;

ಜೀವವನ್ನು ಕೊಡುತ್ತೇವೆ ಜಮೀನು ಕೊಡಲ್ಲ – ಶರಣಪ್ಪ ಮರಳಿ…!!!

ಜೀವವನ್ನು ಕೊಡುತ್ತೇವೆ ಜಮೀನು ಕೊಡಲ್ಲ – ಶರಣಪ್ಪ ಮರಳಿ.

ಸಿಂಧನೂರು :6ಎಕರೆ 30ಗುಂಟೆ ಜಮೀನಿಗೆ ಕೇವಲ 30 ಸಾವಿರ ಸಾಲ ಪಡೆದ ರೈತ ಸಾಲ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಬ್ಯಾಂಕ್ ಹರಾಜು ಪ್ರಕ್ರಿಯೆಗೆ ಮುಂದಾಗಿದೆ.ನಮ್ಮ ಜೀವವನ್ನಾದರೂ ಕೊಡುತ್ತೇವೆ ಆದರೆ ಜಮೀನು ಹರಾಜಿಗೆ ಕೊಡುವುದಿಲ್ಲ ಎಂದು ನೊಂದ ರೈತರ ಪರವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾದ್ಯಕ್ಷರಾದ ಶರಣಪ್ಪ ಮರಳಿ ಮಾತನಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು ತಾಲೂಕಿನ ದಡೇಸೂಗೂರು ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕು ಏಪ್ರಿಲ್ 8 ರಂದು ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕಾಗಿ 15 ರೈತರ ಹೊಲಗಳನ್ನು ಜಪ್ತಿ ಮಾಡುವ ಕಾರ್ಯಕ್ಕೆ ಬ್ರಾಂಚ್ ಮ್ಯಾನೇಜರ್ ವಿಶ್ವನಾಥ ಮುಂದಾಗಿದ್ದಾರೆ ಇದು ಅಸಬಂದ್ದವಾದದು ಈ ಕುರಿತು ನಮ್ಮ ಸಂಘಟನೆ ಬಳ್ಳಾರಿ ಶಾಖೆಯ ಮುಖ್ಯಸ್ಥರ ಗಮನಕ್ಕೆ ತಂದಾಗ ಒಂದು ಲಕ್ಷಕ್ಕೆ ಶೇ10% ರಷ್ಟನ್ನು ಮಾತ್ರ ಕಟ್ಟಬೇಕೆಂದು ತಿಳಿಸಿದರೂ ದಡೆಸೂಗೂರು ಬ್ಯಾಂಕ್ ನವರು ಗಮನಕ್ಕೆ ತೆಗೆದುಕೊಳ್ಳದೇ ತಮ್ಮ ಕಾರ್ಯಕ್ಕೆ ತಾವು ಮುಂದಾಗಿರುವದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆಂದರು.ಈ ಘಟನೆ ಕುರಿತಂತೆ ಆಗುವ ಅನಾಹುತಗಳಿಗೆ ಸರ್ಕಾರ ಎಡೆ ಮಾಡಿ ಕೊಡದೆ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಬೇಕೆಂದರು.

ಏಪ್ರಿಲ್ 21 ರಂದು ಬೃಹತ್ ಸಮಾವೇಶವಿದ್ದು ಪಂಪಸೆಟ್ ಗಳಿಗೆ ನೀಡುವ ವಿದ್ಯುತ್ ಕುರಿತು ಮತ್ತು ಪ್ರತಿ ಇಲಾಖೆಗಳಲ್ಲಿ ಲಂಚ ಇಲ್ಲದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಇದಕ್ಕೆ ನಿರ್ಭಂದ ಸರ್ಕಾರದ ಮಟ್ಟದಲ್ಲಿ ಹಾಕಬೇಕು ಎಂಬ ಹಲವಾರು ಬೇಡಿಕೆಗಳ ಕುರಿತಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಹೆಚ್ಚು ಹೆಚ್ಚು ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು. ಮತ್ತು ಏಪ್ರಿಲ್ 15 ರವರೆಗೆ ಕಾಲುವೆಗೆ ನೀರು ಬಿಡಬೇಕು ಹಾಗೂ ಭತ್ತ ಖರೀದಿಯಲ್ಲಿ ಬೆಂಬಲ ಬೆಲೆ ಜೊತೆಗೆ ಒಂದು ಸಾವಿರ ರೂ ಪ್ರೊತ್ಸಾಹ ಧನ ನೀಡಬೇಕು ಮತ್ತು ಜೋಳ, ತೊಗರಿ ಬೆಳೆಗಳ ನಷ್ಟ ಪರಿಹಾರ ಪ್ರಭಾವಿಗಳಿಗೆ ಮಾತ್ರ ತಲುಪಿದೆ ಹಾಗೂ ಖಾಲಿ ಜಾಗದಲ್ಲಿ , ಸಂಬಂಧಿಸಿದ ಬೆಳೆ ಇಲ್ಲದೇ ಬೆರೊಂದು ಬೆಳೆಗೆ ಪ್ರತಿ ಬೆಳೆಗೆ ಮೂರು ಸಾವಿರ ರೂ ಪಡೆದು ಜಿ.ಪಿ.ಎಸ್ ಮಾಡಿದ್ದಾರೆಂದು ಜಿಲ್ಲಾದ್ಯಕ್ಷರಾದ ಶರಣಪ್ಪ ಮರಳಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇದೇ ಸಂಧರ್ಭದಲ್ಲಿ ಸಂಘಟನೆ ತಾಲೂಕು ಅದ್ಯಕ್ಷರಾದ ಶಿವರಾಜ ಸಾಸಲಮರಿ, ಜಿಲ್ಲಾ ಉಪಾಧ್ಯಕ್ಷರಾದ ರಾಮಯ್ಯ ಜವಳಗೇರಾ ,ಪ್ರಧಾನ ಕಾರ್ಯದರ್ಶಿ ಪಿ.ಹುಲಗಯ್ಯ ತಿಮ್ಮಾಪುರ , ರೈತರಾದ ಆಲಂಭಾಷಾ,ಮಾಳಿಂಗರಾಯ,ಶರಣಪ್ಪ ಬೂದಿಹಾಳ, ಈರಲಿಂಗಪ್ಪ ಜವಳಗೇರಾ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;