ಬೇಡದವರ ಸಹವಾಸ ಮಾಡಿ ಸಿದ್ದರಾಮಯ್ಯ ಹಾಳಾಗಿದ್ದಾರೆ – ಡಾ. ಸಂದೀಪ್ ಕುಮಾರ…!!!

ತುರುಕರ್ ಸಹವಾಸ ಮಾಡಿ ಸಿದ್ದರಾಮಯ್ಯ ಹಾಳಾಗಿದ್ದಾರೆ – ಡಾ. ಸಂದೀಪ್ ಕುಮಾರ

ಸಿಂಧನೂರು : ಮೇ.23.ಸಿದ್ದರಾಮಯ್ಯ ಒಬ್ಬ ಮಾಸ ಲೀಡರ್ ಅನ್ನೋಕ್ಕೋಂಡಿದ್ವಿ ಆದರೆ ಜಮೀರ ಅಹ್ಮದ್ ಇನ್ನಿತರ ತುರುಕರ್ ಸಹವಾಸ ಮಾಡಿ ಹಾಳಾಗಿದ್ದಾರೆ. ಕೀಳು ಮಟ್ಟದ ರಾಜಕೀಯ ಬಿಡಬೇಕು ಅಂಕಿ ಅಂಶಗಳ ಮೂಲಕ ಆರೋಪ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚ ರಾಜ್ಯಧ್ಯಕ್ಷ ಡಾ.ಸಂದೀಪ್ ಕುಮಾರ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಬಿಜೆಪಿ ಯುವ ಮೋರ್ಚ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಸಸಿಗೆ ನಿರೇರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ನರೇಂದ್ರ ಮೋದಿಯವರು ಭವಿಷ್ಯದ ನಾಯಕರು ಅದಕ್ಕಾಗಿ ಅವರನ್ನು ಮತದಾರರು ಪಕ್ಷಭೇದ ಮರೆತು ಎರಡು ಅವದಿಗೆ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ, ನರೇಂದ್ರ ಮೋದಿ ಯವರ ಸರ್ಕಾರದಲ್ಲಿ ಹೆಚ್ಚು ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಬಿಜೆಪಿಯ 28 ದೇಶಭಕ್ತ ಕಾರ್ಯಕರ್ತರು ದೇಶಕ್ಕಾಗಿ ಪ್ರಾಣತೆತ್ತಿದ್ದಾರೆ. ಕಾಂಗ್ರೆಸ್ ಮಾಡಿದ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನದಲ್ಲಿದೆ. ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು,ಮತ್ತು ನರೇಂದ್ರ ಮೋದಿ ಆಡಳಿತದಲ್ಲಿ ಮಾಡಿದ ರೈತರು, ಬಡವರ,ಶೋಷಿತ ಸಮುದಾಯಗಳ, ಮಹಿಳೆಯರಿಗಾಗಿ ದೇಶದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ 12 ಕೋಟಿಗೂ ಹೆಚ್ಚು ಶೌಚಾಲಯ, ಮಹಿಳೆಯರ ಅರೋಗ್ಯದ ದ್ರಷ್ಟಿಯಿಂದ ಹೊಗೆ ಮುಕ್ತ ಮಾಡಲು ಅಡುಗೆ ಅನಿಲ, ಬಡ ,ಮಧ್ಯಮ ವರ್ಗದವರಿಗೆ ಅಯುಷ್ಮಾನ ಭಾರತ ಯೋಜನೆಯಲ್ಲಿ ಏಳು ಸಾವಿರ ಜನ ಔಷಧಿ ಕೇಂದ್ರ, ಇನ್ನಿತರ ಸೌಲಭ್ಯಗಳು ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರದಿಂದ ತಲುಪಿಸುವಂತ ಕೆಲಸ ನರೇಂದ್ರ ಮೋದಿಯವರು ಮಾಡಿದ್ದಾರೆ ಯುವ ಮೋರ್ಚಾ ಕಾರ್ಯಕರ್ತರು ಜನರಿಗೆ ತಿಳಿಸಬೇಕೆಂದರು.

