ಹುಮನಾಬಾದ ತಹಶೀಲ್ದಾರ್ ಡಾ.ಪ್ರದೀಪ ಹಿರೇಮಠ ಅವರ ಮೇಲೆ ಆದ ಹಲ್ಲೆ ಖಂಡಿಸಿ ಮುಖ್ಯಮಂತ್ರಿಗಳಿಗೆ ಮನವಿ.
ಸಿಂಧನೂರು :ಹುಮನಾಬಾದ ತಾಲೂಕು ದಂಡಾದಿಕಾರಿಗಳಾದ ಡಾ.ಪ್ರದೀಪಕುಮಾರ ಹಿರೇಮಠ್ ಅವರು ಜನೇವರಿ 28 ಶುಕ್ರವಾರ ರಂದು ಬೆಳಿಗ್ಗೆ 11:30 ತಹಸೀಲ್ ಕಚೇರಿಯಲ್ಲಿ ತಾಲೂಕಿನ ಆಹಾರ ವರ್ತಕರ ಸಭೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ,ರಾಯಚೂರನಲ್ಲಿ ಗಣರಾಜ್ಯೋತ್ಸವ, ದಿನದಂದು ಮಾನ್ಯ ನ್ಯಾಯಾಧೀಶರು ಡಾ.ಬಿ.ಆರ್ ಅಂಬೇಡ್ಕರರವರ ಭಾವಚಿತ್ರ ತೆಗೆಸಿ ಅವಮಾನ ಮಾಡಿರುವ ಘಟನೆಯನ್ನು ಖಂಡಿಸಿ ಹುಮನಾಬಾದ ತಾಲೂಕಿನ ಬಹುಜನ ಸಮಾಜವಾದಿ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿತ್ತು.ಮನವಿ ಪತ್ರ ಸಲ್ಲಿಸಲು ಮುಖಂಡರಾದ ಸಂಕುಲ ಗೋಖಲೆ ಜೊತೆಯಲ್ಲಿ ಪಕ್ಷದ ಮುಖಂಡರು ಬಂದಿದ್ದರು. ಆ ಸಂದರ್ಭದಲ್ಲಿ ತಹಸೀಲ್ದಾರರು ಗ್ರೇಡ್-2 ಅವರು ಮನವಿಯನ್ನು ಸ್ವೀಕರಿಸಲು ಹೋಗಿದ್ಧಾಗ ತಮಗೆ ಕೊಡುವುದಿಲ್ಲ, ತಹಸೀಲ್ದಾರ್ ಗ್ರೇಡ್ -1ಅವರೇ ಮನವಿಯನ್ನು ತಗೆದುಕೊಳ್ಳಬೇಕೆಂದು ಹಠ ಹಿಡಿದು ನಂತರ ಸುಮಾರು 15ರಿಂದ 20ಜನ ಸೇರಿ ಕಛೇರಿ ಒಳಗಡೆ ಆಹಾರ ವರ್ತಕರ ಸಭೆಯಲ್ಲಿ ನುಗ್ಗಿ ತಹಸೀಲ್ದಾರರಿಗೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಟೇಬಲ್ ಮೇಲೆ ನಿಂತು ತಹಸೀಲ್ದಾರ್ ಅವರನ್ನು ಥಳಿಸಿ ಹಲ್ಲೆ ಮಾಡಿರುತ್ತಾರೆ. ಬೀದರ ಜಿಲ್ಲೆಯ ಹುಮ್ನಾಬಾದ ತಾಲ್ಲೂಕಿನ ತಹಸೀಲ್ದಾರರ ಈ ರೀತಿ ಅಲ್ಲೆ ಮಾಡಿರುವುದರಿಂದ ರಾಜ್ಯಾದ್ಯಂತ ಕರ್ತವ್ಯನಿರತ ಸರಕಾರಿ ಅಧಿಕಾರಿಗಳು ಅವರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಯ ಸಿಬ್ಬಂದಿಯವರಿಗೆ ಮಾನಸಿಕತೆ ಕುಗ್ಗಿ ಕರ್ತವ್ಯ ನಿರ್ವಹಿಸಲು ಕಚೇರಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಸದರಿ ಹಲ್ಲೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ನೌಕರರು ಸಂಘ ಜಂಟಿಯಾಗಿ ತೀವ್ರವಾಗಿ ಖಂಡಿಸುತ್ತದೆ. ಕಾರಣ ರಾಜ್ಯದ ಸದರಿ ಘಟನೆಗಳು ಮರುಕಳಿಸದಂತೆ ಹಾಗೂ ಅಂಕುಶ ಗೋಖಲೆ ಇವರ ಮೇಲೆ ಹಾಗೂ ಉಳಿದ ಎಲ್ಲಾ ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರ ಅತ್ಯಂತ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ತಹಸೀಲ್ದಾರ ಪ್ರದೀಪ್ ಕುಮಾರ್ ಅವರ ಮೇಲಿನ ಹಲ್ಲೆ ಖಂಡಿಸಿ ಶನಿವಾರದಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮತ್ತು ಕಂದಾಯ ಇಲಾಖೆ ನೌಕರರ ಸಂಘ ವತಿಯಿಂದ ದಂಡಾದಿಕಾರಿಗಳಾದ ಮಂಜುನಾಥ ಭೋಗಾವತಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸ್ಥಳೀಯವಾಗಿ ಜನ ಸಂಪರ್ಕ ಹೊಂದಿರುವ ರಾಜ್ಯದ ಎಲ್ಲಾ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗನ್ ಮ್ಯಾನ್ ಒದಗಿಸುವುದು. ಕಚೇರಿ ಸಿಬ್ಬಂದಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡುವುದು,ಕಚೇರಿ ಕೆಲಸಕ್ಕೆ ಅಡ್ಡಿಪಡಿಸಿದವರಿಗೆ ವಿಶೇಷ ಕಾಯ್ದೆ ಜಾರಿ ಮಾಡಿ ಕಠಿಣ ಕ್ರಮ ಜರುಗಿಸುವುದು. ಎಲ್ಲಾ ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ನೀಡುವುದು ಇನ್ನೂ ಅನೇಕ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಹಿರೇಮಠ್ ಅಧ್ಯಕ್ಷರು,ಆನಂದ್ ಮೋಹನ್ ಜಿಲ್ಲಾ ಉಪಾಧ್ಯಕ್ಷರು, ಶಶಿಧರ್ ಹಳ್ಳಿ ರಾಜ್ಯ ಪರಿಷತ್ ಸದಸ್ಯರು, ಹನುಮಂತಪ್ಪ ನಾಯಕ, ಭರತ್ ಕುಮಾರ, ರಾಜಾಭಕ್ಷ ಗುಡೆಕೋಟೆ, ವೀರೇಶ,ರಜತ್ ಕುಮಾರ, ಶಫಿವುಲ್ಲಾ, ಶಿವಾನಂದ, ಭೀಮನಗೌಡ, ಮೌನೇಶ, ನಿಂಗಪ್ಪ ಹೊಸಮನಿ ಇನ್ನೂ ಅನೇಕರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
