ಸಿಂಧನೂರು : ಪ್ರವಾದಿ ಹಜ್ರತ್ ಮಹಮ್ಮದ್ ಮುಸ್ತಫಾ ಅವರ ಜನ್ಮದಿನ ಈದ್ ಮಿಲಾದ್ ಹಬ್ಬವನ್ನು ಜಿಯೋ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಹಾಗೂ ಜಮಾಹತೆ ಇಸ್ಲಾಮಿಕ್ ಹಿಂದ್ ವತಿಯಿಂದ ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಎಲ್ಲಾ ವೃದ್ಧರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಹಣ್ಣು-ಹಂಪಲುಗಳು ಹಾಲು ಬ್ರೆಡ್ ಬಿಸ್ಕತ್ತುಗಳನ್ನು ವಿತರಿಸುವ ಮೂಲಕ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಸಂಘಟನೆಯ ಹಲವಾರು ಮಹಿಳೆಯರು ಭಾಗವಹಿಸಿದ್ದರು. ಸಫಿಯ ನಾಜಿಯಾಬೇಗಂ, ಹಮೀನಾ, ಇರ್ಫಾನ್, ಸಂಜಿಯಾ ,ಹಾಫ್ರಿ ಹಾಸಮ್ ಹಾಗೂ ಜಿಯೋ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ನ ಮಹಿಳೆಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಟಿ.ಹುಸೇನ್ ಸಾಬ್ ಎಸ್.ಐ. ಓ. ಅವರು ಸರ್ವ ಸಮಸ್ತ ಭಾರತೀಯರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ಕೋರಿ ಪ್ರವಾದಿ ಹಜರತ್ ಮಹಮ್ಮದ್ ಮುಸ್ತಫ ಅವರ ಆದರ್ಶ ಮಾದರಿಯಾದುದು ಅಲ್ಲಾಹ ತ್ಯಾಗ ಬಲಿದಾನವನ್ನು ಸ್ವೀಕರಿಸಿ ನಿಮ್ಮೆಲ್ಲರ ಕೋರಿಕೆಗಳನ್ನು ಈಡೇರಿಸಲಿ ಬದುಕಿನ ಆಸೆಗಳನ್ನು ಪೂರೈಸುವಂತಾಗಲಿ.ಕಾರುಣ್ಯ ಎನ್ನುವ ಕರುಣೆಯ ಆಶ್ರಮದ ಸೇವೆ ಪ್ರವಾದಿ ಮಹಮ್ಮದ್ ಅವರ ಆದರ್ಶವನ್ನು ಬಿಂಬಿಸುತ್ತದೆ. ಈ ಸೇವೆಗೆ ಸಮಸ್ತ ಸಿಂಧನೂರಿನ ಮುಸ್ಲಿಂ ಸಮಾಜದ ಎಲ್ಲಾ ಸಂಘಟನೆಗಳ ಸಹಕಾರ ಇದೆ, ಈ ಸೇವೆ ಅಲ್ಲಾಹನಕೃಪೆಯಿಂದ ನೆಡೆಯುವಂತಹದ್ದು ಇಂತಹ ಸೇವೆಗೆ ಪ್ರತಿಯೊಬ್ಬ ಭಾರತೀಯನು ಕೂಡ ಸಹಕಾರ ಸೇವೆ ಮಾಡುವುದರ ಮೂಲಕ ಎತ್ತಿಹಿಡಿಯಬೇಕು.ನಮ್ಮ ಧರ್ಮದ ಪವಿತ್ರ ಖುರಾನ್ ಗ್ರಂಥದಲ್ಲಿ ಪ್ರತಿಯೊಬ್ಬ ಮುಸ್ಲಿಂ ತನ್ನ ದುಡಿಮೆಯಲ್ಲಿ ಅರ್ಧದಷ್ಟು ಇಂತಹ ಅನಾಥರಿಗೆ ದಾನ ಮಾಡುವುದರ ಮೂಲಕ ಮುಸ್ಲಿಂ ಸಮುದಾಯವನ್ನು ಎತ್ತಿಹಿಡಿಯುವಂತಹ ಕೆಲಸ ಮಾಡಬೇಕು.
ಹುಟ್ಟು ಆಕಸ್ಮಿಕ ವಾದರೆ ಸಾವು ಖಚಿತವಾಗಿರುತ್ತದೆ ಇದನ್ನೆಲ್ಲ ನಾವುಗಳು ಅರ್ಥಮಾಡಿಕೊಂಡು ಜಾತಿ ಭೇದಗಳನ್ನು ಮರೆತು ನಾವೆಲ್ಲಾ ಭಾರತೀಯರು ಒಂದೇ ಎನ್ನುವ ಮನೋಭಾವನೆಯನ್ನು ಎಲ್ಲಾ ಧರ್ಮಗಳ ಜನರು ಬೆಳೆಸಿಕೊಳ್ಳಬೇಕು ದೇಶದಲ್ಲಿ ಯಾವುದೇ ದೌರ್ಜನ್ಯ ದಬ್ಬಾಳಿಕೆಗೆ ಆಸ್ಪದ ಕೊಡದೆ ಸುಂದರ ಸಮಾಜವನ್ನು ನಿರ್ಮಿಸುವ ಕಾರ್ಯ ಮಾಡಬೇಕು ಎಂದು ಅರ್ಥಪೂರ್ಣವಾಗಿ ಮಾತನಾಡಿ ನಾಡಿನ ಜನತೆಗೆ ಈದ್ ಮುಬಾರಕ್ ಹಬ್ಬದ ಶುಭಾಶಯಗಳನ್ನು ಕೋರಿದರು.
ನಂತರ ಪೀರ್ ಪಾಶಾ ಜಾಗೀರ್ ದಾರ್ ರವಡಕುಂದ ಇವರ ಸ್ನೇಹ ಬಳಗದ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಪೀರ್ ಪಾಶಾ ಜಾಗೀರ್ ದಾರ್ ಈದ್ ಮಿಲಾದ್ ಹಬ್ಬದ ದಿನದಂದು ಇಂತಹ ನೊಂದು ಬೆಂದ ಜೀವಿಗಳಿಗೆ ಮಹಾಪ್ರಸಾದವನ್ನು ವಿತರಿಸಿ ಇವರುಗಳ ಆಶೀರ್ವಾದ ತೆಗೆದುಕೊಂಡು ಇವರ ಹಿಂದಿನ ಕಷ್ಟದ ದಿನಗಳನ್ನು ಮರೆಸುವಂತಹ ಒಂದು ವೈಶಿಷ್ಟಪೂರ್ಣ ಕಾರ್ಯಕ್ರಮದ ಮೂಲಕ ನನ್ನೆಲ್ಲಾ ಸ್ನೇಹ ಬಳಗದವರು ಹಬ್ಬವನ್ನು ಇಂತಹ ಕಾರುಣ್ಯ ಕುಟುಂಬದಲ್ಲಿ ಆಚರಿಸುತ್ತಿರುವುದು ನನಗೆ ಬಹಳ ಸಂತೋಷದ ವಿಚಾರ. ಹಬ್ಬ ಹಿಂದು ಭಾವೈಕ್ಯತೆಯ ಸಂದೇಶ ಸಾರುವ ಹಬ್ಬ ಈ ಕಾರುಣ್ಯ ಕುಟುಂಬದ ಸೇವೆಯಲ್ಲಿ ನಾನು ಸದಾಕಾಲ ಭಾಗಿಯಾಗಿ ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿರುತ್ತೇನೆ ಈ ಸೇವೆ ನನಗೆ ಆತ್ಮತೃಪ್ತಿ ನೀಡುವದಲ್ಲದೆ ಮನಸ್ಸಿಗೂ ಶಾಂತಿ ಎನಿಸುತ್ತದೆ ಎಂದು ಭಾವುಕರಾಗಿ ಮಾತನಾಡಿದರು.
ನಂತರ ಮಾತನಾಡಿದ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವ ಸ್ವಾಮಿ ಹಿರೇಮಠ ಪೀರ್ ಪಾಶಾ ಜಾಗಿರ್ ದಾರ್ ಮೊನ್ನೆಯಷ್ಟೇ ಆಶ್ರಮಕ್ಕೆ 10 ನೀರಿನ ಕ್ಯಾನುಗಳನ್ನು ವಿತರಿಸಿದ್ದಾರೆ ಇಂತಹ ಹಲವಾರು ಸೇವೆಗಳನ್ನು ಕಾಣದ ಕೈಯಾಗೆ ಮಾಡುತ್ತಿದ್ದಾರೆ. ಪ್ರವಾದಿ ಮಹಮ್ಮದರ ಹಾದಿಯಲ್ಲಿ ಸಿಂಧನೂರಿನ ಸಮಸ್ತ ಮುಸ್ಲಿಂ ಬಾಂಧವರು ನಿರಂತರವಾಗಿ ಸಮಾಜ ಪರ,ಅನಾಥಪರ ಕಾರ್ಯಗಳನ್ನು ಮಾಡುತ್ತಿರುವುದು ನಾನು ಈಗಾಗಲೇ ಗಮನಿಸುತ್ತಿದ್ದೇನೆ. ಇವರುಗಳೆಲ್ಲಾ ಇಂತಹ ಸೇವೆಗಳನ್ನು ಮಾಡುವುದರಿಂದ ನಮಗೂ ಇನ್ನೂ ಹೆಚ್ಚಿನ ಸೇವೆ ಮಾಡುವಂತಹ ಹುಮ್ಮಸ್ಸು ಮೂಡುತ್ತದೆ ಎಂದು ಮುಸ್ಲಿಂ ಬಾಂಧವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಅಮ್ಜದ್ ಅಲಿ ಬಡಿಬೇಸ್ ನೂರ್ ಖಾನ್ ಸೊಹೇಲ್ ನವಾಜ್ ಬಾಷಾ ಸಾಲಗುಂದಾ ಇನ್ನು ಅನೇಕ ಮುಸ್ಲಿಂ ಸಮಾಜದ ಯುವಕರು ಉಪಸ್ಥಿತರಿದ್ದರು. ನಂತರ ಜಾಮೀಯಾ ಯೂನಿಟ್ ಕಮಿಟಿ ಗೋಮರ್ಸಿ ವತಿಯಿಂದ ಆಶ್ರಮದಲ್ಲಿನ ಎಲ್ಲಾ ವೃದ್ಧರು ಹಾಗೂ ಬುದ್ದಿಮಾಂದ್ಯರಿಗೆ ಹಾಲು ಬ್ರೆಡ್ ಬಿಸ್ಕಿಟ್ ಮತ್ತು ವಿವಿಧ ಬಗೆಯ ಹಣ್ಣುಹಂಪಲುಗಳನ್ನು ವಿತರಿಸಿ ವಿತರಿಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಮುಸ್ತಫಾ ಅಲ್ಲಾಹ ತರವ ಸಮಸ್ತ ಭಾರತೀಯರಿಗೆ ಒಳ್ಳೆಯದನ್ನು ಕಲ್ಪಿಸಿ ಸುಖ ಶಾಂತಿ ನೆಮ್ಮದಿ ಆಯುಷ್ಯ ಆರೋಗ್ಯ ವನ್ನು ಕರುಣಿಸಲೆಂದು ಬೇಡಿಕೊಂಡು ಶುಭಕೋರಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆಶ್ರಮದ ಮೇಲ್ವಿಚಾರಕರಾದ ಸುಜಾತ ಚನ್ನಬಸವ ಸ್ವಾಮಿ ಹಿರೇಮಠ ಇಂದು ನಮಗೆ ಬಿಡುವಿಲ್ಲದೆ ಮುಸ್ಲಿಂ ಬಾಂಧವರು ಬೇರೆ ಬೇರೆ ರೀತಿಗಳಲ್ಲಿ ಸಹಾಯ ಸೇವೆ ಮಾಡುತ್ತಿರುವುದು ನಮಗೆ ಅನಾಥಪರ ಸೇವೆಗೆ ಶಕ್ತಿ ತುಂಬುತ್ತಿರುವುದು ನಮ್ಮ ಮನಸ್ಸಿಗೆ ಬಹಳ ಸಂತೋಷವನ್ನುಂಟು ಮಾಡುತ್ತಿದೆ. ನಾವು ಕೂಡ ಕಾರುಣ್ಯ ಕೂಸುಗಳ ಜೊತೆ ನಮಾಜ್ ಮಾಡಿ ಮುಸ್ಲಿಂ ಬಾಂಧವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ ಸಮಸ್ತ ಭಾರತೀಯರಿಗೆ ಈದ್-ಮಿಲಾದ್ ಹಬ್ಬದ ಶುಭಾಶಯಗಳನ್ನು ಕೋರಿದೆವು ಎಂದು ಭಾವುಕರಾಗಿ ಮಾತನಾಡಿದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವ ಸ್ವಾಮಿ ಹಿರೇಮಠ ಮೇಲ್ವಿಚಾರಕರಾದ ಸುಜಾತ ಚನ್ನಬಸವಸ್ವಾಮಿ ವ್ಯವಸ್ಥಾಪಕರು ಗಳಾದ ಗೀತಾ ಕುಲಕರ್ಣಿ ರೇಖಾ ಸೇವಾಕರ್ತರು ಗಳಾದ ಪಂಪಯ್ಯ ಸ್ವಾಮಿ ಜವಳಗೇರಾ ಮಹೇಶ ವಿಶ್ವಕರ್ಮ ಮಲ್ಲಿಕಾರ್ಜುನ ಲಿಂಗಸುಗೂರು ಪಂಪಯ್ಯ ಸ್ವಾಮಿ ಹಚ್ಚೋಳ್ಳಿ ಸಂಗನಗೌಡ ಗೋನವಾರ ಶರಣು ಸ್ವಾಮಿ ಹಿರೇಮಠ ಹರೇಟನೂರು ಇನ್ನೂ ಅನೇಕ ಹಲವಾರು ಕಾರುಣ್ಯ ಆಶ್ರಮದ ಅಭಿಮಾನಿಗಳು ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
