ಬಲಿಗಾಗಿ ಬಾಯ್ತೆರೆದು ಕುಳಿತಿದೆ ರಾಷ್ಟ್ರೀಯ ಹೆದ್ದಾರಿ 53ಕ್ಕೆ ಹೊಂದಿಕೊಂಡಿರುವ,ಎಂ,ಬಿ. ಅಯ್ಯನಹಳ್ಳಿ ಗ್ರಾಮದಲ್ಲಿರುವ ಸ್ಮಶಾನವ್ಯವಸ್ಥೆಯಲ್ಲಿ ನಿರ್ಮಾಣಗೊಂಡಿರುವ ಹೆದ್ದಾರಿ.
ಅದೇ ಇದೇನಂತೀರಾ ಇದೇನಾ ಇದೆಂತ ರಸ್ತೆ ಇದು ಹೇಗಿರುತ್ತದೆ ಅಂದುಕೊಂಡಿದ್ದೀರಾ, ಇದು ನೀವು ಸುಳ್ಳೇoದುಕೊಂಡರು ಬರೋಬ್ಬರಿ ಸತ್ಯ ಕಣ್ರೀ, ಇದರ ಬಗ್ಗೆ ಎಲ್ಲಾ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮತ್ತು ಅಭಿವೃದ್ಧಿ ಹರಿಕಾರರೆಂದೆ ಹೆಸರು ಮಾಡಿರುವ ಶಾಸಕರ ಗಮನಕ್ಕೆ ಮತ್ತು ನಮ್ಮ ಜಿಲ್ಲೆಯನ್ನು, ಐ ಟೇಕ್ ಜಿಲ್ಲೆಯನ್ನಾಗಿ ಮಾಡುತ್ತೇವೆ ಎನ್ನುವಂತ ಎಲ್ಲಾ ರಾಜಕೀಯದವರಿಗೆ ಸುಮಾರು ಭಾರಿ, ಈ ಊರಿನ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಹಾಗೂ ವೃದ್ಧರು ಎಲ್ಲರೂ ಧರಣಿ ಮಾಡಿದರು ಏನು ಪ್ರಯೋಜನವಾಗಿಲ್ಲ ಅದರ ಪ್ರತಿಫಲ, ಪೊಲೀಸರಿಂದ ಸಮಾಧಾನಕರ ಮಾತು ಮತ್ತು ಪ್ರತಿ ತಿಂಗಳಿಗೊಮ್ಮೆ ರಸ್ತೆ ಅಪಘಾತ ಹಾಗೂ ಮರಣ. ದಾಖಲೆಯ ಪ್ರಾಮಾಣದಲ್ಲಿ ದಾಖಲಾಗುತ್ತಿದೆ ಎಂದರು ತಪ್ಪಾಗಲಾರದು ಇದರ ಒಂದು ಸುದ್ದಿಯನ್ನು ಹಲವು ಪತ್ರಿಕೆಗಳಲ್ಲಿ ಪ್ರಕಟಣೆ ಮಾಡಿದ್ದರು ಸಹ ಯಾವೊಂದು ಪ್ರಯೋಜನವಾಗಿಲ್ಲ ಸಂಬಂಧ ಪಟ್ಟ ಸಚಿವರು, ಶಾಸಕರು ಮಾತ್ರ ಮೂಕರಂತೆ ತಮ್ಮ ಒಂದು ನಿಸ್ಸಾಯಕ ಪ್ರದರ್ಶನವನ್ನು ತೋರಿದ್ದಾರೆ ಮತ್ತು ಇದರ ವಿಷಯವಾಗಿ ಸಂಸದರಿಗೆ ಹಲವು ಭಾರಿ ಎಚ್ಚರಿಕೆ ಪತ್ರಿಕೆ ಸಂಪಾದಕರು, ಕರೆಯನ್ನು ಮಾಡಿ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಮತ್ತು ಗ್ರಾಮದ ಯುವ ಹೋರಾಟಗಾರರು, ಈ ಇಂದೆ ಇದ್ದ ತಾಲೋಕು ದಂಡಧಿಕಾರಿಗಳಾದ ಮಹಾಬಲೇಶ್ವರ ಅವರಿಗೆ ಲಿಖಿತ ರೂಪದಲ್ಲಿ ದೂರು ಕೊಟ್ಟರು ಅದು ಇನ್ನು ದೂರಾಗಿದೆಯೇ ವರಿತು ನ್ಯಾಯ ದೊರೆಕಿಲ್ಲ.
ಎಂತಹ ವಿಪರ್ಯಾಸ ಎಷ್ಟು ಮಕ್ಕಳು ತಂದೆಯಿಂದ ದೂರ, ಎಷ್ಟೋ ಮಹಿಳೆಯರು ಗಂಡನಿಂದ ದೂರವಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ ಆದರೂ ಸಹ ಸಂಬಂಧ ಪಟ್ಟ ರಸ್ತೆಯನ್ನು ಗುತ್ತಿಗೆ ಪಡೆದ L&Tಕಂಪನಿ ತನಗಿಷ್ಟ ಬಂದಹಾಗೆ ನಕಾಷೆಯನ್ನು ರಚಿಸಿ ಇಡಿದ ಕೆಲವನ್ನು ಬೇಗ ಮುಗಿಸಿಕೊಂಡು ಬಡಜನರ ಪಾಲಿಗೆ,ಬೇತಾಳವಾಗಿ ಮಾರ್ಪಡಾಗಿದೆ ಅದೇ ಇವರೇನಪ್ಪ ಇಷ್ಟೆಲ್ಲಾ ಒಂದು ಹಳ್ಳಿಯಲ್ಲಿ “ಯಮಸ್ವರೂಪಿ “ರಸ್ತೆಯ ಬಗ್ಗೆ ಹೇಳುತ್ತಿದ್ದರು ವಿಷಯದ ವಿಸ್ತರಣೆ ಬಿಚ್ಚಿಡುತ್ತಿಲ್ಲ ಇಲ್ಲಿದೆ ನೋಡಿ, ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ,ಎಂ”ಬಿ”ಅಯ್ಯನಹಳ್ಳಿ ಎನ್ನುವ ಒಂದು ಗ್ರಾಮವು ರಾಷ್ಟ್ರೀಯ ಹೆದ್ದಾರಿ 53 ರ ಪಕ್ಕದಲ್ಲೇ ಹೊಂದಿಕೊಂಡಿದ್ದು ರಸ್ತೆಯನ್ನು ದಾಟುವ ಸಂದರ್ಭದಲ್ಲಿ ಹಲವು ಸಾವು ನೋವುಗಳು ಸಂಬವಿಸಿದರು ಇದರ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳದ ಸರ್ಕಾರ, ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು.
ಇಂದು ಬೆಳಿಗ್ಗೆ ಇದೆ ಎಂ, ಬಿ, ಅಯ್ಯನಹಳ್ಳಿ ಗ್ರಾಮದ,ಎಸ್.ಎಂ, ಶಿವಪ್ರಸಾದ್ ಸ್ವಾಮಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದು ಗ್ರಾಮದ ಜನರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದ್ದು, ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಿದರು, ಇನ್ನೆಷ್ಟು ಬಲಿ ಬೇಕು ಈ ಒಂದು ರಸ್ತೆಯಲ್ಲಿರುವ ಗ್ರಾಮದ ಜನರ ಬದುಕನ್ನು ಸಲೀಸಾಗಿ ಸಾಗಿಸಲು ಇಂದು ನಡೆದ ರಸ್ತೆ ಅಪಘಾತದ ದೃಶ್ಯವನ್ನು ನೋಡಿದ ಗ್ರಾಮಸ್ಥರಲ್ಲಿ ತೀವ್ರವಾದ ಭಯದ ವಾತಾವರಣ ಉಂಟು ಮಾಡಿದೆ ಹಾಗೂ ಅಪಘಾತದಲ್ಲಿ ಸವನ್ನಪ್ಪಿದ ಶಿವಪ್ರಸಾದ್ ಸ್ವಾಮಿಯ ಕುಟುಂಬಕ್ಕೆ ಅವರೇ ಆಸರೆಯಗಿದ್ದು ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು, ಇದರಂತೆ ಈ ಒಂದು ರಸ್ತೆ ಅಪಘಾತದಲ್ಲಿ ಅನೇಕ ಸಾವು ನೋವುಗಳು ನಡೆದಿದ್ದರೂ ಸಹ ಬರೀ ಕುಟುಂಬಗಳು ಬೀದಿಗೆ ಬಿದ್ದಿವೆಯೋ ಹೊರೆತು ಅಪಘಾತಕ್ಕೆ ಪರಿಹಾರ ಮಾತ್ರ ಶೂನ್ಯ.
ಮುಂದಿನ ದಿನಗಳಲ್ಲಿ ಪರಿಹಾರ ದೊರೆಕದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವುದೇ ಇದಕೆಲ್ಲ ಸೂಕ್ತವಾದ ಪರಿಹಾರ ದಯವಿಟ್ಟು ಎಲ್ಲಾ ತರನಾದ ಚುನಾವಣೆಯನ್ನು ಅಂದು ಬಹಿಷ್ಕಾರ ಮಾಡಿ ಗ್ರಾಮದ ಎಲ್ಲಾ ಸಾರ್ವಜನಿಕರು, ಇಂದು ಪ್ರತಿಭಟನೆ ಮಾಡುವ ಅವಶ್ಯಕತೆ ಇರುವುದಿಲ್ಲ ಇನ್ನಾದರೂ ಸರಿಯಾಗುವುದೇ ಈ ಒಂದು ಸಮಸ್ಯೆಯ ಸರಮಾಲೆ….

ವರದಿ. ಮಂಜುನಾಥ್, ಎನ್, ಎಂ.ಬಿ.ಅಯ್ಯನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
