;

ಎರಡು ದಿನಗಳ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಸಂಪೂರ್ಣ ಬೆಂಬಲ- ಶೇಕ್ಷಾಖಾದ್ರಿ…!!!

ಎಐಟಿಯುಸಿ ಕರೆ ಕೊಟ್ಟಿರುವ 2 ದಿನಗಳ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಸಂಪೂರ್ಣ ಬೆಂಬಲ- ಶೇಕ್ಷಾಖಾದ್ರಿ

ಸಿಂಧನೂರು : ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿರುವ 2 ದಿನಗಳ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಸಂಪೂರ್ಣ ಬೆಂಬಲಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ ಹಿನ್ನೆಲೆಯಲ್ಲಿ ಎರಡು ದಿನದ ಕೆಲಸ ಕಾರ್ಯಗಳನ್ನು ಬಂದು ಮಾಡಿ ಅಂಗನವಾಡಿ, ಆಶಾ ಕಾರ್ಯಕರ್ತರು, ಬಿಸಿಯೂಟ ನೌಕರರು ಮಾರ್ಚ್ 28ರಂದು ಸಿಂಧನೂರಿನಲ್ಲಿ, 29ರಂದು ಜಿಲ್ಲಾ ಕೇಂದ್ರ ರಾಯಚೂರು ನಲ್ಲಿ ಸಾಮೂಹಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಮುಖಂಡ ಶೇಕ್ಷಾಖಾದ್ರಿ ತಿಳಿಸಿದರು.

ಇಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕೆ ಹೇಳಿಕೆ ಮುಖಾಂತರ ಅಸಂಘಟಿತ ಕಾರ್ಮಿಕರ ಮಂಡಳಿ ರಚನೆ ಮಾಡಬೇಕು,ಆಶಾ ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು, 12500 ವೇತನ ನಿಗದಿಪಡಿಸಬೇಕು, 60 ವರ್ಷಗಳ ನಂತರ ನಿವೃತ್ತಿ ಸೌಲಭ್ಯವನ್ನು ನೀಡಬೇಕು, ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಬಾರದು, ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಬೇಕು, ಕಾರ್ಮಿಕ ಕಾನೂನುಗಳ ತಿದ್ದುಪಡಿ ನಿಲ್ಲಿಸಬೇಕು, ಹೀಗೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಸಾರ್ವತ್ರಿಕ ಮುಷ್ಕರ ನಡೆಸಲಾಗುವುದೆಂದರು.

ಈ ಸಂದರ್ಭದಲ್ಲಿ ಲಕ್ಷ್ಮೀದೇವಿ ಅಧ್ಯಕ್ಷರು,ಮಾಲಿನಿ ಮೇಸ್ತ ಪ್ರಧಾನ ಕಾರ್ಯದರ್ಶಿ, ಎಸ್ ವರಲಕ್ಷ್ಮಿ ಗೌರವಧ್ಯಕ್ಷರು, ಮಹಾದೇವಮ್ಮ ಖಜಾಂಚಿ ಇದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;