ಸಿಂಧನೂರು :ಒಮಿಕ್ರಾನ್ ಬೀತಿ ಹಿನ್ನೆಲೆಯಲ್ಲಿ ಅಂಬಾದೇವಿ ಜಾತ್ರೆ ರದ್ದು -ಶಾಸಕ ನಾಡಗೌಡ.
ರಾಜ್ಯದಲ್ಲಿ ಮೂರನೆಯ ಅಲೆಯಲ್ಲಿ ಒಮಿಕ್ರಾನ್ ಎಂಬ ಮಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ನಡೆಯಬೇಕಿದ್ದ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ನಮ್ಮೆಲ್ಲರ ಸುರಕ್ಷತೆ ಹಿತದೃಷ್ಟಿಯಿಂದ ಸರಕಾರದ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ಅಂಭಾದೇವಿ ಜಾತ್ರೆ ರಥೋತ್ಸವವನ್ನು ರದ್ದುಪಡಿಸಲಾಗಿದೆ.ಇದಕ್ಕೆ ಭಕ್ತಾದಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು. ಪ್ರತಿಯೊಬ್ಬರು ಮಾಸ್ಕ ಧರಿಸಿ ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಓಡಾಡಿರಿ ಎಂದು ಶಾಸಕ ವೆಂಕಟರಾವ್ ನಾಡಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಅಂಬಾಮಠದ ಅಂಭಾದೇವಿಯ ಮಠದ ಸಭಾಂಗಣದಲ್ಲಿ ಜಾತ್ರೆ ನಿಮಿತ್ಯ ಅಧಿಕಾರಿಗಳ ಸಭೆ ಉದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಂತರ ದಂಡಾದಿಕಾರಿಗಳಾದ ಮಂಜುನಾಥ್ ಭೋಗಾವತಿ ಮಾತನಾಡಿ ದಿ.ಜನೇವರಿ 17ರಂದು ನಡೆಯಬೇಕಿದ್ದ ಅಂಬಾದೇವಿ ಜಾತ್ರೆ ರಥೋತ್ಸವವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರದ್ದುಪಡಿಸಲಾಗಿದೆ ಸಾರ್ವಜನಿಕರು ಮತ್ತು ಭಕ್ತಾದಿಗಳು ತಮ್ಮ ಮನದಲ್ಲಿ ಅಮ್ಮನವರ ಕೃಪೆಗೆ ಪಾತ್ರರಾಗಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು
3ನೇ ಅಲೆಯಲ್ಲಿ ಒಮಿಕ್ರಾನ್ ಎಂಬ ಮಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯ ಜೊತೆಗೆ ಸಹಕಾರ ನೀಡಬೇಕು ಎಂದು ಡಿ. ವಾಯ್.ಎಸ್.ಪಿ. ವೆಂಕಟಪ್ಪ ನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ತರಬೇತಿ ಡಿವೈಎಸ್ಪಿ ಲಕ್ಷ್ಮಿಕಾಂತ್, ಸಿಪಿಐ ಉಮೇಶ್ ಕಾಂಬ್ಳೆ, ಗ್ರಾಮೀಣ ಪಿ.ಎಸ್.ಐ.ಯರಿಯಪ್ಪ, ಸೋಮಲಾಪುರು ಗ್ರಾ. ಪಂ. ಅಧ್ಯಕ್ಷ ಸೀತಾರಾಮರಡ್ಡಿ, ದೇವಸ್ಥಾನದ ಆಡಳಿತಾದಿಕಾರಿ ಅಧ್ಯಕ್ಷ ರಾಜಶೇಖರ ಸ್ವಾಮಿ ಇದ್ದರು….
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
