;

ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಮನ್ಯವರ್ ಕಾನ್ಸಿರಾಮ್ ವರ 88ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು…!!!

ಸಿಂಧನೂರು : ಇಂದು ಮಾರ್ಚ 20ರಂದು ಬಹುಜನ ಸಮಾಜ ಪಾರ್ಟಿ ತಾಲೂಕು ಸಮಿತಿ ಸಿಂಧನೂರು ವತಿಯಿಂದ ಮಲ್ಕಾಪುರ ಕ್ಯಾಂಪಿನ ಗ್ರಾಮದಲ್ಲಿ ಬಹುಜನ ಸಮಾಜ ಪಕ್ಷದ ಮತ್ತು Bamcef.Ds4.ಸಂಸ್ಥಾಪಕರಾದ ಮನ್ಯವರ್ ಕಾನ್ಸಿರಾಮ್ ವರ 88ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಲ್ಕಾಪುರ ಕ್ಯಾಂಪಿನ ನರಸಿಂಹಪ್ಪ ಯಾದವ್ ಕ್ಯಾಂಡಲ್ ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ ಉಪಸ್ಥಿತಿ ಇದ್ದಂತಹ ಹನುಮಂತಪ್ಪ ಕಪ್ಪಗಲ್ ವಕೀಲರು ಇವರು ಮಾನ್ಯವರ್ ಕಾನ್ಸಿರಾಮ್ ಅವರ ಹೋರಾಟದ ವಿಚಾರವನ್ನು ತಿಳಿಸಿದರು. ನಂತರಸಿಂಧನೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹುಲುಗಪ್ಪ ಮಲ್ಕಾಪುರ್ ಅವರು ಮಾತನಾಡಿ ಭಾರತ ದೇಶಕ್ಕೆ ನಮ್ಮ ಪೂರ್ವಿಕರು ಜ್ಯೋತಿಬಾ ಫುಲೆ,ಮಾತೆ ಸಾವಿತ್ರಿಬಾಯಿ ಫುಲೆ,ಪೇರಿಯಾರ ನಾರಾಯಣ ಗುರು, ಟಿಪ್ಪುಸುಲ್ತಾನ, ಕನಕದಾಸ ಬಸವಣ್ಣ ಹೀಗೆ ಹಲವಾರು ನಾಯಕರು ಬಹು ಜನರಿಗಾಗಿ ಹೋರಾಟ ಮಾಡಿ ತಮ್ಮ ಜೀವನವನ್ನುತ್ಯಾಗ ಮಾಡಿದ ಪ್ರತಿಫಲವಾಗಿ ಇಂದು ಭಾರತ ಸಂವಿಧಾನದ ರೂಪದಲ್ಲಿ ಜೀವಂತವಾಗಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಂದ್ರ ಮಡಿವಾಳ ಮಲ್ಕಾಪುರ, ಅಂಬಣ್ಣ ಮಲ್ಕಾಪುರ, ಯಂಕಪ್ಪ ಮಲ್ಕಾಪುರ ಕ್ಯಾಂಪ, ರವಿಚಂದ್ರ ‌, ಬಾಬುಸಾಬ ಕ್ಯಾಂಪ್ ಹನುಮಂತಪ್ಪ ಬೂದಿವಾಳ ಕ್ಯಾಂಪ್ ಟೈಲರ್ ಇನ್ನೂ ಅನೇಕರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;