ಸಂವಿಧಾನ ಗೌರವಿಸಿ ಅದರಂತೆ ನಡೆದುಕೊಳ್ಳಿ ವಿದ್ಯಾರ್ಥಿಗಳಿಗೆ ಕರೆ : ರಮಾದೇವಿ ಶಂಭೋಜಿ
ಸಿಂಧನೂರು :ಪ್ರಪಂಚದಲ್ಲಿ ನಮ್ಮ ದೇಶ ವಿಶಿಷ್ಟವಾಗಿದ್ದು ಬ್ರಿಟಿಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಪಡೆದ ನಂತರ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರು ಉತ್ತಮವಾದ ಸಂವಿಧಾನ ರಚಿಸಿಕೊಟ್ಟಿದಾರೆ. ನಾವೆಲ್ಲರೂ ಸಂವಿಧಾನವನ್ನು ಗೌರವಿಸಿ ಅದರಂತೆ ನಡೆದುಕೊಳ್ಳಬೇಕು.ವಿದ್ಯಾರ್ಥಿಗಳು ನಿರಂತರ ಅಧ್ಯಾಯನದ ಜೊತೆಗೆ ಉತ್ತಮ ಸಂಸ್ಕಾರ ಪಡೆದುಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದು ಮುಖ್ಯ ಶಿಕ್ಷಕಿ ರಮಾದೇವಿ ಶಂಭೋಜಿ ಹೇಳಿದರು.
ಅವರು ತಾಲೂಕಿನ ವಿರುಪಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ 73 ನೇ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಸಿ.ಅಧ್ಯಕ್ಷ ಈರಪ್ಪ ಅಯ್ಯಾಳ್ಳಿ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಅಮರೇಶ ಚಿಕಲಪರ್ವಿ, ನಿಂಗಮ್ಮ, ಕರಿಯಮ್ಮ, ರಮಜಾನ್ ಬಿ.ದೇವಮ್ಮ, ಸ್ಕೊಚ್ ವಿಭಾಗದ ಜಿಲ್ಲಾ ಸಹಾಯಕ ಆಯುಕ್ತ ಬೀರಪ್ಪ ಶಂಭೋಜಿ, ಶಿಕ್ಷಕರಾದ ಪ್ರಮೀಳಾ ಹಿರೇಮಠ್, ಕಾವೇರಿ,ಶಾರದಮ್ಮ, ಮಂಜುಳಾ, ಶ್ವೇತಾ ಗೊರವರ,ಮೌಲಾಸಾಬ್ ಪ್ರಶಿಕ್ಷಣಾರ್ಥಿ, ಚಂದ್ರಶೇಖರ್ ಉಪಸ್ಥಿತರಿದ್ದರು.
ಗಣರಾಜ್ಯೋತ್ಸವದ ಪ್ರಯುಕ್ತ ಶಾಲೆಯಲ್ಲಿ ಲಿಖಿತ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಶಿಕ್ಷಕ ಮೌಲಾಸಾಬ್ ಏರ್ಪಡಿಸಿದ್ದರು. ಬೀರಲಿಂಗಪ್ಪ ಪ್ರಥಮ, ಸಂಜನಾ ಅಮರೇಶ್ ದ್ವಿತೀಯ, ಅರ್ಷದ್ ಅಲಿ ಹಾಗೂ ಪಲ್ಲವಿ ತೃತಿಯ ಬಹುಮಾನ ಪಡೆದುಕೊಂಡರು. ಸವಿತಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಮಂಜುಳಾ ಸ್ವಾಗತಿಸಿದರು. ಸುನೀತಾ ಅರಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮೀಳಾ ಹಿರೇಮಠ್ ವಂದಿಸಿದರು. ಮೌಲಾಸಾಬ್ ಬಾವಿಕಟ್ಟಿ ನಿರೂಪಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
