ತೀವ್ರ ಹೃದಯಾಘಾತದಿಂದ ಪೋಲಿಸ್ ಮುಖ್ಯ ಪೇದೆ ಸಾವು
ಬಾಗಲಕೋಟ ಜಿಲ್ಲೆಯ ಬನಹಟ್ಟಿ ನಗರ ಪೋಲಿಸ್ ಠಾಣೆಯ ಪೋಲಿಸ್ ಪೇದೆ ಸುರೇಶ ಗುಗ್ಗರಿ (49 )ಸಂಜೆ ಸುಮಾರಿಗೆ ತಮ್ಮ ವಸತಿ ಗೃಹದಲ್ಲಿ ತೀವ್ರ ಹೃದಯಾಘಾತವಾಗಿ ಸಾವಿಗಿಡಾದ ಘಟನೆ ನಡೆದಿದೆ. ಕಳೆದ 21 ವರ್ಷಗಳಿಂದ ಸೇವೆ ಸಲ್ಲಿಸಿತ್ತಿದ್ದ ಪೋಲಿಸ್ ಪೇದೆ. ಮೂಲತಃ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೋನವಾಡ ಗ್ರಾಮದವರಾಗಿದ್ದ ಪೇದೆ ಸುರೇಶ ಗುಗ್ಗರಿ. ಈ ಪೇದೆಯ ಹೃದಯಾಘಾತದ ಸುದ್ದಿ ತಿಳಿದ ಜಮಖಂಡಿಯ ಡಿವೈಎಸ್ಪಿ ಎಂ. ಪಾಂಡುರಂಗಯ್ಯಾ ಮತ್ತು ಬನಹಟ್ಟಿ ಸಿಪಿಐ ಜೆ.ಕರುಣೆಶಗೌಡ ಮತ್ತು ಠಾಣಾಧಿಕಾರಿ ಪಿಎಸ್ಐ ಸುರೇಶ ಮಂಟೂರ ಅವರು ಹಾಗೂ ಠಾಣೆ ಎಲ್ಲಾ ಸಿಬ್ಬಂದಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಸಹ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ಸುರೇಶ ಗುಗ್ಗರಿ.

ವರದಿ.
ಬಸವರಾಜ ನಂದೆಪ್ಪನವರ
ಬನಹಟ್ಟಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
