ವಿಜಯನಗರ ಜಿಲ್ಲೆ. ಕೂಡ್ಲಿಗಿ.*
*ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕರೋನಾ ಲಸಿಕೆ ಅಭಿಯಾನದ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.* ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸದಸ್ಯರು ಆರೋಗ್ಯ ಇಲಾಖೆ ಕಂದಾಯ ಇಲಾಖೆ ಯವರು ಭಾಗವಹಿಸಿ ಕರೋನವೈರಸ್ ಹರಡುವುದರ ಕುರಿತು ಜನರಲ್ಲಿಜಾಗ್ರುತಿ ಮೂಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌರಮ್ಮನವರ ಮಾತನಾಡಿ ಪ್ರತಿಯೊಬ್ಬರು ಕೊರೋನಾ ಚುಚ್ಚುಮದ್ದನ್ನು ಹಾಕಿಸಿಕೊಳ್ಳಿ.ಉಚಿತವಾಗಿ ನೀಡಲಾಗುತ್ತಿದೆ, 18 ವರ್ಷ ಮೇಲ್ಪಟ್ಟ ಅವರೆಲ್ಲರೂ ಈ ಸದುಪಯೋಗವನ್ನು ಪಡೆದುಕೊಂಡು ಕೋರನ ಹೆಮ್ಮಾರಿಯನ್ನು ಹೊಡೆದೋಡಿಸಿ ಎಂದು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೇಳಿದರು
ತಿಮ್ಮನಹಳ್ಳಿ ಆರೋಗ್ಯ ಉಪಕೇಂದ್ರದ ಲತೀಫ್ ಮಾತಾಡಿ ಕರೋನವೈರಸ್ ವಿನಿಂದ ರಕ್ಷಣೆ ಮಾಡಿಕೊಳ್ಳಲು ಪ್ರತಿಯೊಬ್ಬರು ಉಚಿತವಾಗಿ ನೀಡಲಾಗುತ್ತಿರುವ ಕರೋನ ಚುಚ್ಚು ಮದ್ದನ್ನು ಹಾಕಿಸಿಕೊಳ್ಳಿ. ಲಸಿಕೆ ಕಾರ್ಯಕ್ರಮವನ್ನು ರಾಜ್ಯದ್ಯಂತ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕರೋನಾ ನಿಯಮಗಳನ್ನು ಪಾಲಿಸಿಲಸಿಕೆಯನ್ನು ತಪ್ಪದೇ ಹಾಕಿಕೊಳ್ಳಿ ಎಂದು ಸಾರ್ವಜನಿಕರಿಗೆ ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕು ಅಧಿಕಾರಿಗಳು ಶಾಲೆಯ ಶಿಕ್ಷಕರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಕಂದಾಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು. ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮೂಡಿಸಿದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
