ಕೂಡ್ಲಿಗಿ: ಶ್ರೀಕಂಠಪುರ ತಾಂಡದಲ್ಲಿ ಕ್ರಿಕೆಟ್‌ ಟೂರ್ನಾಮೆಂಟ್‌ ಉದ್ಘಾಟನೆ…!!!

ಕೂಡ್ಲಿಗಿ: ಶ್ರೀಕಂಠಪುರ ತಾಂಡದಲ್ಲಿ ಕ್ರಿಕೆಟ್‌ ಟೂರ್ನಾಮೆಂಟ್‌ ಉದ್ಘಾಟನೆ

ವಿಜಯನಗರ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ವ್ಯಾಪ್ತಿಯ ಶ್ರೀಕಂಠಪುರ ತಾಂಡಾ ಗ್ರಾಮದಲ್ಲಿ ಕ್ರಿಕೆಟ್‌ ಟೂರ್ನಾಮೆಂಟ್‌ ಉದ್ಘಾಟನೆ ಮಾಡಿ ನಂತರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ತಾಲೂಕು ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮುರುಳಿಕೃಷ್ಣ ರವರು ಮಾತನಾಡಿ. ಯುವಕರು ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಹವ್ಯಾಸ ಜತೆಗೆ ಕ್ರೀಡೆಗಳ ಕಡೆಗೆ ಹೆಚ್ಚು ಗಮನ ಹರಿಸುವುದು ಅವಶ್ಯಕವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಕೆಲವು ಯುವಕರು ಮಾದಕ, ಮದ್ಯಪಾನ, ಧೂಮಪಾನ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಮೇಲೆ ಅನೇಕ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಪೋಷಕರ ಕನಸುಗಳಿಗೆ ತೊಂದರೆ ಮಾಡದಂತೆ ಯುವಕರು ಎಚ್ಚರವಹಿಸಬೇಕು. ಯುವಕರು ದೇಶದ ನಿಜವಾದ ಸಂಪತ್ತು. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಎಂದರು. ಇದೇ ಸಂದರ್ಭದಲ್ಲಿ ದಿವಂಗತ ದಿವಾಕರ್ ನಾಯಕ್ ಅವರ ಪುತ್ರ ಮಹೇಶ್ ನಾಯಕ್ ಇವರ ಸಹಕಾರದೊಂದಿಗೆ ಯುವಕರಿಗೆ ಕ್ರೀಡಾ ಸಾಮಗ್ರಿಗಳಾದ ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ಶರ್ಟ್ ಪರಿಕರಗಳನ್ನು ವಿತರಿಸಿ ನಂತರ ಮಾತನಾಡಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದಢವಾಗಿರುತ್ತದೆ. ಸೋಲು -ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವೇಣು ಕುಮಾರ್, ರವಿ ಜೀಸಸ್, ವೇಣೇಶ್ ನಾಯಕ್, ರಮೇಶ್ ನಾಯಕ್, ಭಗನ ನಾಯಕ್, ಬಸವರಾಜ್ ಸೇರಿದಂತೆ ಊರಿನ ಮುಖಂಡರು, ಯುವಕರು ಇದ್ದರು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend