;

ನೀಟ್ ಪರೀಕ್ಷೆ ; ದೇಶಕ್ಕೆ ಪ್ರಥಮ ಸ್ಥಾನ ಪಡೆದ ಯುವಕ ಚಿದಾನಂದ ಕಲ್ಲಪ್ಪ ಕುಂಬಾರ…!!!

ನೀಟ್ ಪರೀಕ್ಷೆ ; ದೇಶಕ್ಕೆ ಪ್ರಥಮ ಸ್ಥಾನ ಪಡೆದ ಯುವಕ ಚಿದಾನಂದ ಕಲ್ಲಪ್ಪ ಕುಂಬಾರ

ಮಹಾಲಿಂಗಪುರ; ಸಮೀಪದ ರನ್ನ ಬೆಳಗಲಿ ಪಟ್ಟಣದ ಡಾ॥ ಚಿದಾನಂದ ಕಲ್ಲಪ್ಪ ಕುಂಬಾರ ಪ್ರಥಮ ಸ್ಥಾನ ಪಡೆಯುವ ಮೂಲಕ ಅವಿಸ್ಮರಣೀಯ ಸಾಧನೆಗೈದಿದ್ದಾರೆ.

ಚಿದಾನಂದ ಬೆಳಗಲಿಯ ಬಡ ಕುಟುಂಬದಲ್ಲಿ ದ್ವಿತೀಯ ಮಗನಾಗಿ ಜನಸಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಆಶ್ರಯದಲ್ಲೆ ಬೆಳೆದ ಯುವಕ.
ತಂದೆ ಕೂಲಿ ಮಾಡಿ ಮಗನ ವಿಧ್ಯಾಭ್ಯಾಸ ಮಾಡಿಸಿ ದೊಡ್ಡ ಸಾಧನೆ ಮಾಡಸಿದ್ದು ಪ್ರಮುಖ ಪಾತ್ರ ಇಂದಿಗೂ ಸಹ ತಂದೆ ಕೂಲಿ ಕಾಯಕ ಮಾಡಿ ಜೀವನ ಮಾಡುತ್ತಿದ್ದು ಹಿರಿಯ ಸಹೋದರ ಮಹಾಲಿಂಗಪುರ ನಗರದಲ್ಲಿ ಟೇಲರಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ ಬಡತನದಲ್ಲಿ ಅರಳಿದ ಹೂವು ಎಂಬಂತೆ ಡಾ॥ ಚಿದಾನಂದ ಕುಂಬಾರ ಮಾಡಿದ ಸಾಧನೆಯಾಗಿದೆ.

ಡಾ॥ ಚಿದಾನಂದ ಅವರು ಹುಬ್ಬಳ್ಳಿಯ ಕೆಎಮ್ ಸಿಯಲ್ಲಿ ಎಮ್ ಬಿಬಿಎಸ್ ಪದವಿ ಪಡೆದು, ಎಮ್ ಬಿಬಿಎಸ್ ನಲ್ಲಿ ಕರ್ನಾಟಕ ರಾಜ್ಯಕ್ಕೆ 806 ನೇ ಸ್ಥಾನ ಪಡೆದಿದ್ದರು. ದೆಹಲಿಯ AIMS ನಲ್ಲಿ ವಿಧ್ಯಾಭ್ಯಾಸ ಮಾಡಿ ದೇಶಕ್ಕೆ 300 ನೇ ರ್ಯಾಂಕ್ ಗಳಿಸಿದರು.

ಸದ್ಯ ಕಳೆದ ಎರಡು ವರ್ಷಗಳಿಂದ ಹೈದರಾಬಾದ್ ನ ಗ್ಲೋಬಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿತ್ತಿರುವ ಡಾ॥ ಚಿದಾನಂದ ಕುಂಬಾರ ಅವರು 2021ನೇ ಸಾಲಿನ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ MD. Gastroenterology ಹಾಗೂ MD. Hematology ಎರಡು ವಿಭಾಗದಲ್ಲಿ ಭಾರತ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ.

ಸತತ ಪ್ರಯತ್ನದೊಂದಿಗೆ ಬಡತನದ ಬೆಗೆಯಲ್ಲಿ ಬೆಂದು ತಂದೆಯ ಆಶೀರ್ವಾದದಿಂದ ಸಹೋದರನ ಪ್ರೋತ್ಸಾಹದೊಂದಿಗೆ ಗುರಿಯ ಬೆನ್ನತ್ತಿ ಸಾಧನೆ ಮಾಡಿ ಬೆಳಗಲಿ ಪಟ್ಟಣ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿದ ಡಾ. ಚಿದಾನಂದ ಅವರಿಗೆ ಕುಟುಂಬ ಸದಸ್ಯರು ಶುಭಾಶಯಗಳ ಮಹಾಪೂರ ಹರಸುವುದರ ಜೊತೆಗೆ ಪಟ್ಟಣದ ಜನರ ಶ್ಲಾಘನೀಯಕ್ಕೆ ಪಾತ್ರರಾಗಿದ್ದಾರೆ.

ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ .

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;