;

ಪಿಎಸ್‌ಐ ನೇಮಕಾತಿ ಹಗರಣ ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಕರವೇ ಪ್ರತಿಭಟನೆ…!!!

ಪಿಎಸ್‌ಐ ನೇಮಕಾತಿ ಹಗರಣ ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಕರವೇ ಪ್ರತಿಭಟನೆ.

ಸಿಂಧನೂರು : ನಗರದ ತಾಲೂಕು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಕರವೇ ಕಾರ್ಯಕರ್ತರು ಸರ್ಕಾರದ ವಿರುದ್ಧ ದಿಕ್ಕಾರಗಳನ್ನು ಕೂಗುತ್ತಾ ತಹಸೀಲ್ದಾರ ಮುಖಾಂತರ ಕರವೇ (ಪ್ರವೀಣ್ ಶೆಟ್ಟಿ ಬಣ) ತಾಲೂಕು ಘಟಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾದವರ ಬಂಧಿಸಿ ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಕೆಲವು ಪ್ರಾಮಾಣಿಕ ವ್ಯಕ್ತಿಗಳು ನೇಮಕಾತಿ ಹೊಂದಿದ್ದು, ಅಂತಹವರನ್ನು ಗುರುತಿಸಿ, ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳಬೇಕು.ನೂರು ಮಂದಿ ಅಪರಾಧಿಗಳಿಗೆ ಶಿಕ್ಷೆಯಾದರೂ ಪರವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು.ಇದು ಸಂವಿಧಾನ ಬದ್ಧ ಶಾಸನವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ವೀರೇಶ ಬಾವಿಮನಿ ಮಾತನಾಡಿದರು.
ಪಿ.ಎಸ್.ಐ ನೇಮಕಾತಿ ಹಗರಣ ಸಾರ್ವತ್ರಿಕವಾಗಿ, ಈಗಾಗಲೇ ತಮ್ಮ ಸರಕಾರ ಈ ನಿಟ್ಟನಿನಲ್ಲಿ ಕ್ರಮ ಜರುಗಿಸುತ್ತಿರುವದು, ಮತ್ತು ತಮ್ಮ ನಿರ್ಧಾರಗಳು, ಹಾಗೂ ಮುಕ್ತ ಪಾರದರ್ಶಕವಾಗಿ ಇರಲಿ, ಎಂಬ ಉದ್ದೇಶದಿಂದ ಈ ನೇಮಕಾತಿಗೆ ಮರು ಪರೀಕ್ಷೆಗೆ ಆದೇಶ ಹೊರಡಿಸಿದ್ದು ಸ್ವಾಗತಾರ್ಹ ವಿಷಯವಾಗಿದೆ.
ಈ ಹಗರಣವನ್ನು ಬಯಲಿಗೆ ಎಳೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕು, ಈಗಾಗಲೇ ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ, ಇನ್ನು ಅನೇಕರು ಭಾಗಿಯಾಗಿರಬಹುದು, ಅವರೆಲ್ಲರನ್ನು ಬಯಲಿಗೆ ಎಳೆಯಬೇಕು. ನಿರೊದ್ಯೋಗಿ ವಿದ್ಯಾವಂತ ಯುವಕರು ಉದ್ಯೋಗ ಪಡೆಯುವ ಸಲುವಾಗಿ ಇಂತಹ ಕೆಟ್ಟ ಜನರ ಮಾತಿಗೆ ಮರುಳಾಗಿ ಇದ್ದ ಬಿದ್ದ ಆಸ್ತಿ ಮಾರಿ,ಇಲ್ಲವೆ ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಂಡು ಹಣ ಕೊಟ್ಟಿರುವುದು ಬೇಕಾದಷ್ಟು ಉದಾಹರಣೆಗಳು ನಮ್ಮ ಮುಂದೆ ಇದ್ದು, ಮುಂದೆ ಇಂತಹ ಅವಘಡಗಳು ನಡೆದು ಹೋಗಿ, ನೇಮಕಾತಿ ಆದೇಶ ಹಿಂದಕ್ಕೆ ಪಡೆದುಕೊಂಡಾಗ ಇಂತಹ ಅಮಾಯಕ ಯುವಕರು ಅಪಾಯಕಾರಿ ನಿರ್ಧಾರ ತೆಗೆದುಕೊಂಡಿರುವುದು ಕೂಡ ಉಂಟು. ಮರು ಪರೀಕ್ಷೆಗೆ ತಾವುಗಳು ಪರಮಾನು ಹೊರಡಿಸಿದ್ದು, ಇದರಲ್ಲಿ ಅನೇಕ ಅಮಾಯಕ ಯುವಕರು ಈ ನೇಮಕಾತಿಯಿಂದ ವಂಚಿತರಾಗಿದ್ದಾರೆ. ಈ ಗುಂಪಿನಲ್ಲಿ ಶೇಕಡಾ 10 ರಿಂದ 15 ರಷ್ಟು ವಿದ್ಯಾರ್ಥಿಗಳು ಪ್ರಮಾಣಿಕತೆಯಿಂದ ಸತತ ಅಭ್ಯಾಸ ಮಾಡಿ, ತಮ್ಮ ಪರಿಶ್ರಮ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ನೇಮಕಾತಿ ಹೊಂದಿದ್ದಾರೆ, ತಮ್ಮ ಆದೇಶದಿಂದ ಇಂತಹ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯ ಏನಾಗುತ್ತದೆ ಎಂಬುದು ಕೂಡಾ ಅಷ್ಟೇ ಸತ್ಯವಾದ ಸಂಗತಿ. ಅದಕ್ಕಾಗಿ ತಾವುಗಳು ಇಂತಹ ವಿದ್ಯಾರ್ಥಿಗಳನ್ನು , ಪರಿಗಣಿಸಿ, ತನಿಖೆಯಿಂದ ಖಚಿತಗೊಂಡ ಕೂಡಲೇ ಇಂತಹವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ನೀಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಯಿಸಿದರು.

ಈ ಸಂದರ್ಭದಲ್ಲಿ ಮುದಿಯಪ್ಪ ,ಎಮ್ ಡಿ. ಪಾರುಕ್,ನಿಂಗರಾಜ,ರಾಜಾಹುಸೇನ,ಹುಸೇನಬಾಷಾ ಪ್ರೊಟ್, ಫಾಕ್ರುದ್ದೀನ್, ಅಂಬಿರಾಜು, ಮುನ್ನಾ ಇಂದಿರಾಗರ, ಶಿವಕುಮಾರ,ಅಲಂಬಾಷ,ರವಿಕುಮಾರ, ಕಲೀಮ್ ಪಾಟೀಲ್ ಹಟ್ಟಿ, ಮಹಿಬೂಬ್, ಆಕಾಶ, ಶಿವು, ಅದಿಲ್ ಜಾರಗಿದರ, ಹುಲುಗಪ್ಪ ಸೇರಿದಂತೆ ಇತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *