;

ಕಾರ್ಮಿಕರಿಗೆ ಮರಣ ಶಾಸನ” ಬರೆಯಲಿರುವ ಕಾರ್ಮಿಕ ತಿದ್ದುಪಡಿ ಕಾಯ್ದೆ ರದ್ದುಗೊಳಿಸಿ – ಎಂ. ಗಂಗಾದರ್…!!!

ಕಾರ್ಮಿಕರಿಗೆ ಮರಣ ಶಾಸನ” ಬರೆಯಲಿರುವ ಕಾರ್ಮಿಕ ತಿದ್ದುಪಡಿ ಕಾಯ್ದೆ ರದ್ದುಗೊಳಿಸಿ – ಎಂ. ಗಂಗಾದರ್.

ಸಿಂಧನೂರು : ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಎರಡು ದಿನಗಳ 48 ಗಂಟೆಗಳ ಆಖಿಲ ಭಾರತ ಮುಷ್ಕರಕ್ಕೆ ಇಂದು ಟ್ರೀಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ-ಟಿಯುಸಿಐ ಹಾಗೂ ಶ್ರಮಜಿವಿ ಎಪಿಎಂಸಿ ಹಮಾಲರ ಸಂಘ, ಸಿಂಧನೂರು ವತಿಯಿಂದ “ಕಾರ್ಮಿಕರಿಗೆ ಮರಣ ಶಾಸನ” ಬರೆಯಲಿರುವ ಕಾರ್ಮಿಕ ತಿದ್ದುಪಡಿ ಕಾಯ್ದೆಯ ಹಾಗೂ ಭಾರತದ ಒಕ್ಕೂಟ ಸರಕಾರದ ಪ್ರಧಾನ ಮಂತ್ರಿ ಮೋದಿಯ ಅಣಕು ಶವಯಾತ್ರೆಯ ಹೋರಾಟವನ್ನು ನಗರದ ಜಗಜ್ಯೋತಿ, ಕ್ರಾಂತಿಯೋಗಿ ಶ್ರೀ ಬಸವೇಶ್ವರ ವೃತ್ತದಿಂದ, ಸತ್ತಾನಪ್ಪೋ ಸತ್ತಾನೋ ನರೇಂದ್ರ ಮೋದಿ ಸತ್ತಾನೋ ! ಕಾರ್ಮಿಕ ವಿರೋಧಿ ಮೋದಿ ಸರಕಾರಕ್ಕೆ ಧಿಕ್ಕಾರ ! ರೈತ-ಕಾರ್ಮಿಕರ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಿ ! ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸಲೇಬೇಕು ! ಕಾರ್ಮಿಕರಿಗೆ ಕನಿಷ್ಟ ವೇತನ 25000 ರೂ. ನೀಡಲೇಬೇಕು ! ಬ್ಯಾಂಕ್ ಗಳ ವಿಲೀನ ನಿಲ್ಲಿಸಿ ! ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದಾಗಲಿ ! ಎಂದು ಘೋಷಣೆಗಳನ್ನು ಕೂಗುತ್ತಾ, ಬಸ್ ನಿಲ್ದಾಣದ ಮುಂಭಾಗ, ಗಾಂಧಿ ವೃತ್ತದಿಂದ ತಹಶಿಲ್ದಾರರ ಕಛೇರಿಗೆ ತಲುಪಿ ರಾಷ್ಟ್ರಪತಿಗಳಿಗೆ ತಹಶಿಲ್ದಾರರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.

