;

ನಗರಸಭೆಯಲ್ಲಿ 5.25 ಲಕ್ಷ ರೂ. ಉಳಿತಾಯ ಬಜೆಟ್ ಗೆ ಸರ್ವಸದಸ್ಯರ ಒಪ್ಪಿಗೆ…!!!

ನಗರಸಭೆಯಲ್ಲಿ 5.25 ಲಕ್ಷ ರೂ. ಉಳಿತಾಯ ಬಜೆಟ್ ಗೆ ಸರ್ವಸದಸ್ಯರ ಒಪ್ಪಿಗೆ.

ಸಿಂಧನೂರು : 2022-23ನೇ ಸಾಲಿನ ಆಯವ್ಯಯ ಮಂಡನೆಯಲ್ಲಿ 5.25 ಲಕ್ಷ ರೂ. ಉಳಿತಾಯ ಬಜೆಟ್ ಗೆ ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ ಅಧ್ಯಕ್ಷತೆಯಲ್ಲಿ ಯಾವುದೇ ಚರ್ಚೆಯಿಲ್ಲದೇ ಸರ್ವಸದಸ್ಯರ ಅನುಮೋದನೆ ನೀಡಲಾಯಿತು.

2022-23 ನೇ ಸಾಲಿನ ಎಸ್. ಎಸ್. ಸಿ ಮುಕ್ತ ನಿಧಿ ಅನುದಾನ 1.95 ಕೋಟಿ, ವಿಶೇಷ ಅನುದಾನ 5.00 ಕೋಟಿ, 15ನೇ ಹಣಕಾಸು 4.73 ಕೋಟಿ, ಕುಡಿಯುವ ನೀರು 35.00 ಲಕ್ಷ, ವೇತನ 5.03 ಲಕ್ಷ, ವಿದ್ಯುತ್ 1.52. ಕೋಟಿ, ಸ್ವಚ್ಛ ಭಾರತ ಮಿಷನ್ 10.00 ಲಕ್ಷ, ಡೇ ನಲ್ಮ ಅನುದಾನ 3.45 ಲಕ್ಷ ಸರ್ಕಾರದ ವಿವಿಧ ಅನುದಾನಗಳಿಂದ ಬರುವ ಅನುದಾನ ಹಾಗೂ ಸ್ವಂತ ಸಂಪನ್ಮೂಲಗಳಿಂದ ಬರುವ ಆದಾಯವನ್ನು ಅಭಿವೃದ್ಧಿ ಕಾಮಗಾರಿಗೆ ಅಥವಾ ಹೊಸ ಯೋಜನೆಗೆ ಅಳವಡಿಸಿಕೊಳ್ಳಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾ ಸುರೇಶ ಜಾಧವ ಬಜೆಟ್ ಪುಸ್ತಕ ಓದಿ ಮಂಡಿಸಿದರು.

ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್ ಮಂಡನಾ ಸಭೆಯಲ್ಲಿ 2022-23ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದ ನಂತರ ಮಾತನಾಡಿದ ಮಲ್ಲಿಕಾರ್ಜುನ ಪಾಟೀಲ್ ಎಸ್ ಸಿ/ಎಸ್.ಟಿ ಯವರಿಗೆ ಅಂಬೇಡ್ಕರ್ ವಸತಿ ಯೋಜನೆ ಮತ್ತು ವಾಜಪೇಯಿ 100 ಮನೆಗಳ ಗುರಿ ಹೊಂದಿದ್ದು ಇನ್ನೂ 400 ಮನೆಗಳು ಹೆಚ್ಚುವರಿಯಾಗಿ ಮಂಜೂರಾಗಿವೆ.ಎಸ್.ಸಿ./ಎಸ್.ಟಿ. 3.20 ಲಕ್ಷ, ಇತರೆ ಜಾತಿಯವರಿಗೆ 2.20 ಅರ್ಹ ಮನೆಗಳ ನಿರ್ಮಾಣಕ್ಕೆ ನೀಡಲಾಗುವುದು. ಫಲಾನುಭವಿಗಳು ಎಪ್ರಿಲ್ 15ರ ಒಳಗಾಗಿ ಅರ್ಜಿ ನೀಡಲು ಅವಕಾಶವಿದೆ ನಿಮ್ಮ ವಾರ್ಡನ ಫಲಾನುಭವಿಗಳಿಗೆ ತಿಳಿಸಲು ಸದಸ್ಯರಿಗೆ ಹೇಳಿದರು.ನಗರದ ಸುಕಾಲಪೇಟೆ ಮತ್ತು ಪ್ರವಾಸಿ ಮಂದಿರದ ಪಕ್ಕದಲ್ಲಿರುವ ಮಳಿಗೆಗಳು ಪೂರ್ಣಗೊಂಡಿದ್ದು ಎಪ್ರಿಲ್ ಅಥವಾ ಮೇತಿಂಗಳಲ್ಲಿ ಮತ್ತು ಯುಜಿಡಿ ಕಾಮಗಾರಿ ಎಪ್ರಿಲ್ 30ರ ಒಳಗಡೆ ನಗರಾಭಿವೃದ್ಧಿ ಸಚಿವರ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಗುವುದು. ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, ಕಾಲುವೆಗೆ ನೀರು ಬಿಡುವವರೆಗೆ ಏಳು ದಿನಕೊಮ್ಮೆ ಅಗಸ್ಟ್ ತಿಂಗಳಿನಿಂದ ಕುಡಿಯುವ ನೀರು ವಾರದಲ್ಲಿ ಮೂರು ದಿನಗಳ ಕಾಲ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ನಗರಸಭೆ ವಿವಿಧ ಮೂಲಗಳ ಆದಾಯ 29.ಕೋಟಿ 34ಲಕ್ಷ ರೂ.29.29 ಕೋಟಿ ನಿರೀಕ್ಷಿತ ಖರ್ಚು, 5.25 ಲಕ್ಷ ನಿವ್ವಳ ಉಳಿತಾಯ ಆದಾಯ ನಗರಸಭೆ ಹೊಂದಿದೆ.

ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ನಾಲ್ಕು ವರ್ಷವಾದರೂ 50% ಕೆಲಸ ಮುಗಿದಿಲ್ಲ ಒಂದು ತಿಂಗಳ ಒಳಗೆ ಹೇಗೆ ಕೆಲಸ ಮುಗಿಸಿ ಉದ್ಘಾಟನೆ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ನಗರಸಭೆ ಪೌರಾಯುಕ್ತ ಜಮಾಜಾಯಿಸಿ ನೀಡಿದರು.

ನಗರವನ್ನು ಸ್ವಚ್ಛ ನಗರ ನಿರ್ಮಾಣಕ್ಕೆ ಆಯವ್ಯಯದಲ್ಲಿ ಆದ್ಯತೆ ನೀಡಲಾಗಿದೆ. ನಗರದಲ್ಲಿರುವ ಚರಂಡಿ ಶುದ್ಧ ಕುಡಿಯುವ ನೀರು,ನಗರವನ್ನು ಹಸಿರೀಕರಣಗೊಳಿಸಿ ಸುಂದರಗೊಳಿಸಲು ಕ್ರಮಕೈಗೊಳ್ಳಲಾಗುವುದು. ನಗರದಲ್ಲಿ ವಾರಕ್ಕೊಮ್ಮೆ 1 ವಾರ್ಡ್‍ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ ನನ್ನನ್ನು ಸಂಪರ್ಕ ಮಾಡಿ ತಮ್ಮ ವಾರ್ಡಿಗೆ ಬಂದು ಜನಸಾಮಾನ್ಯರ ಸಮಸ್ಯೆಯನ್ನು ತಿಳಿದುಕೊಳ್ಳುವೆ.ಡಬ್ಯೂಟಿಪಿ ಹಾಗೂ ಯುಜಿಡಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಸಚಿವರಾದ ಬೈರತಿ ಬಸವರಾಜ ಅಧ್ಯಕ್ಷತೆಯಲ್ಲಿ ತಾಲೂಕಿನ ಶಾಸಕರಾದ ವೆಂಕಟರಾವ್ ನಾಡಗೌಡ ನೇತ್ರತ್ವದಲ್ಲಿ ಗುತ್ತೆದಾರರಿಗೆ ಎಪ್ರಿಲ್ ಕೊನೆಯ ವಾರದೊಳಗೆ ಮುಗಿಸಿಕೊಡುವಂತೆ ತಿಳಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಸಭೆಗೆ ತಿಳಿಸಿದರು .
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮುರ್ತಜಾ ಹುಸೇನ್, ಸದಸ್ಯರಾದ ಜೀಲಾನಿಪಾಷ, ಚಂದ್ರಮೈಲಾರಿ, ಹನುಮೇಶ ಕುರುಕುಂದಾ, ಸೇರಿದಂತೆ ಇತರ ಸದಸ್ಯರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;