ಮಲ್ಲಿಗೆನಾಡಿನ ಪ್ರತಿಭೆ ಬಿ.ಅಮೃತಾಗೆ ರಾಜ್ಯ ಮಟ್ಟದ ಪ್ರಥಮ ಶ್ರೇಣಿ!!
ಪ್ರಸ್ತುತ 2021-22 ಎಸ್.ಎಸ್.ಎಲ್.ಸಿ ಪರೀಕ್ಷೆಯ ಪಲಿತಾಂಶದಲ್ಲಿ ಪಟ್ಟಣದ ಮರಿಸ್ವಾಮಯ್ಯಮಠದ ಪಾಟೀಲ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಬಿ.ಅಮೃತ 625 ಅಂಕಗಳಿಗೆ 625 ಅಂಕಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ 43 ನೇ ರ್ಯಾಂಕ್ ಪಡೆಯುವ ಮೂಲಕ ಮಲ್ಲಿಗೆನಾಡಿನ ಕೀರ್ತಿ ಹೆಚ್ಚಿಸಿದ್ದಾಳೆ ವಿದ್ಯಾರ್ಥಿನಿಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕರಿಗಳಾದ ಶಂಕರ್ ಎನ್ ಹಳ್ಳಿಗುಡಿ.ಯವರು ವಿದ್ಯಾರ್ಥಿನಿಯ ಮನೆಗೆ ಬೇಟಿ ನೀಡಿ ಅಭಿನಂದನೆ ಸಲ್ಲಿಸಿ ಪ್ರೋತ್ಸಾಹಿಸಿದ್ದಾರೆ. ಮರಿಸ್ವಾಮಯ್ಯಮಠದ ಪಾಟೀಲ ಪದವಿಪೂರ್ವ ವಿದ್ಯಾಲಯದ ವಾಣಿಜ್ಯವಿಭಾಗದಲ್ಲಿ ವಿಷಯದಲ್ಲಿ ಅಧ್ಯಯನ ಮಾಡುತ್ತಿದ್ದಾಳೆ ಮುಂದಿನ ದಿನಗಳಲ್ಲಿ ಸಿ.ಎ. ಆಗುವ ಗುರಿ ಹೊಂದಿದ್ದಾಳೆ.

ಇದೇ ಶಾಲೆಯ ಮತ್ತೋರ್ವ ವಿದ್ಯಾರ್ಥಿನಿಯಾದ ಎಂ.ಪಿ.ಎಂ.ಸೌಜನ್ಯ ಎಸ್ ಎಸ್ ಎಲ್ ಸಿ ಪಲಿತಾಂಶದಲ್ಲಿ 625 ಅಂಕಗಳಿಗೆ 624 ಅಂಕಗಳಿಸುವ ಮೂಲಕ ಶಾಲೆ ಹಾಗೂ ತಂದೆ ತಾಯಿಗಳ ಕೀರ್ತಿ ಹೆಚ್ಚಿಸಿದ್ದಾಳೆ. ಮುಂದೆ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿ ವೈದ್ಯೆ ಆಗುವ ಗುರಿ ಹೊಂದಿದ್ದಾಳೆ.
ನಿರಂತರ ಅಭ್ಯಾಸ ಹಾಗು ಪಾಲಕರ ಪೋತ್ಸಾಹ ಶಾಲೆಯ ಸಿಬಂದ್ದಿಗಳ ಮಾರ್ಗದರ್ಶನ ನಮ್ಮ ಈ ಸಾಧನೆಗೆ ಸ್ಪೂರ್ತಿಯಾಗಿದೆ ಎಂದು ವಿದ್ಯಾರ್ಥಿನಿಯರು ತಿಳಿಸಿದರು.

ವರದಿ: ಅಜಯ. ಚ
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
