ಕನ್ನಡದ ಕಬೀರ ಎಂದೇ ಖ್ಯಾತಿ ಪಡೆದ ಆದುನಿಕ ಯುಗದ ಸುಫಿಸಂತ, ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಇಬ್ರಾಹಿಂ ಸುತಾರ ಅವರು ಇಂದು ಮುಂಜಾನೆ ನಿಧನರಾದ ಸುದ್ದಿ ತಿಳಿದು ನನ್ನ ಮನಸಿಗೆ ಅತೀವ ದುಃಖವಾಗಿದೆ.
ಜಾತಿ-ಧರ್ಮಗಳ ಹೆಸರಲ್ಲಿ ಸಮಾಜ-ಸಮಾಜಗಳ ನಡುವೆ ಬೇಧ-ಭಾವಗಳನ್ನು ಸೃಷ್ಟಿಸಲು ಪ್ರಯತ್ನ ಪಡುತ್ತಿರುವವರ ಮಧ್ಯ, ಭಾವೈಕ್ಯದ ಕೊಂಡಿಯಾಗಲು ಶ್ರಮಿಸಿದ ಮಹಾನ್ ಚೇತನದ ನಿಧನ, ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ.
ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ
ದೇವರು ಚಿರಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ದಯಪಾಲಿಸಲಿ ಎಂದು ನಮ್ಮ ಪತ್ರಿಕಾ ತಂಡದಿಂದ ಪ್ರಾರ್ಥಿಸುತ್ತೇನೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
