;

ಮಳೆಯಿಂದ ತಮ್ಮ ಫಸಲು ಕೊಚ್ಚಿಹೋದ ರೈತರಿಗೆ ಧೈರ್ಯ ತುಂಬಿದ ರೈತನಾಯಕಿ ಎಂ,ಪಿ,ವೀಣಾ ಮಹಾಂತೇಶ್!!

ಮಳೆಯಿಂದ ತಮ್ಮ ಫಸಲು ಕೊಚ್ಚಿಹೋದ ರೈತರಿಗೆ ಧೈರ್ಯ ತುಂಬಿದ ರೈತನಾಯಕಿ ಎಂ,ಪಿ,ವೀಣಾ ಮಹಾಂತೇಶ್!!

ಹೌದು, ಇತ್ತೀಚೆಗೆ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಗೆ ತುಂಗಭದ್ರಾ ನದಿಯ ದಡದಲ್ಲಿ ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದ ಭತ್ತದ ಫಸಲು ಏಕಾಏಕಿ ನದಿನೀರು ಹರಿದು ಕೊಚ್ಚಿಕೊಂಡು ಹೋದ ಕ್ಷೇತ್ರ ವ್ಯಾಪ್ತಿಯ #ತಾವರಗೊಂದಿ ಗ್ರಾಮದ ರೈತರೆಡೆಗೆ ರಾತ್ರೋರಾತ್ರಿ ದೌಡಾಯಿಸಿ ಆತ್ಮಸ್ಥೈರ್ಯ ತುಂಬಿದ ಹರಪನಹಳ್ಳಿ ಕ್ಷೇತ್ರದ ಜನಪರ ಹೋರಾಟಗಾತಿ, ಜನರ ಕಷ್ಟಕ್ಕೆ ಮಿಡಿಯುವ ಹೃದಯವಂತೆ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂ_ಪಿ_ವೀಣಾ_ಮಹಾಂತೇಶ್ ಅವರು ಇಂದು ಕೂಡ ಆ ಗ್ರಾಮಕ್ಕೆ ತೆರಳಿ ಹಾನಿಗೊಳಗಾದ ರೈತರ ಮನೆಗೆ ಭೇಟಿಕೊಟ್ಟು ಧೈರ್ಯ ತುಂಬಿದರು.
ಇಂತಹ ನಷ್ಟ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ರೈತರು ಕಷ್ಟಪಟ್ಟು ತಮ್ಮಲ್ಲಿರುವ ಅಷ್ಟೋಇಷ್ಟೋ ಜಮೀನುಗಳಲ್ಲಿ ಸಾಲಸೂಲ ಮಾಡಿ ಬೆಳೆಸಿದ ಪೈರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಯಾವುದೇ ಕಾರಣಕ್ಕೂ ಧೃತಿಗೆಡದೆ ಧೈರ್ಯವಾಗಿ ಇರಿ ನಿಮ್ಮೊಂದಿಗೆ ಸದಾ ನಾನಿರುವೆ. ನಿಮ್ಮ ಕಷ್ಟಕ್ಕೆ ಸ್ಪಂದಿಸುವೆ ಎನ್ನುವ ಭರವಸೆಯನ್ನಿತ್ತು, ರೈತರಿಗೆ ಸಾಂತ್ವನದ ನುಡಿಗಳನ್ನು ಹೇಳಿದರು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;