;

ಹೊಸಪೇಟೆಯ ದೇವದಾಸಿಯರ ಗೋಳನ್ನು ಹಾಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು…!!!

ವಿಜಯನಗರ(ಹೊಸಪೇಟೆ )ವಿಜಯನಗರ ಜಿಲ್ಲೆಯಲ್ಲಿ ದೇವದಾಸಿಯರ ಗೋಳು ಕೇಳಿದ ಸಚಿವೆ ಶಶಿಕಲಾ ಜೊಲ್ಲೆ. ದೇವದಾಸಿ ಪದ್ದತಿಯಿಂದ ವಿಮೋಚನೆಗೊಳಿಸುತ್ತೇವೆ‌ ಎಂದು ಹೇಳಿದ್ದ ಸರ್ಕಾರ, ಈ ಹಿಂದೆ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದು ನಮ್ಮ ಸಮುದಾಯದ ಸಬಲತೆಗೆ ಭರವಸೆ ನೀಡಿತ್ತು. ಆದರೆ ಸರ್ಕಾರ ಘೋಷಣೆಮಾಡಿರುವ ಯಾವೆಲ್ಲಾ ಯೋಜನೆಗಳು ಅರ್ಹ ಪಲಾನುಭವಿಗಳಿಗೆ ತಲುಪುತ್ತಿವೆ ಎಂದು ಮಾತ್ರ ನೋಡಿಲ್ಲ. ನಮಗೆ ಸಿಗಬೇಕಾದ ಯೋಜನೆಗಳನ್ನ ನಮಗೆ ನೀಡಿ ನಮ್ಮ ಪಾಪವನ್ನ ಪರಿಹಾರ ಮಾಡಿ ಎಂದು ಹೊಸಪೇಟೆಯಲ್ಲಿ ದೇವದಾಸಿ ಮಹಿಳೆಯರು, ಸಚಿವೆ ಶಶಿಕಲಾ ಜೊಲ್ಲೆಯವರ ಮುಂದೆ ಗೋಳಾಡಿದ್ದಾರೆ, ಅಂದಹಾಗೆ ಇಂದು ವಿಜಯನಗರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಹೊಸಪೇಟೆ ನಗರದ ಒಳ ಕ್ರೀಡಾಂಗಣದಲ್ಲಿ ಸಭೆ ನಡೆಸಿದ್ದರು, ವಿಷಯ ತಿಳಿದ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳು ಸಚಿವರನ್ನ ಬೇಟಿಮಾಡಿ ತಮ್ಮ ಗೋಳನ್ನ ಹೇಳಿಕೊಳ್ಳಲು ಮುಂದಾಗಿದ್ದರು.ಮತ್ತು ನಗರದಲ್ಲಿ ಜಿಲ್ಲಾ ವೀಕ್ಷಣೆಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ

ಆದರೆ ಬೆಳಗ್ಗೆ 10:30ರ ಸುಮಾರಿಗೆ ಹೊಸಪೇಟೆ ನಗರದ ಒಳ ಕ್ರೀಡಾಂಗಣದ ಮುಂಬಾಗದಲ್ಲಿ ಕಾದು ಕುಳಿತಿದ್ದ ದೇವದಾಸಿಯರನ್ನ ಬೇಟಿಮಾಡದೆ  ಒಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ‌ ಬಾಗಿಯಾದರು. ಹೊಸಪೇಟೆ ತಾಲೂಕಿನ ಐವತ್ತಕ್ಕು ಹೆಚ್ಚು ದೇವದಾಶಿ ಮಹಿಳೆಯರು ಮತ್ತು ಅವರ ಮಕ್ಕಳು, ಸುಮಾರು ನಾಲ್ಕು ಗಂಟೆಗಳ ಕಾಲ ಒಳ ಕ್ರೀಡಾಂಗಣ ಬಾಗಿಲಲ್ಲಿ ಕಾದು ಕುಳಿತಿದ್ದರು, ನಂತರ ಸಭೆ ಮುಗಿಸಿ ಮರಳಿ ಬಂದ ಶಶಿಕಲಾ ಜೊಲ್ಲೆ ಅವರು ನೇರವಾಗಿ ದೇವದಾಸಿ ಮಹಿಳೆಯರ ಬಳಿ ಬಂದು ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ತಮ್ಮ ಅಳಲನ್ನ ಹೇಳಿಕೊಂಡ ದೇವದಾಸಿಯರು, ಕಳೆದ ಒಂದು ವರ್ಷದಿಂದ ನಮಗೆ ಕೊಡಬೇಕಾಗಿರುವ ಮಾಶಾಸನದ ಹಣ ಕೈ ಸೇರುತ್ತಿಲ್ಲ. ಅದರ ಜೊತೆಗೆ ದೇವದಾಸಿಯರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಕೊಡುವ ಮನೆಗಳು ಕೂಡ ಮಂಜೂರಾಗಿಲ್ಲ ಎಂದು ಗೋಳು ತೋಡಿಕೊಂಡರ ಅವರು ಇನ್ನೂ ಕೆಲವು ಬೇಡಿಕೆಗಳನ್ನ ಸಚಿವರ ಮುಂದೆ ಇಟ್ಟರು.


