
ನಿಧನ ವಾರ್ತೆ: ಸೋವೇನಹಳ್ಳಿ ಗುರು ಬಸವರಾಜ,HPCಕೂಡ್ಲಿಗಿ
*-ವಿಜಯನಗರ ಜಿಲ್ಲೆ… ಕೂಡ್ಲಿಗಿ ಪೊಲೀಸ್ ಠಾಣೆಯ ಮುಖ್ಯ ಪೇದೆ,ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಸೋವೇನಹಳ್ಳಿ ಮೂಲದವರಾದ ಗುರುಬಸವರಾಜ(42).ಫೆ 5ರಂದು ಬೆಳಿಗ್ಗೆ 8ಗಂಟೆಗೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ, ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು.ಅವರು ಪೊಲೀಸ್ ಪೇದೆಯಾಗಿ ನೇಮಕವಾಗಿ, ಮೊದಲು ಕೂಡ್ಲಿಗಿ ಯಲ್ಲಿ ಸೇವೆ ಪ್ರಾರಂಭಿಸಿದರು.ನಂತರ ಇಟಗಿ,ಹೊಸಪೇಟೆ,ಸೇರಿದಂತೆ ಹಲವೆಡೆಗಳಲ್ಲಿ ಹತ್ತು ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.ಇತ್ತೀಚೆಗಷ್ಟೇ ಮುಖ್ಯಪೇದೆಯಾಗಿ ಮುಂಬಡ್ತಿ ಹೊಂದಿ,ಮರಳಿ ಕೂಡ್ಲಿಗಿ ಠಾಣೆಗೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಅವರು ಮಡದಿ,ಇಬ್ಬರು ಮಕ್ಕಳನ್ನು ಹಾಗೂ ಸಹೋದರ ಸಹೋದರಿಯರನ್ನ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ:-ಮೃತ ಬಸವರಾಜ ರವರ ಅಂತ್ಯಕ್ರಿಯೆ ಫೆ 5ರಂದು ಸಂಜೆ5ಗಂಟೆಗೆ,ಸಂಡೂರು ತಾಲೂಕಿನ ಅವರ ಸ್ವಗ್ರಾಮ ಸೋವೇನಹಳ್ಳಿ ಗ್ರಾಮದಲ್ಲಿ ಜರುಗಲಿದೆ.
ಸಂತಾಪ- ಮೃತ ಮುಖ್ಯಪೇದೆ ಗುರು ಬಸವರಾಜ ರವರ ಅಗಲಿಕೆಗೆ,ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಆರಕ್ಷಕ ಇಲಾಖಾಧಿಕಾರಿಗಳು, ಸಿಬ್ಬಂದಿಯವರು. ಹಾಗೂ ಕೂಡ್ಲಿಗಿ ಆರಕ್ಷಕ ಇಲಾಖೆ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು,ಕೂಡ್ಲಿಗಿ ಪೊಲೀಸ್ ಠಾಣೆ ಸೇರಿದಂತೆ ವಿವಿದ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಯವರು ತೀವ್ರ ಸಂತಾಪ ವ್ಯೆಕ್ತಪಡಿಸಿದ್ದಾರೆ. ಸಂಡೂರು ತಾಲೂಕು ಹಾಗೂ ಕೂಡ್ಲಿಗಿ ತಾಲೂಕುಗಳ ವಿವಿದ ಸಮುದಾಯಗಳ ಮುಖಂಡರು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ಜನಪ್ರತಿನಿಧಿಗಳು ಹಾಗೂ ನಾಗರೀಕರು, ವಿವಿದ ವಿಭಾಗದ ಪೊಲೀಸರು ಮತ್ತು ಗಣ್ಯರು ಸಂತಾಪ ವ್ಯೆಕ್ತಪಡಿಸಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
