ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು
ಗ್ರಾಂ. ಪಂ. ಚುನಾವಣೆಯಲ್ಲಿ ಸೋತು ನ್ಯಾಯಾಲಯದಲ್ಲಿ ಗೆದ್ದ ಅಭ್ಯರ್ಥಿ..
2020.ಡಿ 20 ರಂದು ಗುಂಡುಮುಣುಗು ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ, ಗುಂಡುಮುಣುಗು ಗ್ರಾಮ ಪಂಚಾಯಿತಿ ಮೂರನೆ ಕ್ಷೇತ್ರ ( ಸಾಮಾನ್ಯ ) ಕ್ಕೆ ಸಿದ್ದಾಪುರ ಗ್ರಾಮದ ಜೆಎಸ್ ಶಿವಪ್ರಸಾದ್ ಮತ್ತು ಎ. ವಿ ವಿಜಯೇಂದ್ರ ಕುಮಾರ, ಸ್ಪರ್ಧೆ ಮಾಡಿದ್ದರು, ಚುನಾವಣೆ ನಂತರ ಜೆ. ಎಸ್. ಶಿವಪ್ರಸಾದ್ ರವರ ಗಿಂತ ಎ.ವಿ ವಿಜೇಂದ್ರ ಕುಮಾರ್ ರವರು ಅಧಿಕ ಮತಗಳನ್ನು ಪಡೆದು ವಿಜೇತ ರಾಗಿದ್ದರು.
ಈ ಚುನಾವಣೆ ಸಂಬಂಧ ಸೋತ ಅಭ್ಯರ್ಥಿ ಜೆ. ಎಸ್ ಶಿವಪ್ರಸಾದ್ ರವರು ಚುನಾವಣೆಯಲ್ಲಿ ಗೆದ್ದ ವಿಜಯೇಂದ್ರ ಕುಮಾರ್ ರವರು ನಾಮಪತ್ರ ಸಲ್ಲಿಸುವಾಗ ತಪ್ಪು ಮಾಹಿತಿ ದಾಖಲೆಗಳನ್ನು ಸಲ್ಲಿಸಿದ್ದಾರೆ, ಚುನಾವಣೆ ಅಧಿಕಾರಿಗಳು ನಾಮ ಪತ್ರಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದೆ ಸಿಂಧು ಗೊಳಿಸಿದ್ದಾರೆ ಎಂದು ಕೂಡ್ಲಿಗಿ ಹಿರಿಯ ನ್ಯಾಯಾಲಯದಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು.ಎರಡು ಕಡೆ ಸಾಕ್ಷಿ ಪುರಾವೆ ಮತ್ತು ವಾದಗಳನ್ನು ಆಲಿಸಿ, ಕಾಗದ ಪತ್ರಗಳನ್ನು ಪರಿಶೀಲನೆ ಮಾಡಿದ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್.ನಾಗೇಶ್ ರವರು ಚುನಾವಣೆಯಲ್ಲಿ ಗೆದ್ದ ಎ. ವಿ ವಿಜೇಂದ್ರ ಕುಮಾರ್ ರವರ ಸದಸ್ಯತ್ವವನ್ನು ರದ್ದುಗೊಳಿಸಿ ಸೋತ ಅಭ್ಯರ್ಥಿ,ಜೆ. ಎಸ್. ಶಿವಪ್ರಸಾದ್ ರವರನ್ನು ಹಾಲಿ ಚುನಾಯಿತ ಅಭ್ಯರ್ಥಿ ಎಂದು ಆದೇಶಿಸಿದ್ದಾರೆ. ಹಿರಿಯ ವಕೀಲರಾದ ಟಿ ಮಲ್ಲಿಕಾರ್ಜುನ ಸ್ವಾಮಿ, ಸಹ ವಕೀಲರಾದ ಎ ಶಿವರಾಜ್, ಟಿ ಶರತ್, ಅರ್ಜಿದಾರರ ಪರ ವಾದ ಮಂಡಿಸಿದ್ದರು….

ವರದಿ. ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