ಕಾಂಗ್ರೆಸ್ ಪಕ್ಷದ ಮೊದಲ ಪ್ರಧಾನಿ ನೆಹರುರವರ ಕಾಲದಿಂದ ಭ್ರಷ್ಟಾಚಾರ ಶುರುವಾಗಿದೆ. 2ಜಿ ಹಗರಣ ದಿಂದ 2014ರ ತನಕ ಭ್ರಷ್ಟಾಚಾರ ನಡೆದಿದೆ.ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಈ ದೇಶವು ಅಭಿವೃದ್ದಿ ಪಥದತ್ತ ಮುನ್ನಡೆಯಲು ಕಾರಣಿಭೂತರು. 2014 ನಂತರ ನರೇಂದ್ರ ಮೋದಿ ಅವರು ಇಲ್ಲಿಯ ತನಕ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಆಡಳಿತ ನಡೆಸಿದ್ದಾರೆ. ಈ ದೇಶದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ, ದಿನ ದಲಿತರಿಗೆ, ಬಡವರಿಗೆ, ಶೋಷಿತ ಸಮುದಾಯಗಳಿಗೆ ಸರ್ಕಾರದ ಸವಲತ್ತುಗಳು ನೇರವಾಗಿ ಮುಟ್ಟಬೇಕು ಮತ್ತು ಅವರ ಬದುಕು ಆಸನಾಗಬೇಕು ಎಂಬುದು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಎಂದರು. ಕಾರ್ಯಕ್ರಮದ ಪೂರ್ವದಲ್ಲಿ ಅಶಿಸ್ತಿ ವರ್ತಿಸಿದ ಕಾರ್ಯಕರ್ತರಿಗೆ ಗುಂಪುಗಾರಿಕೆ ಅಶಿಸ್ತು ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆಯನ್ನು ಸಹ ನೀಡಿದರು.

ನಂತರ ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ರವರು ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಪ್ರಚಾರ ಪಡಿಸುವ ಸಮಾಜಮುಖಿ ಚಿಂತನೆ, ಅಭಿವೃದ್ಧಿ ಕಡೆಗಿನ ಪಯಣ ಬಿಜೆಪಿಯ ಯುವ ಕಾರ್ಯಕರ್ತರದ್ದು.ಪಕ್ಷವು ಯುವ ಕಾರ್ಯಕರ್ತರಿಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು. ಜನರಿಗೆ ಸುಳ್ಳು ಆಪಾದನೆ ಮಾಡುವ ವಿರೋದ ಪಕ್ಷಗಳಿಗೆ ಕೆಲಸದ ಮೂಲಕ ಉತ್ತರ ನೀಡಬೇಕು. ಮೊದಲು ದೇಶ ನಂತರ ಪಕ್ಷ ವ್ಯಕ್ತಿಗಿಂತ ಪಕ್ಷದ ಸಿದ್ಧಾಂತವೇ ಮುಖ್ಯ.ಕಾಂಗ್ರೆಸ್ ಪಕ್ಷ ದೇಶದಲ್ಲಿ ವಿರೋಧ ಪಕ್ಷವಾಗಿಯು ಉಳಿದಿಲ್ಲ, ಅವನತಿಯ ಹಾದಿಯಲ್ಲಿದೆ. ಹಾಗಂತ ಕಾಂಗ್ರೆಸ್ ಪಕ್ಷದ ಬಗ್ಗೆ ಲಘುವಾಗಿ ಪರಿಗಣಿಸಬಾರದು. ಭವ್ಯ ಭಾರತವನ್ನು ಕಟ್ಟಲು ಯುವಕರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಂಬಣ್ಣ ಮದರಕಲ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ, ರಾಜ್ಯ ಕಾರ್ಯದರ್ಶಿ ಅಮರೇಶ ರೈತನಗರ ಕ್ಯಾಂಪ್, ಮಂಡಲ ಅಧ್ಯಕ್ಷ ಹನುಮೇಶ ಸಾಲುಗುಂದಾ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ್ ಆಚಾರ್ಯ, ಮಾಜಿ ಜಿಲ್ಲಾ ಪಂ.ಸದಸ್ಯ. ಶಿವನಗೌಡ ಗೋರೆಬಾಳ, ಕುಮಾರಸ್ವಾಮಿ ತಾತ, ಕಿರಣ ಬಾಲನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಣ್ಣ, ಮಹೇಶ, ಸಿದ್ದು ಹೂಗಾರ ಪಕ್ಷದ ಕಾರ್ಯಕಾರಣಿ ಸದಸ್ಯರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend