ಹುಗಲೂರು ಗ್ರಾಮದಲ್ಲಿ ಶ್ರೀ ಕಲಬುರಗಿ ಶರಣ ಬಸವೇಶ್ವರ ಪುರಾಣ ಉದ್ಘಾಟನಾ ಸಮಾರಂಭ!
ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹುಗಲೂರು ಗ್ರಾಮದಲ್ಲಿ 26 ನೇ ವರ್ಷದ ಪುರಾಣ ಪ್ರವಚನ ಕಾರ್ಯ ಇಂದು ಅರಂಭವಾಗಿದೆ.
ಪ್ರವಚನಕಾರದಾದ: ಕೊಟ್ರಯ್ಯ ಶಾಸ್ತೀಗಳು.: ತಬಲಾ: ಅಪ್ಪು ಮತ್ತು ಗಾವಾಯಿಗಳು ಈ ವರ್ಷದ ಪುರಾಣ ಪ್ರವಚನವನ್ನ ನೆರೆವೇರಿಸಲಾಗಿದೆ.
ಕಾರ್ಯಕ್ರಮಕ್ಕೆ ಗವಿ ಮಠದ ಪೂಜ್ಯರು ಶಾಖಾ ಮಠ ಹೂವಿನ ಹಡಗಲಿ ಇವರು ದಿವ್ಯ ಸಾನಿದ್ಯ ವಹಿಸಿದ್ದರು.
ಉದ್ಘಾಟನೆಯನ್ನ ನೆರೆವೇರಿಸಿದರು. ಅತಿಥಿಗಳಾಗಿ ಗ್ರಾಮದ ಉಭಯ ಶ್ರೀಗಳಾದ ಶ್ರೀ ಹೆಚ್. ಎಂ ಸಿದ್ದವೀರಯ್ಯ, ಹೆಚ್. ಎಂ ಗುರು ಸ್ವಾಮಿಗಳು ,ಪಟ್ಟದಯ್ಯ ಸ್ವಾಮಿ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ವಿನೋದಮ್ಮ ಸದಸ್ಯರಾದ ಸೈನಾಝ್ ಬಿ ಮತ್ತು ಗ್ರಾಮದ ಹಿರಿಯರು ಭಕ್ತಾದಿಗಳು ಹಾಜರಿದ್ದರು.
ಇಂಜಿನಿಯರ್ ನಜೀರ್ ಸಾಬ್ ಮಾತನಾಡಿ, ಸತತವಾಗಿ ಈ ಊರಿಗೆ ನಾಲ್ಕನೇ ಬಾರಿ ಬಂದಿದಿನಿ.. ವಿಷ್ಣುವಿನ ದಶಾವತಾರದಲ್ಲಿ ವಿಷ್ಣು ಕೂಡ ಶಿವನ ಅರಾಧನೆ ಇದೆ. ಶಿವ ಇಲ್ಲಿ ಬಹುಮುಖ್ಯ. ನಾವೆಲ್ಲಾರು ಶಿವನನ್ನ ಅರಾಧಿಸಬೇಕು ಎಂದು ಅಭಿಪ್ರಾಯ ತಿಳಿಸಿದರು.
ಡಾ. ಹಿರಿಶಾಂತ ವೀರ ಸ್ವಾಮಿಜಿಗಳು ಮಾತನಾಡಿ :
ಈ ವೇದಿಕ ಏರುವುದು ಸರಳವಲ್ಲ ಈ ಮೂರು ಕಲಾವಿದರು ಶ್ರಮ ದೊಡ್ಡದು ಅನೇಕ ಪುಸ್ತಕ ಓದಿ ತಿಳಿದವರು ಎಂದು ಅಭಿವಂದಿಸಿದರು. ಗುರು ಕೃಪೆ ಆದವರು ದೊಡ್ಡ ಮನುಷ್ಯ ಆಗ್ತಾನೆ.. ಮಹಾತ್ಮರ ಜೀವನ ಇನ್ನೊಬ್ಬರಿಗಾಗಿ ಬದುಕಿದ್ದವರು . ಬದುಕು ಹೇಗೆ ಇರಬೇಕು ಎಂಬುದನ್ನ ಶರಣ ಬಸವಣ್ಣ ಬದುಕನ್ನ ನೋಡಿ ಕಲಿಯಬೇಕಿದೆ. ಈಗೀನ ಧಾರವಾಯಿಗಳು ಮನವನಿಗೆ ಯಾವ ಸಂದೇಶ ನೀಡಲಿವೆ ಎಂಬುದೇ ತಿಳಿಯದು. ಅದ್ದರಿಂದ ಶರಣಪ್ಪನ ಪುರಾಣ ಕೇಳಿ ಬದುಕಿನ ತತ್ವವನ್ನ ಅಳವಡಿಸಿಕೊಳ್ಳಿ..ನುಡಿದಂತೆ ನಡೆಯಿರಿ ಎಂದೂ ಆರ್ಶಿವಚನ ನೀಡಿದರು.
ಶಾಸ್ತ್ರೀಗಳಿಗೆ ಗ್ರಾಮದ ಉಭಯ ಸ್ವಾಮಿಗಳಿಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರಿಗೂ ಗೌರವ ಸನ್ಮಾನ ಶ್ರೀಗಳು ನೆರೆವೆರಿಸಿದರು.

ವರದಿ.ಅಜಯ.ಚ ಹೂವಿನ ಹಡಗಲಿ
( ಹುಗಲೂರು)
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
