ಸಿಂಧನೂರು: ಕಾರ್ಪೊರೇಟ್ ಕಂಪನಿಗಳ ಪರವಾದ ಕಾಯ್ದೆಗಳು ವಾಪಾಸಾಗಲಿ ಡಿ.ಎಚ್.ಕಂಬಳಿ.
ರೈತರ ಕೆಂಗಣ್ಣಿಗೆ ಗುರಿಯಾದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯು 10 ತಿಂಗಳು ಪೂರೈಸಿದ ಹಿನ್ನೆಲೆ ಸೋಮವಾರ ಭಾರತ್ ಬಂದ್ ಹೋರಾಟಕ್ಕೆ ಕರೆ ನೀಡಲಾಗಿತ್ತು.ಇಂದು ಸಿಂಧನೂರು ನಲ್ಲಿ ಬೆಳಗ್ಗೆ ಪ್ರತಿಭಟನಾನಿರತ ಕಾರ್ಯಕರ್ತರು ಗಾಂಧಿ ಸರ್ಕಲ್, ಬಸವ ಸರ್ಕಲ್ , ಟಿಪ್ಪು ಸುಲ್ತಾನ್ ಸರ್ಕಲ್, ಅಶೋಕ್ ಭವನ ಹೀಗೆ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿಸಿದರು. ಸರ್ಕಾರಿ ಕಛೇರಿಗಳು ,ಆಸ್ಪತ್ರೆ, ಔಷಧಿ ಅಂಗಡಿಗಳು,ಸಾರಿಗೆ ವ್ಯವಸ್ಥೆ ಎಂದಿನಂತೆ ನಡೆದವು. ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಇಂದು ನಗರದ ಮಿನಿ ವಿಧಾನಸೌಧದ ಮುಂಭಾಗ ಸಂಯುಕ್ತ ಕಿಸಾನ್ ಮೋರ್ಚಾ ರೈತವಿರೋಧಿ ಕೃಷಿ ಕಾನೂನುಗಳ ರದ್ಧತಿ ಹೋರಾಟ ಸಮಿತಿ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಎಚ್ ಕಂಬಳಿ ದೇಶದ ರೈತರ ಪಾಲಿಗೆ ಮರಣ ಶಾಸನವಾಗಬಲ್ಲ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು, ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಕೈಬಿಡಬೇಕು ಅಡಿಗೆ ಅನಿಲ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಬೇಕು, ಖಾಸಗೀಕರಣದಿಂದ ನಿರುದ್ಯೋಗಿಗಳು ಹೆಚ್ಚಾಗಿವೆ, ಮೀಸಲಾತಿ ಆಕಾಶಗಳು ಕಡಿತವಾಗಿದೆ, ದೇಶದ ಕಾರ್ಮಿಕ ಕಾನೂನುಗಳನ್ನು ಕಾರ್ಪೊರೇಟ್ ಕಂಪನಿಗಳ ಪರವಾಗಿ ಬದಲಾಯಿಸಿದೆ.
ಈ ಕೃಷಿ ಕಾಯ್ದೆಗಳ ತಿದ್ದುಪಡಿಗಳು ಪೂರ್ವ ನಿಯೋಜಿತವಾಗಿ ಅತ್ಯಂತ ಮೋಸದಿಂದ ಕೂಡಿವೆ. ಅವುಗಳಲ್ಲಿ ಕೃಷಿ ಕ್ಷೇತ್ರದ ಭೂಮಿ, ನೀರು,ಬೀಜ,ಗೊಬ್ಬರ, ಉತ್ಪನ್ನ ಮಾರುಕಟ್ಟೆ ಎಲ್ಲವನ್ನು ಕಾರ್ಪೊರೇಟರ್ ತೆಕ್ಕೆಗೆ ಒಪ್ಪಿಸುವ ಹುನ್ನಾರ ಆಗಿದೆಯೆ ಹೊರತು ರೈತರನ್ನು ರಕ್ಷಿಸುವ ಯಾವುದೇ ಅಂಶಗಳಿಲ್ಲ ಎಂದರು.
ನಂತರ ಮಾತನಾಡಿದ ಬಸನಗೌಡ ಬಾದರ್ಲಿ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಯಿಂದ ಅಗತ್ಯ ವಸ್ತುಗಳನ್ನು ಖರೀದಿಸುವ, ಸಂಗ್ರಹಿಸುವ ಮತ್ತು ಬೆಲೆ ನಿಗದಿ ಮೇಲೆ ಸರಕಾರದ ಸಂಪೂರ್ಣ ನಿಯಂತ್ರಣವಿಲ್ಲ ವಾಗುವುದರಿಂದ ಕೆಲವೇ ಕಂಪನಿಗಳು ಮಾರುಕಟ್ಟೆ ಮೇಲೆ ಏಕಸ್ವಾಮ್ಯ ಸಾಧಿಸುತ್ತವೆ.ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಂಬಲ ಬೆಲೆ ಒದಗಿಸುವ ಕಾನೂನುಬದ್ಧಗೊಳಿಸುವ ಬದಲು,ಇದ್ದ ವ್ಯವಸ್ಥೆಯನ್ನು ನಾಶ ಪಡಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಭೂಸುಧಾರಣೆ ಕಾಯ್ದೆ ತಿದ್ದುಪಡಿ ತಂದಿದ್ದರಿಂದ ಸಣ್ಣ ಅತಿಸಣ್ಣ ರೈತರು ಕೂಲಿಕಾರರಾಗುವ ಪರಿಸ್ಥಿತಿ ಉಂಟಾಗಿದೆ ಎಂದರು.
ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಗೋರೆಬಾಳ, ಶೆಕ್ಷಾಖಾದ್ರಿ,ನಾಗರಾಜ ಪೂಜಾರ್, ಶಂಕರ್ ಗುರುಕಾರ , ಬಸವರಾಜ್ ಬಾದರ್ಲಿ, ಅಮೀನ್ ಪಾಶ ದಿದ್ದಿಗೆ, ದಾವಲಸಾಬ್ ದೊಡ್ಡಮನಿ ,ಶಿವಕುಮಾರ್ ಜವಳಿ, ಮಂಜುನಾಥ್, ರಮೇಶ್ ಪಾಟೀಲ ಬೇರಿಗಿ, ನರಸಿಂಹಪ್ಪ ಜನತಾ ಕಾಲೋನಿ ರಾಮು ಪುಲದಿನ್ನಿ, ನಿರುಪಾದಿ ಸಾಸಲಮರಿ,ಇನ್ನೂ ಅನೇಕ ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಆಟೋ ಚಾಲಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ, ಜೈ ಭೀಮ ಗರ್ಜನೆ ,ಮಹಿಳಾ ಸಂಘಟಕರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
