;

ಸೋಮವಾರ ಸಿಂಧನೂರು ಬಂದ್ ಯಶಸ್ವಿಗೊಳಿಸೋಣ- ಅಹಿಂದ ಹೋರಾಟ ಸಮಿತಿ ಮನವಿ…!!!

ಸೋಮವಾರ ಸಿಂಧನೂರು ಬಂದ್ ಯಶಸ್ವಿಗೊಳಿಸೋಣ- ಅಹಿಂದ ಹೋರಾಟ ಸಮಿತಿ ಮನವಿ.

ನಗರದ ಪ್ರವಾಸಿ ಮಂದಿರದಲ್ಲಿ ಅಹಿಂದ ಹೋರಾಟ ಸಮಿತಿಯು ಪತ್ರಿಕಾಗೋಷ್ಠಿ ಉದ್ದೇಶಿಸಿ ಸಿಂಧನೂರು ಬಂದ್ ಗೆ ಸಹಕರಿಸಲು ಸಾರ್ವಜನಿಕರು ವ್ಯಾಪಾರಸ್ಥರಲ್ಲಿ,ಮನವಿ ಮಾಡಿದರು.

ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ, ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರ ಇದ್ದರೆ ಧ್ವಜಾರೋಹಣ ಮಾಡುವುದಿಲ್ಲ ಎಂದು ಹಠಹಿಡಿದು, ಭಾವಚಿತ್ರವನ್ನು ತೆಗೆದ ನಂತರವೇ ಧ್ವಜಾರೋಹಣ ಮಾಡಿರುವುದು ಅಕ್ಷಮ್ಯ ಮಾತ್ರವಲ್ಲ, ಸಂವಿಧಾನ ವಿರೋಧಿ ವರ್ತನೆಯೂ ಆಗಿದೆ. ಈ ಕೂಡಲೇ ಸೇವೆಯಿಂದ ವಜಾಗೊಳಿಸಲು ಒತ್ತಾಯಿಸಿ ದಿ. 31 ಸೋಮವಾರದಂದು ಸಿಂಧನೂರು ಬಂದ್ ಕರೆ ಕೊಡಲಾಗಿದೆ. ವಿದ್ಯಾರ್ಥಿ ಯುವಜನರು, ರೈತ ಕಾರ್ಮಿಕರು, ಮಹಿಳಾ,ದಲಿತ ದಮನಿತ, ಶೋಷಿತ ಸಮುದಾಯಗಳು, ಅಲ್ಪಸಂಖ್ಯಾತರು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳಬೇಕು. ಸ್ವಯಂ ಪ್ರೇರಿತದಿಂದ ಶಾಲೆ, ಕಾಲೇಜುಗಳು,ಅಂಗಡಿ ಮುಂಗಟ್ಟುಗಳು ವ್ಯಾಪಾರ ಸ್ಥಗಿತ ಮಾಡುವುದರ ಮೂಲಕ ಬಂದ್ಗ್ ಸಹಕಾರಿಸಬೇಕೆಂದು ದಲಿತ ಹಿಂದುಳಿದ, ಅಲ್ಪಸಂಖ್ಯಾತರ ಹೋರಾಟ ಸಮಿತಿಯ ಮುಖಂಡರು ಪತ್ರಿಕಾಗೋಷ್ಠಿ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಡಿ.ಎಚ್. ಕಂಬಳಿ, ಚಂದ್ರಶೇಖರ ಗೋರೆಬಾಳ, ಖಾದರ್ ಸುಭಾನಿ , ಆರ್. ಅಂಬ್ರೂಸ್, ರಾಮಣ್ಣ ಗೋನ್ವಾರ,ಅಶೋಕ ನಂಜಲದಿನ್ನಿ,ಅಲ್ಲಮಪ್ರಭು, ನರಸಪ್ಪ ಕಟ್ಟಿಮನಿ, ನಾಗರಾಜ ಪೂಜಾರಿ, ಅಮರೇಶ ಗಿರಿಜಾಲಿ, ಹುಲಗಪ್ಪ ಮಲ್ಕಾಪೂರು, ಹನುಮಂತ ಗೋಮರ್ಸಿ, ಅಯ್ಯಪ್ಪ ಮಲ್ಲಾಪೂರು, ವೀರೇಶ ಹಂಚಿನಾಳ, ಬಸವರಾಜ ಬಡಿಗೇರ, ಶರಣಬಸವ ಮಲ್ಲಾಪೂರು, ಇನ್ನೂ ಅಹಿಂದ ಮುಖಂಡರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;