ಜೋಳ ಖರೀದಿ ಹೋರಾಟಕ್ಕೆ ಬೆಂಬಲಿಸಲು ರೈತರಲ್ಲಿ ಮನವಿ – ಬಸವರಾಜ್ ನಾಡಗೌಡ್ರು.
ಸಿಂಧನೂರು : ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಬಸವರಾಜ್ ನಾಡಗೌಡ್ರು ರವರು ಜೆಡಿಎಸ್ ಯುವ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಶಾಸಕ ವೆಂಕಟರಾವ್ ನಾಡಗೌಡರು 20 ಕ್ವಿಂಟಲ್ ಜೋಳ ಖರೀದಿ ನಿಗದಿಯನ್ನು ತೆಗೆಯಬೇಕು ಎಂದು ಸದನದಲ್ಲಿ ಮಾತನಾಡಿದ್ದರು. ಮೊನ್ನೆ ನಡೆದ ಕ್ಯಾಬಿನೆಟ್ ಸಬ್ ಮೀಟಿಂಗ್ನಲ್ಲಿ ಸಣ್ಣಮತ್ತು ಅತಿ ಸಣ್ಣ ರೈತ ಅನ್ನುವದನ್ನು ಮಾತ್ರ ತೆಗೆದು ಯಾವ ದೊಡ್ಡ ರೈತರು ಆದರೂ ಪಹಣಿ ಕೊಡಬಹುದು ಅನ್ನುವುದನ್ನ ಮಾತ್ರ ತೀರ್ಮಾನಿಸಿದ್ದಾರೆ.ಇದು ರೈತರಿಗೆ ಅನುಕೂಲವಾಗುವುದಿಲ್ಲ. ಮಂಗಳವಾರ ದಿನದಂದು ಎಪಿಎಂಸಿಯ ಗಣೇಶ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ತಹಸಿಲ್ದಾರರಿಗೆ ಮನವಿಯನ್ನು ಕೊಡವುದಾಗಿ ತಿಳಿಸಿದರು. ಜೋಳ ಬೆಳೆಯುವಂತ ರೈತರು ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.ರಾಯಚೂರಿನ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ಗಣರಾಜ್ಯೋತ್ಸವ ದಿನದಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ತೆಗೆದರೆ ಮಾತ್ರ ಧ್ವಜಾರೋಹಣ ಮಾಡವು ಎಂದು ಹೇಳಿ ಪೋಟೊ ತೆಗಿಸಿ ದ್ವಜಾರೋಹಣ ಮಾಡಿರುವುದು ಖಂಡನೀಯ.
ಸೋಮವಾರದಂದು ಎಲ್ಲಾ ದಲಿತಪರ,ಅಲ್ಪಸಂಖ್ಯಾತ,ಹಿಂದುಳಿದ, ಪ್ರಗತಿಪರ ಸಂಘಟನೆಗಳು ಸಿಂಧನೂರು ಬಂದ್ ಗೆ ಕರೆ ಕೊಟ್ಟಿದ್ದು,ಈ ಬಂದ್ ಗೆ ಜೆಡಿಎಸ್ ಪಕ್ಷದ ಬೆಂಬಲ ನೀಡುವುದಾಗಿ ತಿಳಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಬಹಳ ಚರ್ಚೆಯಾಗುತ್ತಿದೆ. ಶಾಸಕ ನಾಡಗೌಡರು ಸ್ಥಳ ನಿಗದಿ ಮಾಡಿದ್ದು ಸೂಕ್ತ ಅಲ್ಲ ಅಂತ ಕೆಲ ಮುಖಂಡರುಗಳು ಹೇಳುತ್ತಿರುವ ಸುದ್ದಿಗಳು ಮಾಧ್ಯಮದ ಮೂಲಕ ಬರುತ್ತಿವೆ.ಶಾಸಕರು ನಗರದಲ್ಲಿ ಎರಡು ಎಕರೆ ಜಾಗ ಎಲ್ಲಿಯಾದರೂ ಇದ್ದರೆ ತೋರಿಸಿ ಅಂತ ಅಧಿಕಾರಿಗಳಿಗೆ ಕೇಳಿ ನಗರದ ತುಂಬಾ ಸುತ್ತಾಡಿ ಜಾಗ ಸಿಗದಿದ್ದಾಗ ಈ ಒಂದು ನಿರ್ಧಾರ ಮಾಡಿದ್ದಾರೆ.ಹಿರಿಯ ಮುಖಂಡರು ಬೇರೆ ಜಾಗ ತೋರಿಸುತ್ತೇವೆ ಅಂತ ಹೇಳಿದ್ದಾರೆ. ಒಬ್ಬ ಹಿರಿಯ ಮುಖಂಡರು ಅಲ್ಲಿ ಮಾಡಿದರೆ ನಾಡಗೌಡರಿಗೆ ಲಾಭ ಇದೆ ಅಂತ ಹೇಳುತ್ತಿದ್ದಾರೆ.ನಾವು ಜವಳಗೇರದ ನಮ್ಮ ಹೊಲದ ಪಕ್ಕ ಮಾಡುತ್ತಿಲ್ಲ. ಕಲ್ಲೂರು ಬೂತಲದಿನ್ನಿ ಹತ್ತಿರ ನಮ್ಮದು ಒಂದು ಎಕರೆ ಜಾಗನೂ ಇಲ್ಲಾ. ಅವರು ಯಾವ ದೃಷ್ಟಿಯಿಂದ ಹೇಳುತ್ತಿದ್ದಾರೆ ಗೊತ್ತಾಗುತ್ತಿಲ್ಲ.
ಶಾಸಕರು ಬಂದ ನಂತರ ಎರಡು ದಿನದಲ್ಲಿ ಸರ್ವ ಪಕ್ಷದ ಮುಖಂಡರನ್ನು ಕರೆದು ಸೂಕ್ತ ಜಾಗವನ್ನು ತೋರಿಸಿದರೆ ಅಲ್ಲಿಯೇ ಮಾಡಲು ಶಾಸಕರು ಸಿದ್ದರಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಹನುಮೇಶ್ k, ಅಲ್ಲಂಪ್ರಭು, ಆಸಿಫ್ ಇತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