ದೇವದಾಸಿ ಪದ್ದತಿಯನ್ನ ಸರ್ಕಾರ ನಿರ್ಮೂಲನೆ ಮಾಡುತ್ತೆ ಎಂದು ಹೇಳುತ್ತೆ, ಆದರೆ ವಾಸ್ತವಕ್ಕೆ ದೇವದಾಶಿ ಪದ್ದತಿ ಇನ್ನೂ ನಿರ್ಮೂಲನೆ ಆಗಿಲ್ಲ, ಕಳೆದ ಒಂದು ತಿಂಗಳ ಹಿಂದೆ ನಮ್ಮಲ್ಲಿ ದೇವದಾಸಿ ಪದ್ದತಿ ಜೀವಂತವಾಗಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಇದಕ್ಕೆಲ್ಲ ಕಾರಣ ದೇವದಾಸಿಯರ ಮಕ್ಕಳು ಶಿಕ್ಷಣದಿಂದ ವಂಚಿತವಾಗಿರುವುದು, ಹಾಗಾಗಿ ನಮ್ಮ ಮಕ್ಕಳಿಗೆ ಸರ್ಕಾರ ಪ್ರಾಥಮಿಕ ಶಿಕ್ಷಣವನ್ನ ಮತ್ತು ಉನ್ನತ ಶಿಕ್ಷಣವನ್ನ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿದರು. ಈ ಎಲ್ಲ ಬೇಡಿಕೆಗಳನ್ನ ದೇವದಾಸಿಯರ ಮನವಿ ಪಡೆದ ಸಚಿವೆ ಅಧಿಕಾರಿಗಳಿಗೆ ಸೂಚನೆ ನೀಡಿ ಆದಷ್ಟುಬೇಗ ಇವರ ಎಲ್ಲಾ ಬೇಡಿಕಗೆಳನ್ನ ಪೂರೈಸಿ ಎಂದು ಹೇಳಿ ಅಲ್ಲಿಂದ ತೆರಳಿದರು. ಹಾಗೂ ಜಿಲ್ಲೆಯ ಹಲವಾರು ತಾಲೋಕುಗಳಲ್ಲಿ, ಅಂದರೆ “ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆಯ ಹಲವಾರು ಸ್ಥಳದಲ್ಲಿ ಇನ್ನೂ ಸಹ ದೇವದಾಸಿ ಪದ್ಧತಿ ಯಾಕೆ ಇನ್ನೂ ಜೀವಂತವಾಗಿದೆ ಅದರಿಂದ ನಮಗೇನು ದೊರೆಯುತ್ತಿಲ್ಲ ಮತ್ತು ನಮ್ಮ ಕುಟುಂಬದ ಕಷ್ಟಗಳನ್ನು ನಿಭಾಯಿಸುವುದು ಆಗುತ್ತಿಲ್ಲ ಎಂದರೆ ಅದನ್ನು ಏಕೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಅಲ್ಲಿನ ದೇವದಾಸಿ ಮಹಿಳೆಯರು ಇನ್ನಾದರೂ ಇಲ್ಲಿನ ತಾಲೋಕು ಹಾಗೂ ಜಿಲ್ಲಾಡಳಿತ ಇವರ ಒಂದು ಕಷ್ಟಕ್ಕೆ ಸ್ವಂದಿಸಿ ಈ ಒಂದು ಅನಿಷ್ಟ ಪದ್ದತಿಯನ್ನು ತೊಲಗಿಸಲಿ ಎಂಬುದೇ ನಮ್ಮ ಒಂದು ಪತ್ರಿಕಾ ತಂಡದ ಆಶಯ ಮತ್ತು ಇಂತಹ ಅನಿಷ್ಟ ಪದ್ಧತಿಯು ಮತ್ತೆ ಮರುಕಳಿಸದಂತೆ ಅಲ್ಲಿನ ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯ ಸೂಕ್ತ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಿ, ಹಾಗೂ ಒಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ವಿಜಯನಗರ ಜಿಲ್ಲೆಯಲ್ಲಿರುವ ದೇವದಾಸಿಯರ ಸ್ಥಿತಿಗತಿಗಳು ಅದೋಗತಿಗೆ ತಲುಪಿದ್ದು ಇನ್ನು ಮುಂದಾದರು ಇವರ ಕಷ್ಟಗಳು ದೂರಾಗುತ್ತವೆಯೂ ಇಲ್ಲವೂ ಕಾದುನೋಡಬೇಕಿದೆ…

ವರದಿ. ಗಣೇಶ್, ಕೆ, ವಿಜಯನಗರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;