;

ಸುಕಾಲಪೇಟೆ ಸಮಸ್ತ ಜನತೆ ಕಾರುಣ್ಯ ಆಶ್ರಮಕ್ಕೆ ಸೇವೆ ಸಲ್ಲಿಸುತ್ತದೆ – ಕೆ.ವಿಜಯಲಕ್ಷ್ಮಿ ಕರಿಯಪ್ಪ…!!!

ಸುಕಾಲಪೇಟೆ ಸಮಸ್ತ ಜನತೆ ಕಾರುಣ್ಯ ಆಶ್ರಮಕ್ಕೆ ಸೇವೆ ಸಲ್ಲಿಸುತ್ತದೆ – ಕೆ.ವಿಜಯಲಕ್ಷ್ಮಿ ಕರಿಯಪ್ಪ

ಸಿಂಧನೂರು : ನಗರ ಕುಷ್ಟಗಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ರಾಜ್ಯ ಮಾಜಿ ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ.ಕರಿಯಪ್ಪನವರ ಕುಟುಂಬ ಭೇಟಿ ನೀಡಿ ಎಲ್ಲಾ ವೃದ್ಧರ ಹಾಗೂ ಬುದ್ಧಿ ಮಾಂದ್ಯರ ಯೋಗಕ್ಷೇಮವನ್ನು ವಿಚಾರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ಸುಮಾರು ದಿನಗಳಿಂದ ಸಾಯಿ ಸಚ್ಚರಿತೆಯ ಓದುವಿಕೆಯ ಕಾರ್ಯಕ್ರಮದಲ್ಲಿ ಬಳಸಲಾದ ಎಲ್ಲಾ ಪೂಜಾ ಸಾಮಗ್ರಿಗಳು ಹಾಗೂ ಸಾಯಿ ಭಗವಾನನಿಗೆ ಅರ್ಪಿಸಿರುವ ದಕ್ಷಿಣೆಯನ್ನು ಶ್ರೀಮಠ ಕಾರುಣ್ಯ ಆಶ್ರಮಕ್ಕೆ ಅರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಕೆ. ಕರಿಯಪ್ಪನವರ ಧರ್ಮಪತ್ನಿ ವಿಜಯಲಕ್ಷ್ಮಿ ಸಿಂಧನೂರು ನಗರದ ಕರುಣೆಯ ಕುಟುಂಬ ಹಿರಿಯ ನಾಗರಿಕ ಸೇವೆಯನ್ನು ಮಾಡುವ ಈ ಆಶ್ರಮಕ್ಕೆ ನಮ್ಮ ಕುಟುಂಬದಿಂದ ನಿರಂತರ ಸೇವೆ ಸಹಾಯ ದೊರೆಯುತ್ತದೆ. ಇಂದು ನನ್ನ ತಾಯಿ ಸ್ವರೂಪಿಯಾದ ನನ್ನ ಅತ್ತೆ ಯವರಾದ ಹೊಸೂರಮ್ಮ ದಿ. ನಾಗಪ್ಪ ಇವರು ನನ್ನನ್ನು ಸ್ವಂತ ಮಗಳ ಹಾಗೆ ನೋಡಿಕೊಳ್ಳುವುದರ ಮೂಲಕ ನನ್ನ ಜನ್ಮ ಸಾರ್ಥಕಗೊಳಿಸಿದ್ದಾರೆ. ನಾನು ಈ ವೇದಿಕೆಯಲ್ಲಿ ಸಮಾಜಕ್ಕೆ ಒಂದು ವಿನಂತಿಸಿಕೊಳ್ಳುವುದೇನೆಂದರೆ ಪ್ರತಿಯೊಬ್ಬ ಸೊಸೆಯೂ ಕೂಡ ಅತ್ತೆಯಂದಿರು ಮಾವಂದಿರನ್ನು ಸ್ವಂತ ತಂದೆತಾಯಿಗಳ ಹಾಗೆ ನೋಡಿಕೊಂಡು ಸಮಾಜಕ್ಕೆ ಆದರ್ಶವಾಗಬೇಕು ಇಂದಿನ ಸಮಾಜದಲ್ಲಿ ನಾವುಗಳೆಲ್ಲ ಹಿರಿಯರನ್ನು ಕಡೆಗಣಿಸಿದ ಅನಿವಾರ್ಯತೆಗೆ ಇಂತಹ ಆಶ್ರಮಗಳು ಹುಟ್ಟಿಕೊಳ್ಳುತ್ತವೆ ಇಂದು ಇಡೀ ನಮ್ಮ ಕುಟುಂಬ ಕಾರುಣ್ಯ ಕುಟುಂಬದ ಕೂಸುಗಳ ನೋವು ನಲಿವುಗಳಿಗೆ ಸ್ಪಂದಿಸುವ ಕಾರ್ಯವನ್ನು ಹೆಚ್ಚಿನ ಮಟ್ಟದಲ್ಲಿ ಮಾಡುತ್ತೇವೆ. ನಗರದ ಸುಕಾಲಪೇಟೆ ಜನತೆ ಕಾರುಣ್ಯ ಆಶ್ರಮಕ್ಕೆ ಸೇವೆ ಸಹಾಯ ಸಲ್ಲಿಸುತ್ತದೆ ಎಂದು ಸಮಾಜಕ್ಕೆ ಸಂದೇಶ ನೀಡಿದರು. ಈ ಕಾರ್ಯಕ್ರಮದಲ್ಲಿ ಕೆ ಕರಿಯಪ್ಪನವರ ಮಾತೊಶ್ರೀಗಳಾದ ಕೆ.ಹೊಸೂರಮ್ಮ ದಿ. ಕೆ ನಾಗಪ್ಪ ಅಮ್ಮನವರಿಗೆ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಈ ಸಮಯದಲ್ಲಿ ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ.ಹಿರೇಮಠ ಕೆ.ಸುವರ್ಣ ಭೀಮಣ್ಣ ವಕೀಲರು. ಗಂಗಮ್ಮ ಲಕ್ಷ್ಮಣ ದೀಕ್ಷಿತ. ಅಮರಮ್ಮ ದಿ. ಲಕ್ಷ್ಮಣ ಬಂಗಿ. ಗೀತಾ ಶ್ರೀನಿವಾಸ. ಯಶೋದ ವೆಂಕಟೇಶ. ಶಶಿಕಲಾ ಮಲ್ಲಿಕಾರ್ಜುನ. ಗಾಯತ್ರಿ ಮನೋಹರ ಶಾಸ್ತ್ರಿ. ಡಾ. ಶೃತಿ ಶ್ರೀನಿವಾಸ. ಕಾರುಣ್ಯ ಆಶ್ರಮದ ವ್ಯವಸ್ಥಾಪಕರಾದ ಗೀತಾ ಕುಲಕರ್ಣಿ. ಮೇಲ್ವಿಚಾರಕರಾದ ಸುಜಾತ ಚನ್ನಬಸಯ್ಯ. ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ ಹರೇಟನೂರು ಇವರುಗಳು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;