;

ಸಿಂಧನೂರು : ಕೆಳಭಾಗದ ರೈತರು ಬೆಳೆದ ಬೆಳೆಗೆ ಸಮರ್ಪಕವಾಗಿ ನೀರು ಬಿಡುವಂತೆ ಪ್ರತಿಭಟನೆ…!!!

ಸಿಂಧನೂರು : ಕೆಳಭಾಗದ ರೈತರು ಬೆಳೆದ ಬೆಳೆಗೆ ಸಮರ್ಪಕವಾಗಿ ನೀರು ಬಿಡುವಂತೆ ಪ್ರತಿಭಟನೆ.

ಇಂದು 54ನೇ 9ಆರ್ ಕಾಲುವೆಯ ವ್ಯಾಪ್ತಿಗೆ ಬರುವ ಕೆಳಭಾಗದ ಉದ್ಬಾಳ, ಗೋಮರ್ಸಿ,ಮಾಡಶಿರವಾರ, ಅಲಬನೂರು,ಬೆಳಗುರ್ಕಿ ಇನ್ನಿತರ ಕೆಳಭಾಗದ ರೈತರು ಬಿತ್ತನೆ ಮಾಡಿದ ಜೋಳದ ಬೆಳೆಗೆ ಸಮಪರ್ಕವಾಗಿ ನೀರು ಬಿಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ತಹಶೀಲ್ದಾರರ ಕಾರ್ಯಾಲಯದ ಮುಂಭಾಗದಲ್ಲಿ ನಡೆಸಲಾಯಿತು. ಪ್ರತಿಭಟನೆ ಸಂದರ್ಭದಲ್ಲಿ ಕೆಳಭಾಗದ ಸುಮಾರು 2000 ಎಕರೆ ಜೋಳ ಬೆಳೆದ ರೈತರು ಸಮಯಕ್ಕೆ ಸರಿಯಾಗಿ ನೀರು ಮತ್ತು ವಿದ್ಯುತ್ ಸಿಗದೆ ರೈತರು ಬೆಳೆದ ಕಳೆದುಕೊಳ್ಳುವ ಭಯದಲ್ಲಿದ್ದಾರೆ 7ಗಂಟೆಯಿಂದ 12 ತಾಸು ವಿದ್ಯುತ್ ಕೊಡಬೇಕು ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಂಪನಗೌಡ ಬಾದರ್ಲಿ, ಬಸವರಾಜ ಹೀರೆಗೌಡ, ಬಾಬುಗೌಡ ಬಾದರ್ಲಿ, ಲಿಂಗಪ್ಪ ದಡೆಸೂಗೂರು, ಜಾಪರ್ ಜಹಗೀರ್ದಾರ್ ರೈತರಿಗೆ ನೀರು ವಿದ್ಯುತ್ ಕೊಡಬೇಕು ಇಲ್ಲದಿದ್ದರೆ ತಮ್ಮ ಇಲಾಖೆಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು. ನಮ್ಮನ್ನು ಪೊಲೀಸರು ಬಂಧಿಸಿದರು ನಾವು ಹೆದರುವುದಿಲ್ಲ ಎಂದು ರೈತರಿಗೆ ಧ್ವನಿಯಾಗಿ ಆಕ್ರೋಶ ಹೊರಹಾಕಿದರು.ನಂತರ ತಹಸೀಲ್ದಾರ ಮಂಜುನಾಥ ಭೋಗಾವತಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ದಶರಥರೆಡ್ಡಿ, ಪಂಪನಗೌಡ ಎಲೆಕೂಡ್ಲಿಗಿ, ರಂಗನಗೌಡ ಗೋರೆಬಾಳ, ಸಣ್ಣಭೀಮನಗೌಡ್ರು ಸೇರಿದಂತೆ ಗ್ರಾಮೀಣ ಭಾಗದಿಂದ ಆಗಮಿಸಿದ ಹಿರಿಯ ರೈತ ಮುಖಂಡರಾದ ನಾಗಪ್ಪ ಗೋಮರ್ಸಿ, ಶರಣಪ್ಪ, ರಾಮಯ್ಯ ಜವಳಗೇರಾ, ಮಲ್ಲಿಕಾರ್ಜುನ, ಬಸವರಾಜ್, ಗಾದಿಲಿಂಗಪ್ಪ, ನಾರಾಯಣಪ್ಪ ಮನೋಜ್, ಮುದಿಯಪ್ಪ, ಶಿವರಾಜ್ ಸಾಸಲಮರಿ, ಮಹಿಳೆಯರು, ಯುವಕರು ಸೇರಿದಂತೆ ಇನ್ನು ಮುಂತಾದವರು ಭಾಗವಹಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;