ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಹೊಸಕೇರಿ ಗ್ರಾಮದ ಅಂಬೇಡ್ಕರ್ ಕಾಲೋನಿಯ ದುಸ್ಥಿತಿ ಹೇಳತೀರದಾಗಿದೆ.ಇದು ಕೇವಲ ಇಲ್ಲಿಮಾತ್ರವಲ್ಲ ಗ್ರಾಮದ ಕೆಲ ಗಲ್ಲಿಗಳು ಕೂಡ ಇದೇ ದುಸ್ಥಿತಿಯಲ್ಲಿವೆ ಎನ್ನುತ್ತಾರೆ ಗ್ರಾಮಸ್ಥರು,ಇದು ಸುಮಾರು ನಾಲ್ಕು ವರ್ಷದ ಗೋಳಾಗಿದ್ದು ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಾಸಸ್ಥಾನದಲ್ಲಿಯೇ,ಈ ದುರ್ಘತಿ ಎಂದರೆ ಊಹಿಸಿ ಗ್ರಾಮ ಪಂಚಾಯ್ತಿ ಯ ಕಾರ್ಯವೈಕರಿ ಎಂತಹದ್ದು..!? ಕೆಲ ಗ್ರಾಮಸ್ಥರು ಜನಪ್ರತಿನಿಧಿಗಳ ಪರ ವಕಾಲತ್ತು ವಹಿಸಿದರೆ ಹಲವರು ಅವರ ನಿರ್ಲಕ್ಷ್ಯ ಧೋರಣೆಗೆ ಕನ್ನಡಿ ಎಂದು ಆರೋಪಸಿದ್ದಾರೆ.

ದಲಿತರ ಕೇರಿ ಎಂಬ ಕಾರಣಕ್ಕೆ ಶೊಷಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಗ್ರಾಪಂ ಆಡಳಿತದ ಮೇಲಿದೆ,ನಾಲ್ಕ ವರ್ಷದಿಂದ ಬಗೆಹರಿಯದೇ ಇರೋ ಈ ಸಮಸ್ಯೆ ಆರೋಪಕ್ಕೆ ಪುಷ್ಠಿನೀಡುತ್ತಿದೆ.ಗ್ರಾಮದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದಾಗಿ ಈ ಸಮಸ್ಯೆ ತಲೆದೋರಿರುವುದಾಗಿ ಮೇಲ್ನೋಯಟಕ್ಕೆ ಸಾಬೀತಾಗಿದೆ,ಬಚ್ಚಲ ಮೋರಿ ನೀರು ಹಾಗೂ ಮನೆಬಳಕೆಯಿಂದಾಗುವ ತ್ಯಾಜ್ಯನೀರು ಬಚ್ಚಲ ನೀರು ರಸ್ಥೆಯಲ್ಲಿ ನಿಂತು.ಕೆಸರು ಗದ್ದೆಯಾಗಿ ಕೊಳೆತು ನಾರುತ್ತಿದೆ ದಲಿತ ಕಾಲೋನಿ ಗಬ್ಬೆದ್ದು ನಾರುತ್ತಿದೆ ಎಂದು ಕಾಲೋನಿ ಜನ ದೂರಿದ್ದಾರೆ.ತಾವು ವಾರಕ್ಕೊಮ್ಮೆ ಆಸ್ಪತ್ರೆಗೆ ಅಲೆದಾಡೋದು ಸಾಮಾನ್ಯವಾಗಿದ್ದು, ನಿತ್ಯ ನರಳುವಂತಾಗಿದೆ ಎಂದು ಕಾಲೋನಿಯವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾಗರೀಕ ಸಮಾಜ ನಾಚಿಕೆ ಪಡುವಂತಹ ಮನೋಭಾವದ ಕೆಲ ಜನಪ್ರತಿನಿಧಿಗಳಿಂದಾಗಿ, ತಮ್ಮ ಬದುಕು ನಿತ್ಯ ನರಕದಲ್ಲಿದೆ ನರಳುವಂತಾಗಿದೆ ಕಾರಣ ಶೀಘ್ರವೇ ಹಗರಿಬೊಮ್ಮನಹಳ್ಳಿ ತಾಪಂ ಕಾರ್ಯನಿರ್ವಹಣಾಧಿಕಾರಿ.ಅತೀ ಶೀಘ್ರವಾಗಿ ಸ್ಥಳಕ್ಕಾಗಮಿಸಿ ದುಸ್ಥಿತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ, ನಿತ್ಯ ಕೊಳೆತ ಕೆಸರು ಗದ್ದೆಯ ಮಧ್ಯದಲ್ಲಿಯೇ ನಿತ್ಯ ವಾಸವಾಗಿದೆ ಗಲೀಜು ನೀರಿನಲ್ಲಿಯೇ ನಿತ್ಯ ನಡೆದಾಡಬೇಕಿದೆ, ನಾಲ್ಕು ವೆರ್ಷದಿಂದ ದುರ್ನಾಥ ನೀರಿನಲ್ಲಿ ಲ್ಲಿಯೇ ನಡೆದಾಡಬೇಕು ಬಚ್ಚಲ ಮೋರಿ ನೀರಿನೊಂದಿಗೆ ಜೀವನ ಸಾಗಿಸಬೇಕಿದೆ. ರಸ್ಥೆ ಪಾಚಿಯಿದ ಕೂಡಿದ್ದು ಹಲವು ಜನ ಬಿದ್ದು ಅಂಗಹೂನರಗಿದ್ದಾರೆ ಮತ್ತು ಆಸ್ಪತ್ರೆ ಸೇರಿದ್ದಾರೆ,ಬಚ್ಚಲ ಮೋರಿ ನೀರಿನಲ್ಲಿಯೇ ನಡೆದಾಡುವಂತಾಗಿದೆ.ರೋಗ ಋಜನಿಗಳಿಂದ ಕಾಲೋನಿ ಜನ ನಿತ್ಯ ಆಸ್ಪತ್ರೆಗೆ ಅಲೆಯದಾಡುವಂತಾಗಿದೆ. ಇದು ಕೆಲ ಮೂರ್ಖ ಹಾಗೂ ಮೂಢ ಜನಪ್ರತಿನಿಧಿಗಳಿಂದ, ಹಾಗೂ ಗ್ರಾಪಂ ಭ್ರಷ್ಟ ಅಧಿಕಾರಿಯಿಂದ ದಲಿತರಿಗೆ ಆಗುತ್ತಿರುವ ಶೋಷಣೆಗೆ ಜೀವಂತ ಸಾಕ್ಷಿಯಾಗಿದೆ ಎಂದು ಕಾಲೋನಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಮೂರ್ಖ ಮುಖಂಡರ ವಣ ಪ್ರತಿಷ್ಠೆಗೆ ತಮ್ಮ ನೆಮ್ಮದಿ ಹಾಳು ಮಾಡಲಾಗುತ್ತಿದೆ, ಅಧಿಕಾರಿಗಳು ಶೀಘವೇ ಈ ನರಕದಿಂದ ತಮ್ಮನ್ನು ಮುಕ್ತ ಮಾಡಬೇಕಿದೆ ಮತ್ತು ನೈರ್ಮಲ್ಯತೆ ಕಾಪಾಡಬೇಕಿದೆ. ಮೂಲಭೂತ ಸೌಕರ್ಯಗಳನ್ನು ಕೂಡಲೇ ಸಮರ್ಪಕವಾಗಿ ಕಾಲೋನಿಗೆ ಒದಗಿಸಬೇಕೆಂದು, ಕಾಲೋನಿಯ ವಾಸಿಗಳು ಒತ್ತಾಯಿಸಿದ್ದಾರೆ ಈ ಮೂಲಕ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಒತ್ತಾಯಿಸಿದ್ದಾರೆ.ನಿರ್ಲಕ್ಷ್ಯ ತೋರಿದ್ದಲ್ಲಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಲ್ಲಿ,ಹಾಗೂ ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಳಲ್ಲಿ ದೂರು ನೀಡಲಾಗುವುದು. ಇದು ಕೇವಲ ಹೊಸಕೇರಿ ಗ್ರಾಮದಲ್ಲಿನ ದುರವಸ್ಥೆ ಮಾತ್ರವಲ್ಲ ಹಲವೆಡೆಯ ಗ್ರಾಮಗಳಲ್ಲಿನ ದಲಿತ ಕಾಲೋನಿಗಳ ಗೋಳಾಗಿದ್ದು, ಕೆಲ ಗ್ರಾಮ ಪಂಚಾಯ್ತಿ ಆಡಳಿತದಿಂದ ದಲಿತ ಕೇರಿಗಳನ್ನ ಕೆಲ ಮೂರ್ಖ ಜನಪ್ರತಿನಿಧಿಗಳು ಹಾಗೂ ಕೆಲ ಭಷ್ಟ ಹಾಗೂ ಮೂಢ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು,ದ್ಧಲಿತ ಕಾಲೋನಿಗಳನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ.ಹಲವೆಡೆ ಮೂಲಭೂತ ಸೌಕರ್ಯಗಳನ್ನು ಈವರೆಗೂ ಒದಗಿಸಿಲ್ಲ,ಅಂತಹ ನೀಚರ ವಿರುದ್ಧ ಶೀಘ್ರವೇ ಕಾನೂನು ಹೋರಾಟ ನಡೆಸಲಾಗುವುದೆಂದು ದಲಿತ ಮುಖಂಡರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಹಾಗೂ *ಜಿಪಂ ಅಧಿಕಾರಿ ಕ್ರಮ ಕೈಗೊಳ್ಳಲಿ*- ಕಳೆದ ನಾಲ್ಕು ವರ್ಷದಿಂದ ದಲಿತ ಕಾಲೋನಿಯ ಜನರ ಜೀವ ಹಿಂಡುತ್ತಿರುವ ಈ ಸಮಸ್ಯೆಯನ್ನು, ತಾಪಂ ಅಧಿಕಾರಿಗಳು ಖುದ್ದಾಗಿ ಪರಿಹರಿಸಬೇಕಿದೆ.ಈ ನಿಟ್ಟಿನಲ್ಲಿ ಸಂಬಂಧಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು,ವಸ್ಥುಸ್ಥಿತಿ ಅರಿತು ನಿರ್ಲಕ್ಷ್ಯ ಧೋರಣೆಯ ಗ್ರಾಪಂ ಅಧಿಕಾರಿಯ ವಿರುದ್ಧ ಶಿಸ್ಥು ಕ್ರಮ ಜರುಗಿಸಬೇಕಿಸಬೇಕಿದೆ. ಜಿಲ್ಲಾಧಿಕಾರಿಗಳು ದಲಿತ ಕೇರಿಗಳ ಇಂತಹ ದುರಾವಸ್ಥೆಯನ್ನರಿತು ಅಗತ್ಯ ಕ್ರಮಗಳನ್ನು ಜರುಗಿಸಬೇಕಿದೆ, ಕೆಲ ಮೂಢ ಹಾಗೂ ಮೂರ್ಖ ಜನಪ್ರತಿನಿಧಿಗಳಿಗೆ ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಬುದ್ದಿಕಲಿಸಬೇಕೆಂದು ದಲಿತ ಕೇರಿಯ ಜನತೆ ಈ ಮೂಲಕ ಜಿಲ್ಲಾಧಿಕಾರಿಯಲ್ಲಿ ಕೋರಿದ್ದಾರೆ….

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
