;

ಮಲ್ಲಾಪೂರು ಗ್ರಾಮದಿಂದ ಶ್ರೀಶೈಲಕ್ಕೆ 12ನೇ ವರ್ಷದ ಪಾದಯಾತ್ರೆ…!!!

ಮಲ್ಲಾಪೂರು ಗ್ರಾಮದಿಂದ ಶ್ರೀಶೈಲಕ್ಕೆ 12ನೇ ವರ್ಷದ ಪಾದಯಾತ್ರೆ.

ಸಿಂಧನೂರು : ತಾಲೂಕಿನ ಮಲ್ಲಾಪೂರು ಮತ್ತು ಭೂತಲದಿನ್ನಿ ಗ್ರಾಮದ ಭಕ್ತಾಧಿಗಳಿಂದ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ದರ್ಶನಕ್ಕಾಗಿ 12ನೇ ವರ್ಷದ ಪಾದಯಾತ್ರೆಯನ್ನು ಮಲ್ಲಾಪೂರು ಗ್ರಾಮದಿಂದ ಚಾಲನೆ ನೀಡಿದರು.

ಗ್ರಾಮದ ಈಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆಗೆ ಮೊದಲನೇ ದಿನ ಗ್ರಾಮದ ಭಕ್ತಾದಿಗಳು ಹಾಗೂ ಮಹಿಳೆಯರು ಊರಿನ ಹಿರಿಯರು ಗ್ರಾಮದಿಂದ ಕಳಿಸಿಕೊಟ್ಟರು. ಭೂತಲದಿನ್ನಿ, ದೇವರಗುಡಿ, ಮಲ್ಲಾಪೂರು ಗ್ರಾಮದಿಂದ ಸುಮಾರು ನಾಲ್ಕು ನೂರು ಕೀ ಮೀ. ನಷ್ಟು ದೂರವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಒಂಬತ್ತು ದಿನಗಳು ಪಾದಯಾತ್ರೆ ಮೂಲಕ ನಡೆದು ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಹಾಗೂ ಭ್ರಮರಾಂಭಿಕ ದೇವಿಯ ದರ್ಶನ ಪಡೆದು ಗ್ರಾಮಕ್ಕೆ ವಾಪಸ್ಸು ಮರಳಿ ಬರುತ್ತಾರೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸವರಾಜ ನಿಟ್ಟೂರು, ಪಂಡಿತಯ್ಯಶಾಸ್ರ್ತಿ, ಅಮರೇಶ ಹೂಗಾರ, ವೆಂಕೋಬ ಹುಣಸೆಗಿಡ, ಲಕ್ಷ್ಮಣ ಜೂಲದ, ಹನುಮಂತ ಹರಿಜನ,ಪಂಪನಗೌಡ ನಾಗರಾಳ, ಬಸವರಾಜ ಕಾರಿಗನೂರು ದುರ್ಗಪ್ಪ ಮಡಿವಾಳ ಭೂತಲದಿನ್ನಿ, ಹನುಮಂತರೆಡ್ಡಿ ಜಗ್ಗಪ್ಪ, ಬೇರಿಗೆ ಪಂಪಣ್ಣ, ಚನ್ನಬಸವ, ಹನುಮಂತಪ್ಪ ನಾಯಕ, ಮಲ್ಲಪ್ಪ ಕುರುಬರು, ಮುಂತಾದವರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;