ಜಾಗತೀಕರಣ, ಖಾಸಗೀಕರಣ, ಉದಾರೀಕರಣ,ನೀತಿಗಳಿಂದಾಗಿ ದೇಶದ ಸರ್ವ ಸಂಪನ್ಮೂಲ ಕಾರ್ಪೋರೇಟ್ ಬಂಡವಾಳಿಗರ ಪಾಲಾಗಿ ಹರಿದು ಹೋಗುತ್ತಿದೆ. ಕೃಷಿ ವಿರೋಧಿ, ಕಾರ್ಮಿಕ ವಿರೋದಿ ತಿದ್ದುಪಡಿ ಕಾಯ್ದೆಗಳಿಂದ ರೈತ-ಕಾರ್ಮಿಕರ ಬದುಕು ಬಾರೀಸಂಕಷ್ಟವನ್ನು ಎದುರಿಸುತ್ತಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅಸಂಖ್ಯಾತ ಕಾರ್ಮಿಕರು, ದುಡಿಯುವ ವರ್ಗದ ವಿಮೋಚನೆಗಾಗಿ ರಕ್ತ ಹರಿಸಿ, ಹೋರಾಡಿ ಪಡೆದಂತಹ 44 ಕಾರ್ಮಿಕ ಕಾನೂನುಗಳನ್ನು ಈ ಮನುವಾದಿ ಮೋದಿ ಒಕ್ಕೂಟ ಸರಕಾರ ತಿದ್ದುಪಡಿ ಮಾಡಿ, ಬಂಡವಾಳಗಾರರಿಗೆ, ಕಾರ್ಪೋರೇಟ್ ಕಂಪನಿಯವರಿಗೆ ಲಾಭವಾಗುವ, ಕೇವಲ 4 ಕಾರ್ಮಿಕ ಸಂಹಿತೆಗಳಾಗಿ ಜಾರಿ ಮಾಡಿದ್ದರಿಂದ ಕಾರ್ಮಿಕರಿಗಾಗಿ ಬರೆದ ಮರಣ ಶಾಸನವಾಗಿವೆ. ಕಾರಣ ಸರಕಾರ ಕೂಡಲೇ 4 ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಟಿಯುಸಿಐ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ ಮಾತನಾಡಿದರು.

ದಿನ ದಿನಕ್ಕೆ ಗಗನಕ್ಕೇರುತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ, ತೈಲ ಬೆಲೆ ಏರಿಕೆ, ಅಡುಗೆ ಅನಿಲದ ಬೆಲೆ ಏರಿಕೆ ಜನ ಸಾಮಾನ್ಯರ ಬದುಕನ್ನು ಕಿತ್ತು ತಿನ್ನುತ್ತಿದೆ. ಕೂಡಲೇ ಒಕ್ಕೂಟದ ಸರಕಾರ ರೈತ-ಕಾರ್ಮಿಕ ವಿರೋಧಿ ಕರಳಾ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.

2ನೇ ದಿನದ ಮುಷ್ಕರದ ಭಾಗವಾಗಿ ಮೋದಿ ಅಣುಕು ಶವ ಯಾತ್ರೆ ಹೋರಾಟವನ್ನು ಬೆಂಬಲಿಸಿ ಬಹುಜನ ಸಮಾಜವಾದಿ ಪಕ್ಷದ ಎಂ.ಕೆ. ಜಗ್ಗೇಶ ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ಮಾತನಾಡಿದರು. ನಂತರ ಹೋರಾಟಗಾರರೇಲ್ಲರೂ ಸತ್ತಾನಪ್ಪೋ ಮೋದಿ ಎಂದು ಬೊಬ್ಬೆ ಹೊಡೆದುಕೊಂಡು, ಶೀರೆಸ್ತೆದಾರ ಚಂದ್ರಶೇಖರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಮೋದಿ ಅಣಕು ಶವಯಾತ್ರೆಯ ಹೋರಾಟದಲ್ಲಿ ಶ್ರಮಜೀವಿ ಹಮಾಲರ ಸಂಘದ ಅಧ್ಯಕ್ಷ ಮಾಬುಸಾಬ ಬೆಳ್ಳಟ್ಟಿ,ಹಮಾಲಿ ಸಂಘದ ಕಾರ್ಯದರ್ಶಿ,ಹೆಚ್.ಆರ್.ಹೊಸಮನಿ, ಉಪಾಧ್ಯಕ್ಷ, ನಾಗಪ್ಪ ಉಮಲೂಟಿ, ಕರ್ನಾಟಕ ರಕ್ಷಣಾ ವೇಧಿಕೆಯ ದೌಲಸಾಬ ದೊಡ್ಡಮನಿ, ಖಜಾಂಚಿ, ತಿಮ್ಮಣ್ಣ ಯಾದವ್, ಜೈಭೀಮ್ ಲಾಲ್ ಸಲಾಮ್ ಕಲಾಮಂಡಳಿಯ ಯಲ್ಲಪ್ಪ ಗೋಮರ್ಸಿ, ರುಕ್ಮೀಣೇಮ್ಮ, ಹಮಾಲಿ ಸಂಘದ ಸದಸ್ಯರಾದ, ದೌಲಸಾಬ ಮುದಗಲ್, ರಮೇಶ ನಾಯಕ,ಬಸವರಾಜ ದೇಸಾಯಿ,ರಮಜಾನ್ ಸಾಬ, ಮಾರುತಿ ಬೇರ್ಗಿ, ಬಾಲಪ್ಪ, ಯಮನೂರ, ರಾಜಾನಾಯ್ಕ, ಮಾನಪ್ಪ, ಪರಸಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend