ಬಿಜೆಪಿಯ ಸಂಘಪರಿವಾರದ, ಅಟ್ಟಹಾಸವನ್ನು ಒಕ್ಕೂಟವು ಉಗ್ರವಾಗಿ ಖಂಡಿಸುತ್ತದೆ – ಎಂ.ಗಂಗಾಧರ.
ಸಿಂಧನೂರು : ದಕ್ಷಿಣ ಕರ್ನಾಟಕದ ಕೆಲವೆಡೆ ಮುಸ್ಲಿಂ ಸಮುದಾಯದ ವರ್ತಕರಿಗೆ ದೇವಸ್ಥಾನ,ಜಾತ್ರೆ,ಉತ್ಸವಗಳಲ್ಲಿ ವ್ಯಾಪಾರ ವಹಿವಾಟನ್ನು ಮಾಡಬಾರದು ಎಂದು ಬಹಿಷ್ಕಾರ ಹಾಕಿದ ಬಿಜೆಪಿಯ ಸಂಘಪರಿವಾರದ, ಅಟ್ಟಹಾಸವನ್ನು ನಮ್ಮ ಒಕ್ಕೂಟವು ಉಗ್ರವಾಗಿ ಖಂಡಿಸುತ್ತದೆ ಎಂದು ದಲಿತ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ ಎಂ. ಗಂಗಾಧರ ಹೇಳಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಾ ಅಸ್ಪೃಶ್ಯತೆ ಆಚರಣೆ ಇನ್ನೊಂದು ಕರಾಳ ಮುಖವೇ ಈ ಹಿಂದೂತ್ವ ವಾದಿಗಳ ಧೋರಣೆ ಯಾಗಿದೆ. ಪ್ರಜಾಪ್ರಭುತ್ವದ ಜಾತ್ಯಾತೀತ ರಾಷ್ಟ್ರದಲ್ಲಿ ಇಂತಹ ನೀಚ ಧೋರಣೆಯನ್ನು ಒಕ್ಕೂಟವು ಬಲವಾಗಿ ಖಂಡಿಸುತ್ತದೆ.ರಾಜ್ಯ ಬಿಜೆಪಿ ಸರ್ಕಾರದ ನಡೆ ಹಾಗೂ ಹಿಂದುತ್ವವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು, ಒಕ್ಕೂಟದಿಂದ ಏಪ್ರೀಲ್ ತಿಂಗಳಿನಲ್ಲಿ “ಬಹುತ್ವ ಭಾರತ ಭಾವೈಕ್ಯತಾ ಬೃಹತ್ ಸಮಾವೇಶವನ್ನು ನಡೆಸಲು ಮುಂದಾಗುತ್ತೇವೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಿದು. ಇಂತಹ ಜ್ಯಾತ್ಯಾತೀತ ತೋಟದಲ್ಲಿ ಮುಳ್ಳು ಗಿಡಗಳಾಗಿ, ಕೋಮುವಾದಿಗಳಾಗಿ, ಜಾತಿವಾದಿಗಳಾಗಿ,ಅರಳುವುದನ್ನು ನಾವು ಸಹಿಸಲಾರೆವು. ಹಿಂದೂ-ಮುಸ್ಲಿಂ, ಬಿಜೆಪಿ – ಕಾಂಗ್ರೆಸ್,ಜೆಡಿಎಸ್, ಕಮ್ಯುನಿಸ್ಟ್ -ಆರೆಸ್ಸೆಸ್ಸ್, ದಲಿತರು-ಬ್ರಾಹ್ಮಣರು, ಬಸವತತ್ವ-ಮನುವಾದ, ಕೇಸರಿ ಶ್ಯಾಲು-ರಾಷ್ಟ್ರಧ್ವಜ, ಸಂವಿಧಾನ-ಭಗವದ್ಗೀತೆ, ರಾಷ್ಟ್ರೀಯ ಏಕತೆ-ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಹೀಗೆ ಅನೇಕ ವಿಷಯಗಳಲ್ಲಿ ಭಿನ್ನಭಿಪ್ರಾಯಗಳು ಭುಗಿಲೆದ್ದಿವೆ ಅಥವಾ ಮಾದ್ಯಮಗಳು ಇದನ್ನು ಭುಗಿಲೇಳುವಂತೆ ಮಾಡಿವೆ ಎಂದು ಕಿಡಿಕಾರಿದರು.
ಹಿಂದೂ – ಮುಸ್ಲಿಂ – ಬೇಡ ಬೇಡ ! ಭಾರತೀಯತೆ ಬೇಕೇ ಬೇಕು ! ಮಾನವೀಯತೆ ಬೇಕೇ ಬೇಕು ಎಂಬಂತಹ ವಿಚಾರಧಾರೆಗಳನ್ನು ಸಮಾಜದಲ್ಲಿ ಹರಡಬೇಕಾಗಿದೆ. ಆದರೆ, ಕೆಲವು ಮೂಲಭೂತವಾದಿ ಸಂಘಟನೆಗಳು ಇಡೀ ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ. ಹಿಂದೂ ಧರ್ಮ ರಕ್ಷಕರು ನಾವು ಎಂದೂ, ಮುಸ್ಲಿಂ ಧರ್ಮ ರಕ್ಷಕರು ನಾವು ಎಂದೂ ಕೆಲವರು ಭಾರತ ದೇಶವನ್ನು ಹಾಳು ಮಾಡುತ್ತಿದ್ದಾರೆ. ದೇಶದ ಕಾನೂನು ಪೋಲೀಸ್ ಸೈನಿಕ ವ್ಯವಸ್ಥೆ ಬಲಿಷ್ಠವಾಗಿ ಕೆಲಸ ನಿರ್ವಹಿಸುತ್ತಿರುವಾಗ ಈ ಸಂಘಟನೆಗಳು ಏಕೆ ಕಾನೂನು ಕೈಗೆ ತೆಗೆದುಕೊಳ್ಳಬೇಕೆಂಬುವುದು ನಮ್ಮ ಪ್ರಶ್ನೆಯಾಗಿದೆ ಎಂದರು.
ಭಾರತದ ನೆಮ್ಮದಿಯ ಮಟ್ಟ ತೀರಾ ಕೆಳ ಮಟ್ಟಕ್ಕೆ ಕುಸಿದಿದೆ. ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯ ತೀರಾ ಕಳವಳಕಾರಿ. ಈಗ ನಡೆಯುತ್ತಿರುವ ಘಟನೆಗಳ ಹಿಂದೆ ರಕ್ತಪಾತದ ವಾಸನೆ ಬರುತ್ತಿದೆ. ಅದು ದುರ್ಘಟನೆಯ ಮುನ್ಸೂಚನೆಯಾಗಿದೆ.ಈ ಮಾಧ್ಯಮಗಳ ಹುಚ್ಚಾಟಕ್ಕೆ ಬಲಿಯಾಗದಿರಿ. ಯಾರದೋ ಒಂದು ಮಾತು, ಇನ್ಯಾರದೋ ಇನ್ನೊಂದು ಅಭಿಪ್ರಾಯ ಇಡೀ ವ್ಯವಸ್ಥೆಯ ಅನಿಸಿಕೆಯಲ್ಲ. ಹಿಂದೂ ಮುಸ್ಲಿಂ ಭಾಂಧವರೆ ಧರ್ಮಗಳು ನಮ್ಮನ್ನು ವಿಭಜಿಸುತ್ತವೆ. ಸಂವಿಧಾನ ನಮ್ಮನ್ನು ಒಂದಾಗಿಸುತ್ತದೆ.
ನಮ್ಮ ನಿಷ್ಠೆ ಸಂವಿಧಾನದ ಕಡೆಗಿರಲಿ. ಸಾಮಾನ್ಯ ಜನರೇ ಗಲಭೆಗಳು ಪ್ರಾರಂಭವಾಗುವಾಗ ನಾವು ಮಾತನಾಡದೆ ಮೌನವಾಗಿದ್ದರೆ ಅದು ನಮ್ಮನ್ನೂ ಆಹುತಿ ತೆಗೆದುಕೊಳ್ಳಬಹುದು. ಅವಕಾಶ ಸಿಕ್ಕಾಗ ಮಾತನಾಡಿ ಈ ಧಾರ್ಮಿಕ ಮೂಲಭೂತವಾದಿಗಳ ಅಜ್ಞಾನದಿಂದ ಪ್ರಪಂಚದಲ್ಲಿ ಭಾರತ ನರಳದಿರುವಂತೆ ಎಲ್ಲರೂ ಭಾವೈಕ್ಯದಿಂದ ಬದುಕನ್ನು ಕಟ್ಟಬೇಕಾಗಿದೆ . ಏಪ್ರೀಲ್ ತಿಂಗಳಿನಲ್ಲಿ ದಲಿತ-ಹಿಂದುಳಿದ, ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಅಡಿಯಲ್ಲಿ ಹಾಗೂ ರೈತ-ಕಾರ್ಮಿಕ, ಮಹಿಳಾ, ವಿದ್ಯಾರ್ಥಿ- ಯುವಜನ ಚಳುವಳಿಗಳನ್ನು ಮುನ್ನಡೆಸುತ್ತಿರುವ ಪ್ರಮುಖರು ಮತ್ತು ಸರ್ವ ಸದಸ್ಯರ, ಜ್ಯಾತ್ಯಾತೀತ ಮುಖಂಡರನ್ನೊಳಗೊಂಡು “ಬಹುತ್ವ ಭಾರತ ಭಾವೈಕ್ಯತಾ” ಹೆಸರಿನಲ್ಲಿ ಬೃಹತ್ ಸಮಾವೇಶವನ್ನು ನಮ್ಮ ಒಕ್ಕೂಟವು ಆಯೋಜನೆ ಮಾಡಲಿದ್ದೇವೆ. ಇಷ್ಟರಲ್ಲಿಯೇ ನಮ್ಮ ಒಕ್ಕೂಟದ ಸರ್ವ ಸಂಚಾಲಕರ ಸಭೆ ಕರೆದು ಸಮಾವೇಶದ ದಿನಾಂಕ ಮತ್ತು ಸ್ಥಳವನ್ನು ನಿಗದಿಗೊಳಿಸಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಚಾಲಕರಾದ ಹನುಮಂತ ಹಂಪನಾಳ,ಶಿವರಾಜ ಉಪ್ಪಲದೊಡ್ಡಿ, ದೌಲಸಾಬ್ ದೊಡ್ಡಮನೆ,ಹನುಮಂತ ದಿನ ಸಮದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
