತರಿರುವ ನೀವುಗಳು ಇವತ್ತು ಸುಮ್ಮನಿರುವುದು ಸರಿಯಲ್ಲ ಒಂದು ಪ್ರಭಲ ಜನಾಂಗ ಸ್ವಾಮೀಜಿ ಧರಣಿಗೆ ಕೂತು ಸುಮಾರು 100 ದಿನಗಳಾದರು ಮುಖ್ಯಮಂತ್ರಿಗಳು ಸೌಜನ್ಯಕ್ಕಾದರೂ ಬೇಟಿ ಮಾಡಬೇಕಿತ್ತು ಎಂದು ಹೇಳಿದರು.ಬಂಜಾರ್ ಸಮಾಜದ ಅಧ್ಯಕ್ಷರಾದ ಡಾ.ಕಠಾರಿ ನಾಯ್ಕ್ ಮಾತಾನಾಡಿ ನಮ್ಮ ಮನೆ ಮನೆಗಳಿಂದ ಒಬ್ಬ ವಾಲ್ಮೀಕಿ ಒಬ್ಬ ಅಂಬೇಡ್ಕರರನ್ನು ನಾವು ಸೃಷ್ಟಿ ಮಾಡಿ ಸಮಾಜ ತಿದ್ದಲು ಕಳಿಸಬೇಕಾಗಿದೆ ಅಂತಹ ರೀತಿಯಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಇವತ್ತು ನಾವು ನಮಗೆ ದೊರಕ ಬೇಕಾದ ಶೈಕ್ಷಣಿಕ ಹಕ್ಕನು ಕೇಳುತ್ತಿದ್ದೇವೆ ನಾವು ಯಾರ ಮನೆಯ ಆಸ್ತಿಯನ್ನಾಗಲಿ ಬೇರೆ ಯಾವ ಅಧಿಕಾರವನ್ನಾಗಲಿ ಕೇಳುತಿಲ್ಲ‌ ಎಂದರು ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಎಲ್.ಜಿ ಹೊನ್ನಪ್ಪ.ಪುರಸಭೆಯ ಸದಸ್ಯರಾದ ಯು ಹನುಮಂತಪ್ಪ. ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ ಜಿ.ವಸಂತ್.ವಾಲ್ಮೀಕಿ ಸಮಾಜದ ಯುವ ಮುಖಂಡರಾದ ಕೆಂಪ್ಯಾ ಮಂಜುನಾಥ. ದೀಪದ ಕೃಷ್ಣಪ್ಪ.ಹುಂಚಿಕಾಯಿ ಗಿರಿ.ಕೊಂಚಿಕೇರಿ ಯಮುನಪ್ಪ.ಪ್ರಥಮ ದರ್ಜೆ ಗುತ್ತಿಗೆದಾರರಾದ ಎನ್ ಮಾರುತೆಶ್ವರ ನಾಯಕ. ನಾಯ್ಕ್.ಮೇದಾರ ಸಮಜದ ಅಧ್ಯಕ್ಷರಾದ ಎಂ.ಮಂಜುನಾಥ್.ಚಲುವಾದಿ ಸಮಾಜದ ಅಧ್ಯಕ್ಷರಾದ ದ್ಯಾಮಪ್ಪ ಹಾಗೂ ಕೊರವ ಸಮುದಾಯದ ಮುಖಂಡರುಗಳು,ಶಿಳ್ಯಿಕ್ಯಾತರ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು. ನಂತರ ತಹಶಿಲ್ದಾರಾದ ಪ್ರತಿಭಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ವರದಿ: ಅಜಯ.ಚ
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend