;

ವೀರಶೈವ ಸಮಾಜದಲ್ಲಿ ಹುಟ್ಟಿದಕ್ಕೆ ಹೆಮ್ಮೆ ಇದೆ – ಶಾಸಕ ನಾಡಗೌಡ…!!!

ವೀರಶೈವ ಸಮಾಜದಲ್ಲಿ ಹುಟ್ಟಿದಕ್ಕೆ ಹೆಮ್ಮೆ ಇದೆ – ಶಾಸಕ ನಾಡಗೌಡ .

ಸಿಂಧನೂರು : ಕರ್ತವ್ಯದಲ್ಲಿ ತೊಡಗಿದ್ದ ಬೀದರ್ ಜಿಲ್ಲೆಯ ಹುಮನಾಬಾದ್ ತಹಶೀಲ್ದಾರ ಪ್ರದೀಪ್‌ ಕುಮಾರ ಹಿರೇಮಠ್‌ ಮೇಲಿನ ಹಲ್ಲೆ ಖಂಡಿಸಿ ಸಿಂಧನೂರುನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ವೀರಶೈವ ಸಮಾಜ ಪ್ರತಿಭಟನೆ ನಡೆಸಿತು.

ಬಿಎಸ್‍ಪಿ ಕಾರ್ಯಕರ್ತರು ತಹಶೀಲ್ದಾರ ಮೇಲೆ ಹಲ್ಲೆ ನಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿಂಧನೂರಿನ ಗಣೇಶ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಜಾಥಾ ನಡೆಸಿ ಗಾಂಧಿ ವೃತ್ತದಲ್ಲಿ ಸಾವಿರಾರು ಕಾರ್ಯಕರ್ತರು ಸುಮಾರು ಎರಡು ಗಂಟೆಯ ಕಾಲ ರಸ್ತೆ ತಡೆ ನಡೆಸಿ ಡಿಜಿ ಅಳವಡಿಸಿ ಕುಣಿದು ಕುಪ್ಪಳಿಸುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರು ಎರಡು ಘಂಟೆಗಳ ಕಾಲ ಟ್ರಾಫಿಕ್ ಜಾಮ್ ನಿಂದ ತೊಂದರೆ ಅನುಭವಿಸಿದರು. ಪೋಲಿಸ್ ಇಲಾಖೆ ಮುಕಾಪ್ರೇಕ್ಷಕರಾಗಿ ನಿಂತಿದ್ದರು.

ಇಂತಹ ಘಟನೆಗಳು ನಡೆಯುತ್ತಿರುವುದು ಸುಸಂಸ್ಕೃತ ಮಾನವ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವುದರಿಂದ ಭಯದ ವಾತಾವರಣದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಆಗ್ರಹಿಸಿ, ಮುಖ್ಯಮಂತ್ರಿಗಳಿಗೆ ಮನವಿಯ ಪತ್ರವನ್ನು ತಹಸೀಲ್ದಾರ ಮಂಜುನಾಥ ಭೋಗಾವತಿ ಅವರಿಗೆ ಸಲ್ಲಿಸಿದರು.

ಸಮಯ ಬಂದಾಗ ನಾವು ಕೂಡ ಒಂದಾಗುತ್ತೆವೆಂದು ಈ ಸಮಯದಲ್ಲಿ ತೋರಿಸಿದ್ದಕ್ಕಾಗಿ ಅಭಿನಂದನೆಗಳನ್ನು ಸಮಾಜಕ್ಕೆ ತಿಳಿಸಿದರು. ಸಮಾಜ ಶಾಂತಿ ಪ್ರಿಯರು ಈ ಸಮಾಜದಲ್ಲಿ ಜನ್ಮ ಪಡೆದಿರುವದಕ್ಕೆ ನಮಗೆ ಹೆಮ್ಮೆ ಇದೆ. ಅಂಬಾನಿ ,ಅದಾನಿ ಯಾರೆ ಆದರೂ ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಎಲ್ಲರೂ ತಲೆ ಬಾಗಬೇಕು , ಸ್ವಾಭಿಮಾನದಿಂದ ಬದುಕುವ ಸಮಾಜ ನಮ್ಮದು ನಮ್ಮ ಹೋರಾಟ ಯಾವುದೇ ಸಮಾಜದ ವಿರುದ್ದವಲ್ಲ ತಹಶಿಲ್ದಾರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸರ್ಕಾರಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ತಪ್ಪಿತಸ್ಥರ ಕೂಡಲೇ ಬಂದಿಸಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು.

ಅಂಬೇಡ್ಕರ್ ಸಂವಿಧಾನ ಕೊಟ್ಟಿದು ಸಮಾನತೆಯಿಂದ ಬದುಕಬೇಕೆಂದು ಅವರ ಹೆಸರಿನಲ್ಲಿ ಅದೆಷ್ಟೋ ಜನ ದುರ್ಬಳಕೆ ಮಾಡುತ್ತಿದ್ದಾರೆ. ಮುದೊಂದು ದಿನ ಉತ್ತರ ಸಿಗಲಿದೆ.ಇದಕ್ಕೆ ಸಿಂಧನೂರು ಜನರೇ ಸಾಕ್ಷಿ ಈ ಘಟನೆ ಬಗ್ಗೆ ಶಾಸಕ ವೆಂಕಟರಾವ್ ನಾಡಗೌಡರು ವಿಧಾನಸೌದದಲ್ಲಿ ಮಾತನಾಡಬೇಕು ಹಾಗೂ ಈ ಹೋರಾಟ ಇಲ್ಲಿಗೆ ನಿಲ್ಲಬಾರದು ಮತ್ತು ಸಂವಿಧಾನ ಬಾಹಿರವಾಗಿ ನಡೆದುಕೊಂಡವರಿಗೆ ಇದು ಎಚ್ಚರಿಕೆಯ ಗಂಟೆ ಎಂದು ನಗರ ಯೋಜನಾ ಪ್ರಾಧಿಕಾರ ಅದ್ಯಕ್ಷರಾದ ಅಮರೇಗೌಡ ವಿರುಪಾಪುರ ಮಾತನಾಡಿದರು.

ಈ ಹೋರಾಟ ಅಂತ್ಯ ಅಲ್ಲ ಆರಂಭ ,ಈ ಹೋರಾಟದಲ್ಲಿ ಯುವಕರಿಗೆ ಹಿಂದೆ ನಿಂತು ಆಶಿರ್ವಾದ ಮಾಡಿದ ಹಿರಿಯ ನಾಯಕರುಗಳಿಗೆ ಧನ್ಯವಾದಗಳು ಎಂದು ವೀರಶೈವ ಸಮಾಜದ ಜಿಲ್ಲಾ ಅದ್ಯಕ್ಷರಾದ ಶಿವರಾಜ ಗುಂಜಳ್ಳಿ ಮಾತನಾಡಿದರು.

ಕೊವಿಡ್ ನಿಮಯ ಉಲ್ಲಂಘನೆ :- ಸಾಮಾಜಿಕ ಜಾಲತಾಣದಲ್ಲಿ ವಾಟ್ಸಫ್ ಸ್ಟೇಟಸ್ ಹಾಕಿರುವ ಸಂದೇಶದಿಂದ ಸಮಾಜಕ್ಕೆ ನೋವಾಗಿದೆ ಕೂಡಲೇ ಅವನನ್ನು ಬಂದಿಸಬೇಕೆಂದು ಪಟ್ಟು ಹಿಡಿದರು. ಆತನನ್ನು ಪೋಲಿಸರು ವಶಕ್ಕೆ ಪಡೆದು ಜಾತಿನಿಂದನೆ ಪ್ರಕರಣ ದಾಖಲಿಸಿ ಮರಳಿ ಇಂತಹ ಘಟನೆಗಳು ಮರುಕಳಿಸದಂತೆ ಪೋಲಿಸ್ ಇಲಾಖೆ ಎಚ್ಚರಿಕೆ ವಹಿಸಬೇಕೆಂದು ವೀರಶೈವ ಸಮಾಜದ ಸಮಸ್ತ ಪದಾಧಿಕಾರಿಗಳು ,ನೂರಾರು ಯುವಕರು ನಗರ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಇಲಾಖೆಯ ವಿರುದ್ಧ ದಿಕ್ಕಾರದ ಘೋಷಣೆಗಳನ್ನು‌ ಕೂಗಿದರು. ಸಮಾಜದ ಹಿರಿಯ ರಾಜಕೀಯ ಮುಖಂಡರು ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಯುವಕರ ಮನವೊಲಿಸುವ ಪ್ರಯತ್ನ ಮಾಡಿ ಹರಸಾಹಸ ಪಟ್ಟರು ಯಾವುದೇ ಪ್ರಯೋಜವಾಗದೇ ಕಂಡುಬಂತು. ಆಕ್ರೋಶಭರಿತರಾದ ಯುವಕರು ಮಾಸ್ಕ ದರಿಸದೆ ಸಾಮಾಜಿಕ ಅಂತರವಿಲ್ಲದೆ ಕೋವಿಡ ನಿಯಮ ಉಲ್ಲಂಘನೆ ಮಾಡಿದರು. ಪೋಲಿಸ್ ಇಲಾಖೆ ಸುಮ್ಮನೆ ನಿಂತಿದ್ದು ಕಂಡುಬಂತು.

ಇದೇ ಸಂಧರ್ಭದಲ್ಲಿ ಜೆಡಿಎಸ್ ತಾಲೂಕು ಅದ್ಯಕ್ಷರಾದ ಬಸವರಾಜ ನಾಡಗೌಡ ,ರಾಜ್ಯ ಯುವ ಕಾಂಗ್ರೆಸ್ ಮಾಜಿ ಅದ್ಯಕ್ಷರಾದ ಬಸನಗೌಡ ಬಾದರ್ಲಿ, ಬಾಬು ಗೌಡ ಬಾದರ್ಲಿ ,ಅಭಿಷೇಕ ನಾಡಗೌಡ ಸೇರಿದಂತೆ ನೂರಾರು ಯುವಕರು ನಗರ ಠಾಣೆಯಲ್ಲಿ ಬಾಗವಹಿಸಿ ದಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಂಜೆ 6 ಗಂಟೆ ಯಾದರೂ ಪರಿಸ್ಥಿತಿ ತಿಳಿಯಾಗಲಿಲ್ಲ. ಡಿವಾಯ್ಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ಉಮೇಶ ಕಾಮಳೆ ,ಪಿಎಸ್ಐ ಸೌಮ್ಯ, ಯರಿಯಪ್ಪ ಸೇರಿದಂತೆ ನೂರಾರು ಯುವಕರು ನಗರ ಠಾಣೆಯಲ್ಲಿ ಜಮಾಯಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;