ಸಿಂಧನೂರು : ಅನುಭವ ಮಂಟಪದ ಶ್ರೇಷ್ಠ ಶರಣರಲ್ಲಿ ವಚನಕಾರರಲ್ಲಿ ಒಬ್ಬರಾದ ಅಂಬಿಗರ ಚೌಡಯ್ಯನವರು ತಮ್ಮದೇ ಆದ ಸಿದ್ಧಾಂತಗಳನ್ನು ಈ ನಾಡಿಗೆ ನೀಡಿದ್ದಾರೆ ಅವರ ಜಯಂತಿಯನ್ನು ಇವತ್ತು ಕರ್ನಾಟಕದಾದ್ಯಂತ ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದೆ ಎಲ್ಲಾ ಶರಣರು ಕೂಡ ದಾರ್ಶಿನಿಕರ ಶರಣರು ಬದುಕಿನ ಉದ್ದಕ್ಕೂ ಜನರಿಗೆ ಸಂದೇಶಗಳನ್ನು ನೀಡಿದ್ದಾರೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೇ ಮಹನೀಯರು ತೋರಿದ ಮಾರ್ಗದರ್ಶನದಲ್ಲಿ ಜೀವನ ನಡೆಸಿದರೆ ಮಾತ್ರ ಜಯಂತಿಗೆ ಅರ್ಥಸಿಗಲಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ದಿನಾಚರಣೆಯಲ್ಲಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಎಂ ದೊಡ್ಡಬಸವರಾಜ ಮಾತನಾಡಿ ನೇರ, ನಿಷ್ಠುರ, ನಡೆ, ನುಡಿಗಳಿಂದಸಮಾಜದಲ್ಲಿ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದ ಶ್ರೇಷ್ಟ ವಚನಕಾರ. ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯಟ್ಟರು.ಯಾರಿಗೂ ಹೆದರದೆ,ಅಳುಕದೇ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಬಸವಣ್ಣನವರ ಸಮಕಾಲೀನರಾದ ನಿಜಶರಣ ಅಂಬಿಗರ ಚೌಡಯ್ಯನವರು ಆದರ್ಶಮಯವಾದ ಜೀವನಶೈಲಿಯನ್ನು ವಚನಗಳ ಮೂಲಕ ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
ಬ್ರಹ್ಮಕಪಾಲವಿಲ್ಲ, ಭಸ್ಮಭೂಷಣನಲ್ಲ,
ವೃಷಭವಾಹನನಲ್ಲ, ಋಷಿಯರುಗಳೊಡನಿದ್ದಾತನಲ್ಲ.ಎಸಗುವ ಸಂಸಾರದ ಕುರುಹಿಲ್ಲದಾಂತಗೆ
ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ ಎಂಬ ವಚನದೊಂದಿಗೆ ಮಾತನಾಡಿದ ನಿರುಪಾದೆಪ್ಪ ವಕೀಲರು ಆಕಾರವನ್ನು ತಿರಸ್ಕರಿಸುವ ಮೂಲಕ ನಿರಾಕಾರದಲ್ಲಿ ದೇವರನ್ನು ಕಾಣುವ ಜೊತೆಯಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ತನ್ನ ಹೆಸರನ್ನು ನಿಜಜೀವನದಲ್ಲಿ ಅನುಸರಿಸಿ ಅಂಕಿತವನ್ನಾಗಿ ಬಳಸಿದ್ದಾರೆ. ತನ್ನ ತಾನೊಡನೆ ಅರಿದೊಡೆ ತಾನೇ ಶರಣೆಂಬ ನಿಜ ಐಕ್ಯವನ್ನು ಜನರಿಗೆ ತಿಳಿಸಿದ್ದಾರೆ. ದೋಣಿಯನ್ನು ನಡೆಸುವುದರ ಮೂಲಕ ನಿನ್ನ ಸಂಸಾರವನ್ನು ನಡೆಸಲಾರದೆ ಬದುಕು ಕಟ್ಟಿಕೊಂಡ ದಿನಮಾನಗಳಲ್ಲಿ ವೇದಾಂತದ ಮಾತೇಕೆ ಎಂದು ಪುರೋಹಿತ ಶಾಹಿಗಳು ಕೇಳಿದಾಗ ಕಟ್ಟಿದ ಲಿಂಗವ ಕಿರಿದು ಮಾಡಿ,ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!ಇಂತಪ್ಪ ಲೊಟ್ಟಿ ಮೂಳರ ಕಂಡರೆಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ ಸ್ಮರಿಸುವುದರ ಮೂಲಕ ಜಾತ್ಯತೀತಮನೋಭಾವವನ್ನುಬೆಳೆಸಿಕೊಳ್ಳಬೇಕು ಎಂದು ಮಾತನಾಡಿದರು
ಈ ಸಂದರ್ಭದಲ್ಲಿ ಶಿವನಗೌಡ ಗೋರೆಬಾಳ,ಸೋಮನಗೌಡ ಬಾದರ್ಲಿ,ಖಾಜಿಮಲ್ಲಿಕ್,ಎಚ್.ಎಂ. ಬಡಿಗೇರ,ಅಂಬುದಾಸ್, ಸಮಾಜದ ಮುಖಂಡರು, ವಿವಿಧ ಸಂಘಟನೆ ಮುಖಂಡರು ಇನ್ನಿತರರು ಭಾಗವಹಿಸಿದ್ದರು….
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
