115 ಮೀಟರ್ ಎತ್ತರದ ಏಕಾಶೀಲ ಧ್ವಜ ಸ್ಥಂಬ ನಿರ್ಮಾಣ ಮಾಡುವಂತೆ ಒತ್ತಾಯ
ಸಿಂಧನೂರು:115 ಮೀಟರ್ ಎತ್ತರದ ಏಕಾಶೀಲ ಧ್ವಜ ಸ್ಥಂಬ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಶಾಸಕರಿಗೆ ,ತಹಶೀಲ್ದಾರರಿಗೆ,ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರಿಗೆ ಸಿಂಧನೂರು ಗೆಳೆಯರ ಬಳಗದ (ಸಂಘ)ವತಿಯಿಂದ ಮನವಿ ಸಲ್ಲಿಸಲಾಯಿತು.
ನಗರದ ತಹಶಿಲ್ದಾರರ ಕಚೇರಿ ಆವರಣದಲ್ಲಿ ಸಿಂಧನೂರು ಗೆಳೆಯರ ಬಳಗದ ವತಿಯಿಂದ ಸಿಂಧನೂರು ತಾಲೂಕ ವಾಣಿಜ್ಯ ಹಾಗೂ ವ್ಯಾಪಾರ ಮತ್ತು ಇತರೆ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವ ತಾಲೂಕಾಗಿದ್ದು. ಎರಡು ರಾಜ್ಯ ರಾಜಧಾನಿಗಳ ಮದ್ಯದಲ್ಲಿರುವಂತಹ ಕೇಂದ್ರ ಬಿಂದುವಾಗಿರುತ್ತದೆ.ಅದು ಅಲ್ಲದೇ ಅಕ್ಕ ಪಕ್ಕದ ಜಿಲ್ಲೆಗಳಾಗ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈಗಾಗಲೇ ಅತಿ ಎತ್ತರದ ಏಕಾಶೀಲ ಧ್ವಜ ಸ್ಥಂಬವನ್ನು ನಿರ್ಮಾಣ ಮಾಡಿರುವುದು ಸಂತೋಷದ ಸಂಗತಿಯಾಗಿರುತ್ತದೆ.
ಅದರಂತೆಯೇ ನಗರದ್ಲಲಿಯು ಕೂಡ ಏಕಾಶೀಲ ಧ್ವಜ ಸ್ಥಂಬವನ್ನು ನಿರ್ಮಾಣ ಮಾಡಲು ಸಿಂಧನೂರು ತಾಲೂಕಿನ ಗೆಳೆಯರ ಬಳಗ ಹಾಗೂ ಸಾರ್ವನಿಕರ ಇಚ್ಛೆಯಾಗಿದ್ದು. ಇದರ ಪ್ರಕಾರ ನಗರದಲ್ಲಿ ಗಾಂಧಿ ವೃತ್ತ,ತಾಲೂಕ ಕ್ರೀಡಾಂಗಣ,ಮಿನಿ ವಿಧಾನ ಸೌಧ, ಅಥವಾ ನೂತನವಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣದ ಯಾವುದಾದರೂ ಒಂದು ಸ್ಥಳದಲ್ಲಿ 115 ಮೀಟರ್ ಎತ್ತರದ ಏಕಾಶೀಲ ಧ್ವಜ ಸ್ಥಂಬವನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಂಧನೂರು ಗೆಳೆಯರ ಬಳಗದ ಸಂಘ ಅಧ್ಯಕ್ಷ ಸೈಯ್ಯದ್ ಬಂದೇನವಾಜ್, ಉಪಾಧ್ಯಕ್ಷ ಸದ್ದಾಂ ಖಾನ್ ಸೌದಾಗರ,ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್,ಕಾನೂನು ಸಲಹೆಗಾರ ಜೆ.ರಾಯಪ್ಪ ವಕೀಲರು, ಸಂಚಾಲಕ ವೀರೇಂದ್ರ ಶೆಟ್ಟಿ,ಸಹಕಾರ್ಯದರ್ಶಿ ವೀರೇಶ್ ಕಂದಕೊರ,ಸಾಮಾಜಿಕ ಜಾಲತಾಣ ಮುಖ್ಯಸ್ಥ ಸುರಂಜನ್ ಕುಮಾರ ಬೈರಾಗಿ, ಹನುಮಂತ ಸುಕಾಲಪೇಟೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮುಖಂಡರು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
