;

ದೇಶದ ಸರಕಾರೀ ಜಮೀನು ಖಾಸಗಿ ವಶಕ್ಕೆ : ಬಿ.ಪೀರ್ ಬಾ…??????

ದೇಶದ ಸರಕಾರೀ ಜಮೀನು ಖಾಸಗಿ ವಶಕ್ಕೆ : ಬಿ.ಪೀರ್ ಬಾಷ………….??????

ಸರಕಾರದ ವಶದಲ್ಲಿರುವ ದೇಶದ ಭೂ ಸಂಪತ್ತನ್ನು ಖಾಸಗೀ ಕಂಪನಿಗಳ ವಶ ಮಾಡಲೆಂದೇ ಮೋದಿ ನೇತ್ರತ್ವದ ಸರಕಾರವು ಎನ್.ಎಲ್.ಎಂ.ಸಿ. ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ. ನ್ಯಾಷನಲ್ ಲ್ಯಾಂಡ್ ಮಾನಿಟೈಸೇಷನ್ ಕಾರ್ಪೋರೇಷನ್ ಎಂಬ ಹೆಸರಿನ ಈ ಸಂಸ್ಥೆಯು ಸರಕಾರದ ವಶದಲ್ಲಿರುವ ಕಂಪನಿ ಹಾಗೂ ಏಜೆನ್ಸಿಗಳು ಬಳಸಿಕೊಳ್ಳದೇ ಉಳಿದ ಜಮೀನು ಹಾಗೂ ಕಟ್ಟಡಗಳನ್ನು ಖಾಸಗಿ ಕಂಪನಿಗಳಿಗೆ ಮಾರುವ, ಒತ್ತೆ ಇಡುವ ಅಥವಾ ನಿರ್ವಹಣೆಗೊಪ್ಪಿಸುವ ಕಾರ್ಯವನ್ನು ನಿರ್ವಹಿಸಲಿದೆ. ಇದು ಸ್ವತಃ ದೇಶದ ಸರಕಾರಿ ಜಮೀನು ಖಾಸಗಿಯವರಿಗೆ ಪರಭಾರೆ ಮಾಡುವ ಸರಕಾರೀ ಕಂಪನಿಯಾಗಿ ಕೆಲಸ ಮಾಡಲಿದೆ.

ಈ ಕಂಪನಿ ಆರಂಭಿಸಲು ಒಪ್ಪಿಗೆ ನೀಡಿರುವ ಕೇಂದ್ರದ ಸಚಿವ ಸಂಪುಟವು, ದೇಶದ ಸಾರ್ವಜನಿಕ ವಲಯದ ಜಮೀನು ಪರಭಾರೆ ಮಾಡುವ ಮೂಲಕ ಸರಕಾರಕ್ಕೆ ವರಮಾನ ಸಂಗ್ರಹಿಸಲು ಇದರಿಂದ ‘ನೆರವಾಗುತ್ತದೆ’ ಎಂದು ಹೇಳಿಕೊಂಡಿದೆ. ಜಮೀನು ಪರಭಾರೆಯ ಮೂಲಕ ಸರಕಾರ ನಡೆಸಲು ಹಣ ಮಾಡಿಕೊಳ್ಳುವ ಈ ಪ್ರಕ್ರಿಯೆಯನ್ನು “ನಗದೀಕರಣ” ಎಂಬ ಆಕರ್ಷಕ ಹೆಸರಿನಿಂದ ಕರೆಯಲಾಗಿದೆ.
ಹೀಗೆ ಮಾಡುವ ಮೂಲಕ “ಸಮರ್ಪಕವಾಗಿ ಬಳಕೆಯಾಗದ ಆಸ್ತಿಗಳನ್ನು ಸದುಪುಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದಿರುವ ಕೇಂದ್ರ ಸಚಿವ ಸಂಪುಟದ ಪ್ರಕಟಣೆಯು ಇದರಿಂದ “ಖಾಸಗಿ ವಲಯದ ಹೂಡಿಕೆಗೆ ಉತ್ತೇಜನ ನೀಡಿದಂತಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿದೆ.

ಹಿಂದುತ್ವದ ಬಲವರ್ಧನೆಗೆ ಉತ್ತರಪ್ರದೇಶ ಸಾಕ್ಷಿಯಾಗಲಿದೆ

ಸರಕಾರದ ವಶದಲ್ಲಿರುವ ದೇಶದ ಭೂಮಿ, ಕಟ್ಟಡ ಮೊದಲಾದ ಆಸ್ತಿಗಳನ್ನು ಖಾಸಗೀ ಕಂಪನಿಗಳ ಪಾಲು ಮಾಡುವ ಉದ್ದೇಶದ ಈ ಎನ್.ಎಲ್.ಎಂ.ಸಿ. ಎಂಬ ಸರಕಾರಿ ಕಂಪನಿಯ ಕಣ್ಣಿಗೆ ಬೀಳದಂತೆ ಸಾರ್ವಜನಿಕ ಆಸಕ್ತಿಯನ್ನು ಸರಕಾರದ ವಶದಲ್ಲಿಯೇ ಉಳಿಯುವಂತೆ ಮಾಡಲು ಸಾಧ್ಯವೇ ಎಂಬ ಬಗ್ಗೆ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು, ಆರ್ಥಿಕ ತಜ್ಞರು ಯೋಚಿಸಬೇಕಿದೆ…

ವರದಿ. ಪ್ರತಾಪ್ ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;