ವಿಶ್ವಾಸ ಕಿರಣ ಸಮಾರೋಪ
ಹೂವಿನಹಡಗಲಿ: ಪಟ್ಟಣದ ಜಿಪಿಜಿ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆಯ ತರಗತಿಗಳ ವಿಶ್ವಾಸ ಕಿರಣ ತರಗತಿಗಳ ಸಮಾರೋಪ ಸಮಾರಂಭ ಜರುಗಿತು.
ಸಮಾರೋಪ ನುಡಿಗಳನ್ನಾಡಿದ ಎಸ್ ಕೆ ಜಿ ಜೆ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಷಣ್ಮುಖಪ್ಪ ಬಾಗವಾಡ ಮಾತನಾಡಿ ಪದವಿಪೂರ್ವ ಶಿಕ್ಷಣ ಇಲಾಖೆಯ ದೂರಾದೃಷ್ಟಿ ಹಾಗೂ ಇಂಗ್ಲಿಷ್ ಫಲಿತಾಂಶ ಸುಧಾರಣೆಯ ಮಹತ್ವದ ಹೆಜ್ಜೆಯಾಗಿ 24 ದಿನಗಳ ವಿಶ್ವಾಸ ಕಿರಣ ಕಾರ್ಯಕ್ರಮ ಆಯೋಜಿಸಿದ್ದರು. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಸಿಬ್ಬಂದಿಗೆ ಅಭಿನಂದಿಸಿದರು. ಜಗತ್ತಿನ ಎಲ್ಲ ಸಂವಹನ ಭಾಷೆಗಳಂತೆಯೇ ಇಂಗ್ಲಿಷ್ ಕೂಡ ಒಂದು, ಆದರೆ ಜಗತ್ತಿನಲ್ಲಿ ಹಲವು ಕಡೆ, ಹಲವರು ಮಾತನಾಡುವ ಭಾಷೆ ಇಂಗ್ಲಿಷ್ ಆಗಿರುವುದರಿಂದ ಇಂಗ್ಲಿಷ್ ಗೆ ಮಹತ್ವ ಬಂದಿದ್ದು, ಭಾರತದಲ್ಲಿಯೂ ಕೂಡ ಇಂಗ್ಲಿಷ್ ದಿನ ನಿತ್ಯದ ಜೀವನದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಳು ಸ್ಪರ್ಧಾತ್ಮಕ ಜಗತ್ತಿಗೆ ತಯಾರಾಗಬೇಕಂದರೆ ಇಂಗ್ಲಿಷ್ ಭಾಷೆ ಕಲಿಯುವುದು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ವಿಶ್ವಾಸ ಕಿರಣ ಕಾರ್ಯಕ್ರಮ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಸಹಕರಿಯಾಗಲಿದೆ ಎಂದರು.
ಕನ್ನಡ ಉಪನ್ಯಾಸಕರಾದ ಕೆ. ಶಬೀನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಕೆ.ದ್ಯಾಮಜ್ಜ, ವಿರೂಪಾಕ್ಷಪ್ಪ ಬಡಿಗೇರ್, ಶಂಕರ್ ಬೆಟಗೇರಿ, ಶಿವಪ್ಪ ಉಪಸ್ಥಿತರಿದ್ದರು. ಇಂಗ್ಲಿಷ್ ಉಪನ್ಯಾಸಕರಾದ ಪರಶುರಾಮ ನಾಗೋಜಿ, ಅಜರುದ್ದಿನ್ ಎಂ, ವಿಶ್ವನಂದಿನಿ, ಪರಶುರಾಮ ಎಂ ಅವರು ವಿಶ್ವಾಸ ಕಿರಣ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ವರದಿ.ಅಜಯ. ಚ ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
