ಮಾರ್ಚ್ 14 ಮತ್ತು 15 ರಂದು ರಾಜ್ಯಮಟ್ಟದ ಗಾಯನ ಸ್ಪರ್ಧೆ ಸೀಸನ್-5 ಗ್ರ್ಯಾಂಡ್ ಪಿನಾಲೆ.
ಸಿಂಧನೂರು : ಕರ್ನಾಟಕ ರತ್ನ ಪವರಸ್ಟಾರ್ ಪುನೀತ್ ರಾಜಕುಮಾರ ಅವರ ಸ್ಮರಣಾರ್ಥವಾಗಿ ಅಮರಸ್ವರ ಸಂಗಮ ಕರೋಕೆ ಸಿಂಧನೂರು ನಲ್ಲಿ ರಾಜ್ಯಮಟ್ಟದ ಗಾಯನ ಸ್ಪರ್ಧೆ ಸೀಸನ್-5 ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಾರ್ಚ್ 7 ಸೋಮವಾರ ದಂದು ಧ್ವನಿ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯನ್ನು ಹೊಸಪೇಟೆ ಗಂಗಾವತಿ ಮಾನ್ವಿ ಸುರಪುರ ಸಿಂಧನೂರು ಕಾರಟಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಜಿಲ್ಲೆಗಳಿಂದ ಆನ್ಲೈನ್ ನಲ್ಲಿ ಭಾಗವಹಿಸಿ ಸೆಮಿಫೈನಲ್ ಗೆ 15 ರಿಂದ 20 ಜನ ಗಾಯಕರು ಆಯ್ಕೆಯಾಗಿದ್ದಾರೆ. ಸೆಮಿಫೈನಲ್ ಮಾರ್ಚ್ 10 ಗುರುವಾರದಂದು ಉಪ್ಪಾರವಾಡಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಾಗಿದ್ದು ಇದರಲ್ಲಿ ವಿಜೇತರಾದವರು ಮಾರ್ಚ್ 14 ಮತ್ತು 15 ರಂದು ಪೈನಲ್ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವರಿಗೆ ಊಟ ವಸತಿ ವ್ಯವಸ್ಥೆ ಇರುತ್ತದೆ ಎಂದು ನಗರದ ಪ್ರವಾಸಿ ಮಂದಿರದಲ್ಲಿ ವೆಂಕನಗೌಡ ವಟಗಲ್ ತಿಳಿಸಿದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 140ಕ್ಕೂ ಹೆಚ್ಚು ತಂಡ ಭಾಗವಹಿಸಿದ್ದವು ಇಂದು ಸೆಮಿಫೈನಲ್ ನಡೆಯುತ್ತಿದ್ದು ಅದರಲ್ಲೂ ಆಯ್ಕೆಯಾದವರಿಗೆ ಮಾರ್ಚ್ 14 ಮತ್ತು 15 ರಂದು ಚನ್ನನಗೌಡ ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ಗ್ರಾಂಡ್ ಫಿನಾಲೆ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ. ನಿರ್ಣಾಯಕರಾಗಿ ಕವಿತಾ ಮಠಪತಿ ಚಂದ್ರುಶೇಖರ ಮೈಲಾರ, ತ್ರಿವೇಣಿ ಹಿರೇಮಠ, ಭಾಗವಹಿಸುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ” ನಮ್ಮ ಸಾಧಕರು ” ಬಹುಮಾನವನ್ನು ನೀಡಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಬಹಳಷ್ಟು ದಾನಿಗಳು ಸಹಾಯ-ಸಹಕಾರ ನೀಡಿದ್ದಾರೆ ತಾಲೂಕಿನ ಜನತೆ ಈ ಒಂದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆನಂದಿ ಲಾಹೋಟಿ ಪತ್ರಿಕಾಗೋಷ್ಠಿ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಮೇಶ್ ಕವಿತಾಳ, ಸುನಿತಾ ಪಾಟೀಲ್ ಇದ್ದರು….

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
